ಹಲವು ರಾಜ್ಯಗಳಿಗೆ ಪ್ರವಾಹ ಭೀತಿ
Team Udayavani, Aug 19, 2020, 5:58 AM IST
ಪ್ರವಾಹದಿಂದ ಜಲಾವೃತವಾಗಿರುವ ಸೂರತ್ನ ರಸ್ತೆಯೊಂದರಲ್ಲಿ ಸೈಕಲ್ ರಿಕ್ಷಾ ಚಾಲಕ ಮಂಗಳವಾರ ಜನರನ್ನು ಕೂರಿಸಿ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವುದು.
ಜೈಪುರ/ಹೊಸದಿಲ್ಲಿ: ಉತ್ತರ ಭಾರತ, ಕೇಂದ್ರ ಭಾರತದಾದ್ಯಂತ ಮಳೆಯ ರೌದ್ರಾವತಾರ ಮುಂದುವರಿದ್ದು, ಹಲವು ರಾಜ್ಯಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಕಳೆದೊಂದು ತಿಂಗಳಿಂದ ದೇಶದ ಪೂರ್ವ ಭಾಗದಲ್ಲಿ ಅವಾಂತರ ಸೃಷ್ಟಿಸಿದ ನೈರುತ್ಯ ಮುಂಗಾರು ಈಗ ಪಶ್ಚಿಮ ಭಾಗದತ್ತಲೂ ಸಂಚರಿಸುತ್ತಿದ್ದು, ಅನೇಕ ರಾಜ್ಯಗಳು ವರುಣನ ಅಬ್ಬರಕ್ಕೆ ಸಿಲುಕಿ ನಲುಗಲಾರಂಭಿಸಿವೆ.
ರಾಜಸ್ಥಾನದಲ್ಲಿ ಮಳೆ, ಪ್ರವಾಹ ಸಂಬಂಧಿ ಘಟನೆಗಳಿಗೆ 7 ಮಂದಿ ಬಲಿಯಾಗಿದ್ದಾರೆ. ಮಂಗಳವಾರವೂ ಇಲ್ಲಿ ಭಾರೀ ಮಳೆಯಾಗಿದ್ದು, ಬುಧವಾರವೂ ಇದೇ ಸ್ಥಿತಿ ಮುಂದುವರಿಯಲಿದೆ. ಆ.20ರವರೆಗೆ ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಹಾರದಲ್ಲಿ ಪ್ರವಾಹದಿಂದಾಗಿ ಈಗಾಗಲೇ 80 ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದು, ಈವರೆಗೆ 25 ಮಂದಿ ಸಾವಿಗೀಡಾಗಿದ್ದಾರೆ. ದೇಶದ ಈಶಾನ್ಯ ಭಾಗದ ಅಸ್ಸಾಂನಲ್ಲಿ ಹಲವು ಜಿಲ್ಲೆಗಳು ಈಗಲೂ ಮುಳುಗಡೆಯಾಗಿವೆ.
ಕಣಿವೆಯಲ್ಲಿ ಮಳೆಯ ಸಿಂಚನ: ಬಿಸಿಲಿನ ಝಳದಲ್ಲಿ ಬೇಯುತ್ತಿದ್ದ ಕಾಶ್ಮೀರ ಕಣಿವೆಯಲ್ಲಿ ಮಂಗಳವಾರ ಮಳೆಯ ಸಿಂಚನವಾಗಿದೆ. ಸೋಮವಾರವಷ್ಟೇ ಬೇಸಗೆ ರಾಜಧಾನಿ ಶ್ರೀನಗರವು ಸುಮಾರು 40 ವರ್ಷ ಗಳಲ್ಲೇ ಆಗಸ್ಟ್ ತಿಂಗಳ ಅತಿ ಬೆಚ್ಚಗಿನ ದಿನ ಎಂಬ ದಾಖಲೆ ಬರೆದಿತ್ತು. ಮಂಗಳವಾರ ಇಲ್ಲಿ ಮಳೆ ಸುರಿ ದಿದ್ದು, ಕಣಿವೆ ರಾಜ್ಯದ ಜನರು ಸಂಭ್ರಮಪಟ್ಟಿದ್ದಾರೆ.
ಪ್ರವಾಹ ಇಳಿಮುಖ: ಗೋದಾವರಿ ನದಿಯಲ್ಲಿನ ಪ್ರವಾಹ ಇಳಿಮುಖವಾಗಿದೆ. ಆದರೆ, ಆಂಧ್ರಪ್ರದೇಶದ ಹಲವು ಗ್ರಾಮಗಳು ಇನ್ನೂ ಜಲಾವೃತವಾಗಿಯೇ ಉಳಿ ದಿವೆ. ಇದೇ ವೇಳೆ, ಪ್ರವಾಹ ಪೀಡಿತ ಸ್ಥಳಗಳ ವೈಮಾನಿಕ ಸಮೀಕ್ಷೆಯನ್ನು ಸಿಎಂ ಜಗನ್ ರೆಡ್ಡಿ ನಡೆಸಿದ್ದಾರೆ.
ವಾಡಿಕೆಗಿಂತ ಹೆಚ್ಚು ಮಳೆ
ಪ್ರಸಕ್ತ ಮುಂಗಾರು ಅವಧಿಯಲ್ಲಿ ಅಂದರೆ ಜೂನ್ 1ರಿಂದ ಈವರೆಗೆ ಮಹಾರಾಷ್ಟ್ರವು ವಾಡಿಕೆಗಿಂತ ಶೇ.16ರಷ್ಟು ಹೆಚ್ಚು ಮಳೆಯನ್ನು ಕಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಜೂ.1ರಿಂದ ಆ.17ರವರೆಗೆ ರಾಜ್ಯದಲ್ಲಿ 826.7 ಮಿ.ಮೀ. ಮಳೆಯಾಗಿದೆ. ಹಿಂದಿನ ವರ್ಷಗಳ ಇದೇ ಅವಧಿಯಲ್ಲಿ ಸರಾಸರಿ 713.7 ಮಿ.ಮೀ. ಮಳೆಯಾಗಿತ್ತು. ಅಂದರೆ, ಸಾಮಾನ್ಯಕ್ಕಿಂತ ಶೇ. 16 ರಷ್ಟು ಹೆಚ್ಚು ಮಳೆ ಬಿದ್ದಿದೆ. ರಾಜ್ಯದ 36 ಜಿಲ್ಲೆಗಳ ಪೈಕಿ 6 ಜಿಲ್ಲೆಗಳು ಹೆಚ್ಚುವರಿ ಮಳೆಯನ್ನು ಕಂಡಿ ದ್ದರೆ, ಯವತ್ಮಾಲ್, ಗೋಂಡಿಯಾ ಮತ್ತು ಅಕೋಲಾಗಳಲ್ಲಿ ಮಳೆ ಕೊರತೆ ಉಂಟಾಗಿದೆ ಎಂದೂ ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.