ಸಂಪತ್ತು ಸಂಗ್ರಹ: ಸರಕಾರಿ ಆಸ್ತಿಗಳಿಂದ 6 ಲಕ್ಷ ಕೋ.ರೂ. ಗಳಿಕೆ ಯೋಜನೆ
Team Udayavani, Aug 24, 2021, 7:20 AM IST
ಹೊಸದಿಲ್ಲಿ: ಕೇಂದ್ರ ಸರ ಕಾರವು 2025ರ ಒಳಗೆ 6 ಲಕ್ಷ ಕೋಟಿ ರೂ. ಸಂಪತ್ತು ಕ್ರೋಡೀಕರಿಸುವ ಯೋಜನೆಯನ್ನು ಸೋಮ ವಾರ ಪ್ರಕಟಿಸಿದೆ. ಅದಕ್ಕಾಗಿ ಸರಕಾರಿ ಸ್ವಾಮ್ಯದ ಬಂದರು, ವಿಮಾನ ನಿಲ್ದಾಣ, ಹೆದ್ದಾರಿಗಳ ಮೂಲಕ ಹಣ ಸಂಗ್ರಹಿ ಸುವ “ರಾಷ್ಟ್ರೀಯ ಸಂಪತ್ತು ಕ್ರೋಡೀಕರಣ ಯೋಜನೆ’ (ಎನ್‌ಎಂಪಿ) ಜಾರಿ ಮಾಡಲಾಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದರಡಿ ರೈಲು, ವಿಮಾನ ನಿಲ್ದಾಣಗಳು ಮತ್ತು ಕಲ್ಲಿದ್ದಲು ಗಣಿ ಎಂಬ ಮೂರು ಪ್ರಮುಖ ವಿಭಾಗಗಳನ್ನು ಮಾಡ ಲಾಗಿದೆ. ಯೋಜನೆಯಡಿ ಸೊತ್ತು ಗಳನ್ನು ಮಾರಾಟ ಮಾಡುವುದಿಲ್ಲ. ಕೇಂದ್ರದ ಸ್ವಾಮಿತ್ವ ದಲ್ಲಿರುವ ಜಮೀನು, ಆಸ್ತಿ ಗಳನ್ನು ಬಳಕೆ ಮಾಡಿ, ಸಂಪತ್ತು ಸಂಗ್ರಹಿಸಲಾಗುತ್ತದೆ ಎಂದು ನಿರ್ಮಲಾ ವಿವರಿಸಿದ್ದಾರೆ.
ನಿಗದಿತ ಅವಧಿಗೆ ನಿರ್ದಿಷ್ಟ ಆಸ್ತಿಗಳನ್ನು ಖಾಸಗಿಗೆ ನೀಡಲಾಗುತ್ತದೆ. ಆ ಬಳಿಕ ಖಾಸಗಿ ಯವರು ಅದನ್ನು ಸರಕಾರಕ್ಕೆ ಮರಳಿಸಬೇಕು. ಯೋಜನೆಯಿಂದ ಅರ್ಥ ವ್ಯವಸ್ಥೆಗೆ ಹೊಸಶಕ್ತಿ ಬರಲಿದೆ ಎಂದು ಸರಕಾರ ಹೇಳಿದೆ.
ಯೋಜನೆಯಡಿ ಗುರುತು ಮಾಡಲಾಗಿರುವ ರಾಷ್ಟ್ರೀಯ ಹೆದ್ದಾರಿಗಳ ಮೂಲಕ 1.6 ಲಕ್ಷ ಕೋಟಿ ರೂ. ಸಂಗ್ರಹಿಸುವ ಗುರಿ ಸರಕಾರದ ಮುಂದೆ ಇದೆ. ಎರಡನೆಯ ಸ್ಥಾನದಲ್ಲಿ ರೈಲ್ವೇ ಇದ್ದು, 400 ನಿಲ್ದಾಣಗಳು, 150 ರೈಲುಗಳ ಮೂಲಕ 1.5 ಲಕ್ಷ ಕೋಟಿ ರೂ. ಸಂಗ್ರಹಿಸಲಾಗುತ್ತದೆ. ಈ ಹಿಂದೆ ಬಜೆಟ್‌ನಲ್ಲಿ ಪ್ರಕಟಿಸಲಾಗಿದ್ದಂತೆ ಮೂಲ ಸೌಕರ್ಯ ಹೂಡಿಕೆ ಟ್ರಸ್ಟ್ (ಐnvಐಖs) ಮೂಲಕ ಮೂಲ ಸೌಕರ್ಯ ಯೋಜನೆಗಳಿಗೆ ಖಾಸಗಿ- ಸರಕಾರಿ ಸಹಭಾಗಿತ್ವದಲ್ಲಿ ಅವಕಾಶ ನೀಡಲಾಗುತ್ತದೆ.
ವಿದ್ಯುತ್ ಸರಬರಾಜು ಲೈನ್‌ಗಳು, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದುಸ್ಥಾನ್ ಪೆಟ್ರೋ ಕೆಮಿಕಲ್ಸ್‌ನ ತೈಲ ಸಾಗಣೆ ಪೈಪ್‌ಲೈನ್‌ಗಳು, ಸ್ಟೇಡಿಯಂ ಗಳು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಮೂಲಕವೂ ಸಂಪತ್ತು ಕ್ರೋಡೀಕರಣದ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ವಿತ್ತ ಸಚಿವೆ ಪ್ರಕಟಿಸಿದ್ದಾರೆ.
ಹೇಗೆ ಕ್ರೋಡೀಕರಣ? :
26,700 ಕಿ.ಮೀ.
ಹೆದ್ದಾರಿಗಳು : 1.6
ಲಕ್ಷ ಕೋ. ರೂ.
ರೈಲ್ವೇ : 400 ನಿಲ್ದಾಣ
150 ರೈಲು
1.15 ಲಕ್ಷ ಕೋ. ರೂ.
ವಿದ್ಯುತ್ ಸರಬರಾಜು ಲೈನ್ :
42,300 ಸರ್ಕೀಟ್ ಲೈನ್
0.67 ಲಕ್ಷ ಕೋಟಿ ರೂ.
ಗೈಲ್ ಪೈಪ್‌ಲೈನ್ :
8,000 ಕಿ.ಮೀ.
0.24 ಲಕ್ಷ ಕೋಟಿ ರೂ.
ವಿದ್ಯುತ್ ಉತ್ಪಾದನೆ :
5,000 ಮೆ.ವ್ಯಾ. ವಿದ್ಯುತ್ ಉತ್ಪಾದನೆ
0.32 ಲಕ್ಷ ಕೋ.ರೂ.
ತೈಲ ಪೈಪ್‌ಲೈನ್ :
4,000- ಕಿ.ಮೀ.
ದೂರಸಂಪರ್ಕ :
ಬಿಎಸ್‌ಎನ್‌ಎಲ್, ಎಂಟಿಎನ್‌ಎಲ್ ಟವರ್
0.39 ಲಕ್ಷ ಕೋ. ರೂ.
ಕಲ್ಲಿದ್ದಲು ಗಣಿ :
160 ಯೋಜನೆಗಳು
0.32 ಲಕ್ಷ ಕೋಟಿ ರೂ.
ವಿಮಾನ ನಿಲ್ದಾಣ, ಬಂದರು :
21 ಎಎಐ ವಿ.ನಿ 31
ಬಂದರು
0.34 ಲಕ್ಷ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.