ಫ್ಲಿಪ್ಕಾರ್ಟ್ ಷೇರು ಸೇಲ್?
Team Udayavani, Feb 1, 2018, 6:45 AM IST
ಹೊಸದಿಲ್ಲಿ: ದೇಶದಲ್ಲಿ ಇ-ಕಾಮರ್ಸ್ ಶುರು ಮಾಡಿರುವ ಬೆಂಗಳೂರಿನ ಫ್ಲಿಪ್ಕಾರ್ಟ್ನ ಸಣ್ಣ ಪ್ರಮಾಣದ ಷೇರನ್ನು ಅಮೆರಿಕದ ಚಿಲ್ಲರೆ ಮಾರುಕಟ್ಟೆ ದೈತ್ಯ ವಾಲ್ಮಾರ್ಟ್ ಖರೀದಿಸಲಿದೆ. ಮಾರ್ಚ್ನಲ್ಲಿ ಈ ಬಗೆಗಿನ ಒಪ್ಪಂದ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ವಾಲ್ಮಾರ್ಟ್ ಸಿಇಒ ಡಾಗ್ ಮ್ಯಾಕ್ಮಿಲನ್ ಅವರನ್ನು ಒಳಗೊಂಡ ನಿಯೋಗ ಕಳೆದ ವಾರ ಬೆಂಗಳೂರಿನಲ್ಲಿರುವ ಫ್ಲಿಪ್ಕಾರ್ಟ್ ಪ್ರಧಾನ ಕಚೇರಿಗೆ ಭೇಟಿ ನೀಡಿ, ಈ ಬಗ್ಗೆ ಮಾತುಕತೆ ನಡೆಸಿತ್ತು. ಅವರ ಜತೆಗೆ ವಾಲ್ಮಾರ್ಟ್ ಇ-ಕಾಮರ್ಸ್ನ ಸಿಇಒ ಮಾರ್ಕ್ ಲೋರ್ ಕೂಡ ಇದ್ದರು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಲು ವಾಲ್ಮಾರ್ಟ್ ನಿರಾಕರಿಸಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿಕೊಂಡಿದೆ.
ಖರೀದಿ ಪ್ರಮಾಣ ಎಷ್ಟು?: ಅಮೆರಿಕದ ಚಿಲ್ಲರೆ ಮಾರುಕಟ್ಟೆ ದೈತ್ಯ ಶೇ.15-ಶೇ.20ರಷ್ಟು ಷೇರುಗಳನ್ನು ಖರೀದಿ ಮಾಡಲಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಅಮೆರಿಕದ ಮತ್ತೂಂದು ಪ್ರಮುಖ ಇ-ಕಾಮರ್ಸ್ ಕಂಪನಿ ಅಮೆಜಾನ್ ವಿರುದ್ಧ ಭಾರತದಲ್ಲಿ ಪ್ರಬಲ ಪೈಪೋಟಿ ನೀಡಲು ಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಪ್ರಾಥ ಮಿಕ ಮತ್ತು ದ್ವಿತೀಯ ಹಂತದ ಮಾರು ಕಟ್ಟೆಯೂ ಸೇರಿದೆ. ಇನ್ನೂ ಗಮನಾರ್ಹ ವಿಚಾರವೆಂದರೆ ಕಳೆದ ಐದು ವರ್ಷಗಳಿಂದ ವಾಲ್ಮಾರ್ಟ್ 15 ಸ್ಟಾರ್ಟ್ ಅಪ್ಗ್ಳ ಖರೀದಿ ಮಾಡಿದೆ. ಕಳೆದ ವಾರ ಜಪಾನ್ನ ಇ-ಕಾಮರ್ಸ್ ಕಂಪನಿ ರಾಕುಟೆನ್ ಅನ್ನು ಖರೀದಿ ಮಾಡಿತ್ತು. ಅಮೆಜಾನ್ ಕೂಡ ಹೋಲ್ ಫುಡ್(ಗಜಟlಛಿ ಊಟಟಛs )ಅನ್ನು ಕಳೆದ ವರ್ಷ ಖರೀದಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.