ಕೇರಳ ಪುನರುತ್ಥಾನ ಪ್ರಕ್ರಿಯೆಗೆ ಚಾಲನೆ:ದಶಕ‌ ಬೇಕು ದೇವರ ನಾಡು ಕಟ್ಟಲು


Team Udayavani, Aug 22, 2018, 9:23 AM IST

19.jpg

ತಿರುವನಂತಪುರ: “ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ’ ಎಂಬ ಮಾತಿನಂತೆ ಶತಮಾನಗಳ ಇತಿಹಾಸ ಹೊಂದಿರುವ ಕೇರಳದ ಪ್ರಕೃತಿ ಸೌಂದರ್ಯವನ್ನು, ಅಲ್ಲಿನ ಜನಜೀವನವನ್ನು ಶತಮಾನದ ಮಹಾಮಳೆಯೊಂದು ಇನ್ನಿ ಲ್ಲ ದಂತೆ ನಾಶ ಮಾಡಿರುವ ಬೆನ್ನಲ್ಲೇ ಈಗ ಅಲ್ಲಿ ಆ ರಾಜ್ಯದ ಪುನರುತ್ಥಾನಕ್ಕಾಗಿ ಪ್ರಯತ್ನಗಳು ಆರಂಭವಾಗಿವೆ. 

ಮಳೆ ಹಾಗೂ ನೆರೆಯ ಆರ್ಭಟ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಈ ಪ್ರಯತ್ನಗಳಿಗೆ ಕೈಹಾಕಲಾಗಿದೆಯಾದರೂ ಇದೊಂದು ಬೆಟ್ಟದೆತ್ತರದ ಕೆಲಸವಾಗಿ ಪರಿಣಮಿಸಿದೆ.ಹಾ ಗಾಗಿ ಇಡೀ ರಾಜ್ಯಕ್ಕೆ ಮತ್ತೆ “ದೇವರ ನಾಡಿನ ಸ್ಪರ್ಶ’ ನೀಡಲು ಒಂದು ದಶಕವಾದರೂ ಬೇಕೆಂದು ಅಂದಾಜಿಸಲಾಗಿದೆ. 

ಸದ್ಯದ ಮಟ್ಟಿಗೆ, ಇಡುಕ್ಕಿ, ಮಲಪ್ಪುರಂ, ಕೊಟ್ಟಾಯಂ, ಎರ್ನಾಕುಳಂನಲ್ಲಿ ನೆರೆ ಹಾವಳಿ ಇಳಿ ದಿದೆ. 10,000 ಕಿ.ಮೀ.ಗೂ ಹೆಚ್ಚು ರಸ್ತೆ ಹಾಳಾಗಿದ್ದು, ನೂರಾರು ಸೇತುವೆಗಳು ನೆಲಸಮವಾಗಿವೆ. ಒಟ್ಟಾರೆಯಾಗಿ, ಈವರೆಗೆ 20,000 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ. ಇದೇ ವೇಳೆ,ಜಲಾವೃತವಾಗಿರುವ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು 220 ಕೋಟಿ ರೂ. ನಷ್ಟ ವಾ ಗಿದೆ ಎಂದು ಕೊಚ್ಚಿನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಸಂಸ್ಥೆ (ಸಿಐಎಎಲ್‌) ತಿಳಿಸಿದೆ.

ಹಾವಿನ ಕಾಟ
ಅಳಪ್ಪುಳ ಜಿಲ್ಲೆಯ ಪಂಡನಾಡ್‌, ಚೆಂಗನೂರ್‌ ಪ್ರಾಂತ್ಯಗಳಲ್ಲಿ ಮನೆಗೆ ಮರಳಿದ ಕೆಲವರಿಗೆ ಪ್ರವಾಹದ ನೀರಿ ನೊಂದಿಗೆ ಬಂದು ಸೇರಿ ಕೊಂಡಿದ್ದ ಹಾವುಗಳು ಕಚ್ಚಿ ರುವ ಪ್ರಕರಣಗಳು ವರದಿಯಾಗಿವೆ. ಜತೆಗೆ ಅನೇಕ ಜಿಲ್ಲೆಗಳಲ್ಲಿ ಸತ್ತ ಪ್ರಾಣಿಗಳ ಕಳೇಬರಗಳಿಂದ ಹೊರಹೊಮ್ಮುತ್ತಿ ರುವ ದುರ್ನಾತ ದಿಂದಾಗಿ ಒಂದರೆಡು ಕ್ಷಣ ನಿಲ್ಲಲೂ ಆಗದಂಥ  ಸ್ಥಿ ತಿಯಿದೆ. 

ತರೂರ್‌ಗೆ ಮುಖಭಂಗ
ಕೇರಳಕ್ಕೆ ಆರ್ಥಿಕ ಸಹಾಯ ನೀಡುವಂತೆ ತಾವು ವಿಶ್ವ ಸಂಸ್ಥೆ  ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಅಧಿ ಕಾ ರಿ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿ ಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ತರೂರ್‌ ಹೇಳಿಕೆಗೆ ತೀಕ್ಷ್ಣ ಪ್ರತಿ ಕ್ರಿಯೆ ನೀಡಿರುವ ಕೇರಳದ ಸಿಎಂ ಕಚೇರಿ, ತರೂರ್‌ ಅವರನ್ನು ಕೇರಳದ ಪ್ರತಿನಿಧಿ ಯಾಗಿ ಎಲ್ಲೂ ಕಳಿಸಿಲ್ಲ. ಹೀಗೆ ಸ್ವಯಂಪ್ರೇರಿತ ವಾಗಿ ಸರ್ಕಾರದ ಪರ ಯಾರನ್ನಾದರೂ ಸಂಧಿ ಸಲು ಅವರಿಗೆ ಅಧಿಕಾರವಿಲ್ಲ ಎಂದಿದೆ. ಸಿಎಂ ಕಚೇರಿಯ ಪ್ರಕ ಟಣೆ ಹೊರಬೀಳುತ್ತಿ ದ್ದಂತೆ ಬಿಜೆಪಿ ಸೇರಿದಂತೆ ಇತರ ವಿಪಕ್ಷ ಗಳೂ ತರೂರ್‌ ಅವ ರನ್ನು ಟೀಕಿಸಲಾರಂಭಿಸಿವೆ. 

ಸಂಭಾವನೆ ನಿರಾಕರಿಸಿದ ಬೆಸ್ತರು
ನಿರಾಶ್ರಿತರ ಪರಿ ಹಾರ ಕಾರ್ಯಗಳಿಗೆ ಸೇನೆ ಯೊಂದಿಗೆ ಕೈ ಜೋಡಿ ಸಿದ್ದ ಪ್ರತಿ ಯೊಬ್ಬ ಮೀನು ಗಾ ರನ ದೋಣಿಗೆ ರಾಜ್ಯ ಸರ್ಕಾರ ನೀಡಲು ನಿರ್ಧರಿಸಿರುವ 3,000 ರೂ. ಸಂಭಾವನೆಯನ್ನು ಮೀನುಗಾರರ ತಂಡದ ನೇತೃತ್ವ ವಹಿಸಿದ್ದ ಕೊಚ್ಚಿ ಮೂಲದ ಖಾಯಿಸ್‌ ಮೊಹ ಮ್ಮದ್‌ ನಿರಾಕರಿಸಿದ್ದಾರೆ. ನೂರಾರು ಜನರನ್ನು ಕಾಪಾಡಿದ ಆತ್ಮ ತೃಪ್ತಿ ಇರುವುದರಿಂದ ಹಣ ಬೇಡ ಎಂದು ಅವರು ನಯವಾಗಿ ತಿರಸ್ಕರಿಸಿದ್ದಾರೆ. 

ಜಿಡಿಪಿ ನಿಯಮ ಸಡಿಲಿಕೆಗೆ ಆಗ್ರಹ
ಕೇರ ಳದ ಒಟ್ಟಾರೆ ಉತ್ಪನ್ನ (ಜಿಡಿಪಿ) ಆಧರಿಸಿ ಕೇಂದ್ರ ಸರ್ಕಾರ ನೀಡುತ್ತಿದ್ದ ಸಾಲದ ನಿಯಮ ಬದಲಾವಣೆ ಮಾಡ ಬೇಕೆಂದು ಪಿಣರಾಯಿ ಆಗ್ರಹಿಸಿದ್ದಾರೆ. ಸದ್ಯಕ್ಕೆ ಕೇರಳಕ್ಕೆ ನೀಡುವ ಸಾಲವನ್ನು ಶೇ. 3ರ ಜಿಡಿಪಿಯಲ್ಲಿ ನೀಡಲಾಗುತ್ತಿದ್ದು, ಇದನ್ನು ಶೇ.4.3ಕ್ಕೆ ಹೆಚ್ಚಿಸ‌ಬೇಕೆಂದು ಮನವಿ ಮಾಡಿದ್ದಾರೆ. ಹೀಗೆ ಮಾಡಿದಲ್ಲಿ ಮಾರು ಕ ಟ್ಟೆ ಯಿಂದ ಕೇರ ಳಕ್ಕೆ 10,500 ಕೋಟಿ ರೂ. ಹಣ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

ಅಯ್ಯಪ್ಪ ದರ್ಶನ ಇಲ್ಲ?
ಪಂಪಾ ನದಿಯ ಪ್ರವಾಹದಿಂದಾಗಿ ಈ ಬಾರಿ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ಕ್ಷೇ ತ್ರಕ್ಕೆ ಭೇಟಿ ನೀಡ ಬಾರ ದೆಂದು ದೇಗುಲದ ಆಡಳಿತ ಮಂಡಳಿ ಕೋರಿದೆ. ಮತ್ತೂಂದೆಡೆ ಪಂಪಾ ನದಿಯ ಪ್ರವಾಹದಿಂದಾಗಿ ಕಿ.ಮೀಗಳಷ್ಟು ರಸ್ತೆ ಹಾಳಾಗಿದೆಯಲ್ಲದೆ, ಶ್ರೀಕ್ಷೇತ್ರಕ್ಕೆ ಬರುವ ರಸ್ತೆಗಳಲ್ಲಿ ಮರಗಳು ಬುಡಮೇಲಾಗಿವೆ ಎಂದು ಮಂಡಳಿ ತಿಳಿ ಸಿದೆ. 

ಬಕ್ರೀದ್‌, ಓಣಂ ಕಳೆ ಇಲ್ಲ 
22ರಂದು ಮುಸ್ಲಿಮರ ಹಬ್ಬವಾದ ಬಕ್ರೀದ್‌, 25ರಂದು ಹಿಂದೂಗಳ ಹಬ್ಬವಾದ “ಓಣಂ’ ಇದೆ. ಆದರೆ, ಜನರಲ್ಲಿ ಈ ಹಬ್ಬಗಳನ್ನು ಆಚರಿಸುವ ಶಕ್ತಿಯಿಲ್ಲ. ರೈತರ ಸುಗ್ಗಿ ಹಬ್ಬವೆಂದೇ ಪರಿಗಣಿಸಲಾಗುವ “ಓಣಂ’ ಕೇರಳದ ಸಂಸ್ಕೃತಿಯ ಪ್ರತೀಕವಾಗಿದೆ.ಆದರೆ,ಪ್ರವಾಹದ ಭೀಕ ರತೆ ಈ ಹಬ್ಬಗಳ ಕಳೆ ಹಾಗೂ ಉತ್ಸಾಹಗಳನ್ನು ಕಿತ್ತು ಕೊಂಡಿದೆ. 

ನಿಯಮ ಸಡಿಲಿಕೆ
ಸಂತ್ರಸ್ತರಿಗೆ ತನ್ನ ವಿಮೆ ಸೌಲಭ್ಯಗಳು ಸುಲಭವಾಗಿ ಸಿಗುವ ದೃಷ್ಟಿ ಯಿಂದ ಕೆಲ ನಿಯಮಗಳನ್ನು ಎಲ್‌ಐಸಿ ಕೈಬಿಟ್ಟಿದೆ. ಮರಣ ಪ್ರಮಾಣ ಪತ್ರ, ತಡವಾಗಿ ಮಾಡಲಾಗುವ ಕ್ಲೇಮುಗಳ ಮೇಲೆ ಶುಲ್ಕ ವಿಧಿಸುವುದು ಮುಂತಾದ ನಿಯಮಗಳನ್ನು ಕೈಬಿಟ್ಟಿರುವುದಾಗಿ ಎಲ್‌ಐಸಿ ಕೇರಳ ವಿಭಾಗ ಪ್ರಕಟಿಸಿದೆ. 

30ರಂದು ವಿಶೇಷ ಕಲಾಪ
ಕೇಂದ್ರ ಸರ್ಕಾರ ಹಾಗೂ ವಿವಿಧ ಮೂಲಗಳಿಂದ ಬಂದಿರುವ ಆರ್ಥಿಕ ಸಹಾ ಯವನ್ನು ಸಮ ರ್ಪ ಕ ವಾಗಿ ಉಪ ಯೋಗಿಸಿ ಕೇರಳವನ್ನು ಪುನಃ ಕಟ್ಟುವ ಕುರಿ ತಂತೆ ಸಿಎಂ ಪಿಣ ರಾಯಿ ವಿಜಯನ್‌, ಮಂಗಳವಾರ ಸಂಪುಟ ಸಭೆ ನಡೆಸಿದರು. ಕೇಂದ್ರ ಸರ್ಕಾರದಿಂದ ಈಗಾಗಲೇ 600 ಕೋಟಿ ರೂ. ಪರಿ ಹಾರ ಸಿಕ್ಕಿದೆ. ಅದನ್ನು ಕೇಂದ್ರದ್ದೇ ಆದ ನರೇಗಾ ಮುಂತಾದ ಯೋಜ ನೆಗಳಿಗೆ ಬಳಸುವ ಕುರಿ ತಂತೆ ಸಂಪುಟ ಸಭೆಯಲ್ಲಿ ಚರ್ಚಿ ಸ ಲಾ ಯಿತು. ಏತನ್ಮಧ್ಯೆ, ಆ. 30ರಂದು ಕೇರಳ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದೆ.

ಹಸಿರು ಮಾಯವಾಗಿ ಕೆಸರು
ಕಣ್ಣಿನ ದೃಷ್ಟಿ ಹರಿಯುವವ ರೆಗೂ ಹಚ್ಚ ಹಸುರಿನ ಭತ್ತದ ಗದ್ದೆಗಳಿಂದ ನಳನಳಿಸುತ್ತಿದ್ದ ಕುಟ್ಟನಾಡ್‌ ಎಂಬ ಕೇರಳ “ಅನ್ನದ ಬಟ್ಟಲು’ ಈಗ ಕೆಸರಿನ ಬಟ್ಟಲಾಗಿದೆ. ಇದೇ ಪ್ರಾಂತ್ಯ ದಲ್ಲಿ 200ಕ್ಕೂ ಹೆಚ್ಚು ಜನರು ಸಾವಿಗೀಡಾಗಿ,1 ಲಕ್ಷಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 10 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. 

ಕಸ್ಟಮ್ಸ್‌, ಜಿಎಸ್‌ಟಿ ವಿನಾಯ್ತಿ
ಕೇರಳಕ್ಕೆ ಕೇಂದ್ರ ದಿಂದ ಒಟ್ಟು 600 ಕೋಟಿ ರೂ. ಪರಿ ಹಾರ ಬಿಡುಗಡೆೆ ಯಾ ಗಿ ರು ವು ದಾಗಿ ರಾಷ್ಟ್ರೀಯ ವಿಪತ್ತು ನಿರ್ವ ಹಣಾ ಸಮಿತಿ (ಎನ್‌ಸಿಎಂಸಿ) ತಿಳಿ ಸಿದೆ. ಇದ ಲ್ಲದೆ, ಕೇರ ಳಕ್ಕೆ ಇತರೆಡೆಗಳಿಂದ ರವಾನೆಯಾಗುವ ಪರಿಹಾರ ಸಾಮಗ್ರಿಗಳ ಮೇಲೆ ಯಾವುದೇ ಕಸ್ಟಮ್ಸ್‌ ಸುಂಕ ಹಾಗೂ ಜಿಎಸ್‌ಟಿವಿಧಿ ಸದಿರಲು ಕೇಂದ್ರ ತೀರ್ಮಾನಿಸಿರುವುದಾಗಿ ಸಮಿತಿ ಹೇಳಿದೆ.  

ಕೇರಳದಲ್ಲಿ ಚಂಡ ಮಾರುತ ಮುನ್ನೆಚ್ಚರಿಕಾ ಕೇಂದ್ರ ಸ್ಥಾಪನೆ: ಐಎಂಡಿ ಘೋಷಣೆ

ಪ್ರತಿ ವರ್ಷದ ಅಯ್ಯಪ್ಪ ಸ್ವಾಮಿ ಕ್ಷೇತ್ರದ ದರ್ಶನ ಈ ಬಾರಿ ಹೆಚ್ಚಿನ ದಿನ ಮುಂದೂ ಡುವ ಸಾಧ್ಯ ತೆ

ಆಧಾರ್‌ ಕಾರ್ಡ್‌ ಕಳೆದು ಕೊಂಡವರಿಗೆ ಹೊಸ ಪ್ರತಿ: ಆಧಾರ್‌ ಪ್ರಾಧಿಕಾರ ಘೋಷಣೆ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

NDA-Meet

NDA CMs Meet: ರಾಷ್ಟ್ರದ ಅಭಿವೃದ್ಧಿಗೆ ಎನ್‌ಡಿಎ ಬದ್ಧ: ಪ್ರಧಾನಿ ಮೋದಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.