ದೇಶ ತೊರೆಯುವರ ವಿವರ 24 ಗಂಟೆ ಮುಂಚೆ ಕಸ್ಟಮ್ಸ್ ಇಲಾಖೆಗೆ
ಪ್ರಯಾಣಿಕರ ಹೆಸರು, ಫೋನ್ ನಂಬರ್ ಇತ್ಯಾದಿ ಮಾಹಿತಿ ನೀಡುವುದು ಕಡ್ಡಾಯ
Team Udayavani, Aug 11, 2022, 7:35 AM IST
ನವದೆಹಲಿ: ಹೊರದೇಶಗಳಿಗೆ ಪ್ರಯಾಣಿಸುವ ಭಾರತೀಯ ಮಾಹಿತಿಗಳನ್ನು, ಅವರ ಪ್ರಯಾಣ ಆರಂಭವಾಗುವ ವೇಳೆಗೆ 24 ಗಂಟೆಗೆ ಮುಂಚಿತವಾಗಿಯೇ ದೇಶದ ಕಸ್ಟಮ್ಸ್ ಇಲಾಖೆಗೆ ರವಾನಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ, ದೇಶದಲ್ಲಿ ಆರ್ಥಿಕಾಪರಾಧಗಳನ್ನು ಮಾಡಿ ದೇಶ ಬಿಟ್ಟು ಪರಾರಿಯಾಗುವಂಥ ವ್ಯಕ್ತಿಗಳನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಯಾಣಿಕರ ಹೆಸರು, ವಿಳಾಸ, ಇ-ಮೇಲ್ ಐಡಿ, ಫೋನ್ ನಂಬರ್, ಕ್ರೆಡಿಟ್ ಕಾರ್ಡ್ ಮಾಹಿತಿ, ಬ್ಯಾಗೇಜ್ ವಿವರ, ಟ್ರಾವೆಲ್ ಹಿಸ್ಟರಿ ಸೇರಿ ಕೆಲವು ಮಾಹಿತಿಗಳನ್ನು ಕಸ್ಟಮ್ಸ್ ಇಲಾಖೆಯೊಂದಿಗೆ ಹಂಚಿಕೊಳ್ಳುವಂತೆ ಸೂಚಿಸಲಾಗಿದೆ.
ಕಸ್ಟಮ್ಸ್ ಇಲಾಖೆಯು ವಿಮಾನ ಸೇವಾ ಸಂಸ್ಥೆಗಳು ಕಳುಹಿಸುವ ಪ್ರಯಾಣಿಕರ ಮಾಹಿತಿಯನ್ನು ಅವಲೋಕಿಸಿ, ಆನಂತರ ಆ ಪಟ್ಟಿಯನ್ನು ನೂತನವಾಗಿ ಆರಂಭಿಸಲಾಗಿರುವ ನ್ಯಾಷನಲ್ ಕಸ್ಟಮ್ಸ್ ಟಾರ್ಗೆಟಿಂಗ್ ಸೆಂಟರ್- ಪ್ಯಾಸೆಂಜರ್ಸ್ (ಎನ್‌ಸಿಪಿಟಿ- ಪಿ) ವಿಭಾಗಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು.
ಪ್ರಯಾಣಿಕರ ವಿದೇಶ ಪ್ರಯಾಣ ಆರಂಭವಾಗುವ 24 ಗಂಟೆಯೊಳಗೆ ಈ ಎಲ್ಲಾ ಅವಲೋಕಗಳೂ ನಡೆಯಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.