ಜಮ್ಮು-ಕಾಶ್ಮೀರದಲ್ಲಿ ನಿಲ್ಲದ ಉಗ್ರರ ಉಪಟಳ; ಶೋಪಿಯಾನ್ ಎನ್ ಕೌಂಟರ್ ಗೆ ಐವರು ಉಗ್ರರ ಸಾವು
ಉಗ್ರರ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಸುಗೂ ಗ್ರಾಮದಲ್ಲಿ ಎನ್ ಕೌಂಟರ್ ಆರಂಭವಾಗಿತ್ತು.
Team Udayavani, Jun 10, 2020, 3:21 PM IST
ಶ್ರೀನಗರ್:ಕಳೆದ 24ಗಂಟೆಯಲ್ಲಿ ಒಂಬತ್ತು ಮಂದಿ ಉಗ್ರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಯ ಎನ್ ಕೌಂಟರ್ ಗೆ ಎಲ್ಲಾ ಐವರು ಉಗ್ರರು ಹತ್ಯೆಗೀಡಾಗಿರುವುದಾಗಿ ವರದಿ ತಿಳಿಸಿದೆ.
ಜಮ್ಮು-ಕಾಶ್ಮೀರ್ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ಮಾತನಾಡಿದ್ದು, ಬುಧವಾರ ಬೆಳಗ್ಗೆ ಭದ್ರತಾ ಪಡೆ ಅಡಗಿ ಕುಳಿತ ಉಗ್ರರ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಸುಗೂ ಗ್ರಾಮದಲ್ಲಿ ಎನ್ ಕೌಂಟರ್ ಆರಂಭವಾಗಿತ್ತು. ಮೊದಲು ಮೂವರು ಉಗ್ರರು ಭದ್ರತಾಪಡೆಯ ಪ್ರತಿದಾಳಿಯಲ್ಲಿ ಸಾವನ್ನಪ್ಪಿದ್ದರು ಎಂದು ವರದಿ ಹೇಳಿದೆ.
ಸಾವನ್ನಪ್ಪಿರುವ ಉಗ್ರರ ಗುರುತನ್ನು ಇನ್ನಷ್ಟೇ ತಿಳಿದುಬರಬೇಕಾಗಿದೆ. ಸೇನೆ ಮತ್ತು ಜಮ್ಮು, ಕಾಶ್ಮೀರ್ ಪೊಲೀಸರು ಖಚಿತ ಮಾಹಿತಿ ಮೇರೆಗೆ ಉಗ್ರರು ಅಡಗಿ ಕುಳಿತ ಮಾಹಿತಿ ಮೇರೆಗೆ ಸುಗೂ ಗ್ರಾಮ ಸುತ್ತುವರಿದು ಕಾರ್ಯಾಚರಣೆ ಆರಂಭಿಸಿದ್ದರು.
ಭದ್ರತಾ ಪಡೆಯ ಪ್ರತಿದಾಳಿಯಲ್ಲಿ ಐವರು ಉಗ್ರರು ಬಲಿಯಾಗಿದ್ದು, ಕಳೆದ ಒಂದು ವಾರದಲ್ಲಿ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಮೂರನೇ ಅತೀ ದೊಡ್ಡ ಎನ್ ಕೌಂಟರ್ ಇದಾಗಿದೆ ಎಂದು ಸೇನಾಮೂಲಗಳು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.