ಮಹಾಕ್ಕೆ ನರ್ವೇಕರ್ ಯುವ ಸಭಾಧ್ಯಕ್ಷ: ಸಿಎಂ ಶಿಂಧೆಗೆ ಇಂದು ವಿಶ್ವಾಸ ಪರೀಕ್ಷೆ
Team Udayavani, Jul 4, 2022, 7:10 AM IST
ಮುಂಬಯಿ: ನಾಲ್ಕು ದಿನಗಳ ಹಿಂದಷ್ಟೇ ಅಧಿಕಾರಕ್ಕೆ ಏರಿದ ಶಿವಸೇನೆಯ ಏಕನಾಥ ಶಿಂಧೆ ಬಣ ಮತ್ತು ಬಿಜೆಪಿ ಸರಕಾರ ಮೊದಲ ಪರೀಕ್ಷೆಯಲ್ಲಿ ರವಿವಾರ ತೇರ್ಗ ಡೆಯಾಗಿದೆ. ಬಿಜೆಪಿಯ ಶಾಸಕ ರಾಹುಲ್ ನರ್ವೇಕರ್ (45) ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಅವರಿಗೆ 164 ಮತಗಳು ಪ್ರಾಪ್ತಿಯಾಗಿವೆ. ವಿಪಕ್ಷ ಎಂವಿಎ ವತಿಯಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಶಾಸಕ ರಾಜನ್ ಸಾಳ್ವಿ ಅವರಿಗೆ 107 ಮತಗಳು ಸಿಕ್ಕಿವೆ. ಹೀಗಾಗಿ ಸೋಮವಾರ ನಡೆಯುವ ವಿಶ್ವಾಸಮತ ಯಾಚನೆಯಲ್ಲಿಯೂ ಕೂಡ ಹೊಸ ಸರಕಾರ ಬಚಾವ್ ಆಗು ವುದು ಬಹುತೇಕ ನಿಶ್ಚಿತ.
ಸ್ಪೀಕರ್ ಆಗಿದ್ದ ಕಾಂಗ್ರೆಸ್‌ನ ಶಾಸಕ ನಾನಾ ಪಟೋಲೆ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದ ಬಳಿಕ ಆ ಹುದ್ದೆ ತೆರವಾಗಿಯೇ ಇತ್ತು. ಹೀಗಾಗಿ ಸರಕಾರ ರಚನೆಯ ಬಿಕ್ಕಟ್ಟಿನ ನಡುವೆ ಆ ಹುದ್ದೆಗೆ ನೇಮಕ ಮಾಡುವ ಅನಿವಾರ್ಯತೆಯೂ ಉಂಟಾಗಿತ್ತು.
ನರ್ವೇಕರ್ ಮುಂಬಯಿಯ ಕೊಲಾಬಾ ಕ್ಷೇತ್ರದಿಂದ 2019ರ ಚುನಾ ವಣೆಯಲ್ಲಿ ಗೆದ್ದಿದ್ದರು. ಈ ಹಿಂದೆ ಅವರು ಶಿವಸೇನೆ ಮತ್ತು ಎನ್‌ಸಿಪಿಯಲ್ಲಿದ್ದರು. ಅವರ ಮಾವ, ಎನ್‌ಸಿಪಿ ಮುಖಂಡ ರಾಮರಾಜೇ ನಾಯ್ಕ ವಿಧಾನ ಪರಿಷತ್‌ನ ಸಭಾಪತಿಯೂ ಆಗಿದ್ದಾರೆ. ಮಹತ್ವಪೂರ್ಣವಾಗಿರುವ ಅಂಶ ವೆಂದರೆ, ರಾಹುಲ್ ದೇಶದ ಇದುವರೆಗಿನ ಅತ್ಯಂತ ಯುವ ಸ್ಪೀಕರ್ ಆಗಿದ್ದಾರೆ. ರವಿವಾರದ ಕಲಾಪದಲ್ಲಿ 12 ಮಂದಿ ಶಾಸಕರು ಭಾಗವಹಿಸಿರಲಿಲ್ಲ. ಎನ್‌ಸಿಪಿಯ ಇಬ್ಬರು ಶಾಸಕರಾದ ಅನಿಲ್ ದೇಶ್‌ಮುಖ್, ನವಾಬ್ ಮಲಿಕ್ ಜೈಲಿನಲ್ಲಿದ್ದಾರೆ.
ಕಚೇರಿಗೆ ಬೀಗ: ಸ್ಪೀಕರ್ ಚುನಾವಣೆಗೆ ಸಂಬಂಧಿಸಿದಂತೆ ಶಿಂಧೆ ಮತ್ತು ಉದ್ಧವ್ ಬಣ ಶಾಸಕರಿಗೆ ವಿಪ್ ಹೊರಡಿಸಿ ನಿಗದಿತ ಅಭ್ಯರ್ಥಿಗೇ ಮತ ಹಾಕಬೇಕು ಎಂದು ಹೇಳಿ ದ್ದವು. ಈ ನಡುವೆ, ವಿಧಾನಸಭೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಕಚೇರಿಗೆ ಏಕನಾಥ ಶಿಂಧೆ ಬಣ ಬೀಗ ಹಾಕಿದೆ.
ಇಂದು ವಿಶ್ವಾಸಮತ: ಸಿಎಂ ಏಕನಾಥ ಶಿಂಧೆ ನೇತೃತ್ವದ ಸರಕಾರ ವಿಶ್ವಾಸಮತ ಯಾಚನೆ ಮಾಡಲಿದೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 144 ಸ್ಥಾನಗಳು ಬೇಕು. ಬಿಜೆಪಿ 106, ಏಕನಾಥ ಶಿಂಧೆ ಬಣದ 39, 10 ಮಂದಿ ಪಕ್ಷೇತರರು ಇದ್ದಾರೆ. ಇನ್ನು ವಿಪಕ್ಷ ಎಂವಿಎನಲ್ಲಿ ಶಿವಸೇನೆ 16, ಎನ್‌ಸಿಪಿ 53, ಕಾಂಗ್ರೆಸ್ 44- ಹೀಗೆ 116 ಸ್ಥಾನಗಳನ್ನು ಹೊಂದಿವೆ. ಎಐಎಂಐಎಂ2, ಎಸ್‌ಪಿ-2, ಸ್ವತಂತ್ರ ಶಾಸಕರು-3, ಬಿವಿಎ-3, ಎಂಎನ್‌ಎಸ್-1 ಸ್ಥಾನಗಳನ್ನು ಹೊಂದಿವೆ. ಸಮಾಜವಾದಿ ಪಕ್ಷದ ಶಾಸಕರು ಸ್ಪೀಕರ್ ಚುನಾ ವಣೆ ಯಲ್ಲಿಯೂ ಭಾಗವಹಿಸಿರಲಿಲ್ಲ. ಒಂದು ವೇಳೆ, ಸೋಮವಾರದ ವಿಶ್ವಾಸ ಮತ ದಲ್ಲಿಯೂ ಭಾಗವಹಿಸದಿದ್ದರೆ ಮಾಜಿ ಸಿಎಂ ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆಯಾಗಲಿದೆ.
ಶಿಂಧೆ ಬಣದ ಶಾಸಕರಿಗೆ ಭಾರೀ ಪ್ರಮಾಣದಲ್ಲಿ ಭದ್ರತೆ ಒದಗಿಸಲಾಗಿದೆ.ಅದನ್ನು ನೋಡಿದರೆ, ಉಗ್ರ ಕಸಬ್‌ಗ ನೀಡಿದ್ದ ರಕ್ಷಣೆ ಕಡಿಮೆ ಅನಿಸುತ್ತಿ¤ದೆ. ನಿಮಗೆ ಯಾರಾ ದರೂ ಓಡಿ ಹೋಗುತ್ತಾರೆ ಎಂಬ ಭಯ ಇದೆಯೇ?
-ಅದಿತ್ಯ ಠಾಕ್ರೆ, ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.