ಪ್ರವಾಹ ಪೀಡಿತ ರೈತರ ನೆರವಿಗೆ 10,000 ಕೋಟಿ ರೂ.
ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.
Team Udayavani, Oct 15, 2021, 2:09 PM IST
ಮುಂಬಯಿ: ರಾಜ್ಯದ ಪ್ರವಾಹ ಸಂತ್ರಸ್ತ ರೈತರಿಗೆ ಠಾಕ್ರೆ ಸರಕಾರವು ಬೃಹತ್ ಮೊತ್ತದ ನೆರವು ಘೋಷಿಸಿದೆ. ಬುಧವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಲೋಕೋಪಯೋಗಿ ಸಚಿವ ಅಶೋಕ್ ಚವಾಣ್ ಉಪಸ್ಥಿತಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರವಾಹ ಪೀಡಿತ ರೈತರಿಗೆ 10,000 ಕೋಟಿ ರೂ. ಘೋಷಿಸಲಾಗಿದೆ.
ರಾಜ್ಯದಲ್ಲಿ 2021ರ ಜೂನ್‌ನಿಂದ ಅಕ್ಟೋಬರ್ ನಡುವೆ ಸಂಭವಿಸಿದ ಪ್ರವಾಹ ಮತ್ತು ಭಾರೀ ಮಳೆಯಿಂದಾಗಿ ಸುಮಾರು 55 ಲಕ್ಷ ಹೆಕ್ಟೇರ್ ಗಳಿಗಿಂತ ಹೆಚ್ಚು ಬೆಳೆ ಹಾನಿಯಾಗಿದೆ. ಆದ್ದರಿಂದ ಎನ್‌ಡಿಆರ್‌ಎಫ್ ಮಾನದಂಡಗಳಿಗಾಗಿ ಕಾಯದೆ ನೈಸರ್ಗಿಕ ವಿಕೋಪದಿಂದ ಹಾನಿಗೊಳಗಾದ ರೈತರಿಗೆ ನೆರವು ಘೋಷಿಸಿದೆ. ಈ ನೆರವು 2 ಹೆಕ್ಟೇರ್ ಮಿತಿಯವರೆಗೆ ಒದಗಿಸಲಾಗುವುದು ಎಂದು ಸರಕಾರ ಹೇಳಿದೆ.
ಭಡ್ತಿ: ವಾದ ಮಂಡಿಸಲು ನಿರ್ಧಾರ ರಾಜ್ಯ ಸರಕಾರವು ಭಡ್ತಿ ಮೀಸಲಾತಿಯನ್ನು ಕಾಯ್ದುಕೊಳ್ಳುವ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ತನ್ನ ವಾದವನ್ನು ಮಂಡಿಸಲು ನಿರ್ಧರಿಸಿದೆ. ಭಡ್ತಿಯಲ್ಲಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ಲ್ಲಿ ವಿಶೇಷ ಅನುಮತಿ ಅರ್ಜಿ ಸಂಖ್ಯೆ 28306/2017ರಲ್ಲಿ ಸರಕಾರದ ನಿಲುವಿನ ಬಗ್ಗೆ ಬುಧವಾರ ನಡೆದ ಸಭೆಯಲ್ಲಿ ಚರ್ಚಿಸಿ ಹೆಚ್ಚುವರಿ ಅμದವಿತ್ ಸಲ್ಲಿಸಲು ನಿರ್ಧರಿಸಲಾಯಿತು.
ನೇರ ಸೇವೆಯಲ್ಲಿ ಹಿಂದುಳಿದ ವರ್ಗಗಳ ಭಡ್ತಿ ಮತ್ತು ಪ್ರಾತಿನಿಧ್ಯದ ಮಾಹಿತಿ ಸಂಗ್ರಹಿಸುವ ಮೂಲಕ ಸರಕಾರಿ ಸೇವೆಯಲ್ಲಿ ಮೀಸಲಾತಿ ಖಚಿತಪಡಿಸಿಕೊಳ್ಳಲು ರಚಿಸಲಾದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಪ್ರಸ್ತುತಪಡಿಸಿದ ವರದಿಯ ಬಗ್ಗೆಯೂ ಚರ್ಚಿಸಲಾಯಿತು.
ಮಾದಕ ದ್ರವ್ಯ ತಡೆ ಕ್ರಿಯಾ ಯೋಜನೆ ಸಾಮಾಜಿಕ ನ್ಯಾಯ ಇಲಾಖೆಯು ಕೇಂದ್ರದ ಮಾದಕ ದ್ರವ್ಯ ತಡೆ ಕ್ರಿಯಾ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಿದೆ. ಮಾದಕ ವ್ಯಸನ ತಡೆಗೆ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.
ಮಾದಕ ವ್ಯಸನದ ತಡೆಗಟ್ಟುವಿಕೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್‌ಎಪಿಡಿಡಿಆರ್) ಶೇ.100 ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಈ ಯೋಜನೆ 2023ರ ವರೆಗೆ ಜಾರಿಯಲ್ಲಿರುತ್ತದೆ. ಯೋಜನೆಗೆ 13.70 ಕೋಟಿ ರೂ.ಗಳ ಮೊತ್ತ ಮಂಜೂರು ಮಾಡಲಾಗಿದೆ. ಇದನ್ನು ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಇಲಾಖೆ ಮೂಲಕ ಜಾರಿಗೆ ತರಲಾಗುವುದು.
ಸಹಕಾರಿ ಸಂಘಗಳ ಸದಸ್ಯರ ನಿಯಮಿತ ತಿಳಿವಳಿಕೆಗಾಗಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಸರಕಾರ ನಿರ್ಧರಿಸಿದೆ. ಮಹಾರಾಷ್ಟ್ರ ಸಹಕಾರ ಸಂಘಗಳ ಕಾಯ್ದೆ, 1960ರ ಸೆಕ್ಷನ್ 73ಅ ಯ ಉಪವಿಭಾಗ (3)ಕ್ಕೆ ತಿದ್ದುಪಡಿ ತರಲು ನಿರ್ಧಾರ ತೆಗೆದುಕೊಳ್ಳಲಾಯಿತು
ಕಲಾವಿದರಿಗೆ ನೆರವು
ಕೊರೊನಾ ಹಿನ್ನೆಲೆಯಲ್ಲಿ ಕಲಾವಿದರು ಮತ್ತು ಸಂಸ್ಥೆಗಳಿಗೆ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯು ಹಣಕಾಸಿನ ನೆರವು ನೀಡಲು ನಿರ್ಧರಿಸಿದೆ. ಕೊರೊನಾದಿಂದ ಸಂಸ್ಕೃತಿ ಮತ್ತು ಕಲೆಯ ಕ್ಷೇತ್ರದಲ್ಲಿ ವಿವಿಧ ಕಲಾವಿದರಿಗೆ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ರಾಜ್ಯದಲ್ಲಿ 56,000 ಕಲಾವಿದರಿದ್ದು, ಕಲಾವಿದರಿಗೆ ತಲಾ 5,000 ರೂ. ಗಳಂತೆ ಒಟ್ಟು 28 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು, ಪ್ರಾಯೋಗಿಕ ಕಲೆಗಳ ಕ್ಷೇತ್ರದಲ್ಲಿ 847 ಸಂಸ್ಥೆಗಳಿಗೆ ಒಟ್ಟು 34 ಕೋಟಿ ರೂ. ಆರ್ಥಿಕ ನೆರವು ಒದಗಿಸಲು ಮತ್ತು ಸ್ಥಳೀಯ ಜಾನಪದ ಕಲಾವಿದರ ಆಯ್ಕೆ ಪ್ರಕ್ರಿಯೆಗಾಗಿ 1 ಕೋಟಿ ರೂ.ಗಳ ಆಡಳಿತಾತ್ಮಕ ವೆಚ್ಚವನ್ನು ಸಚಿವ ಸಂಪುಟ ಅನುಮೋದಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
Uddhav Thackeray: ಚಂದ್ರಚೂಡ್ ಜಡ್ಜ್ ಬದಲು ಅಧ್ಯಾಪಕರಾಗಿದ್ದರೆ ಖ್ಯಾತಿ ಸಿಗುತ್ತಿತ್ತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.