ಟಾಯ್ಕನಮಿಯಲ್ಲಿ ಇರಲಿ ದೊಡ್ಡ ಸ್ಥಾನ
Team Udayavani, Jun 25, 2021, 6:54 AM IST
ಹೊಸದಿಲ್ಲಿ: ಬಾಯಿಮಾತಿನ ಮೂಲಕವೇ ಸ್ಥಳೀಯ ಆಟಿಕೆಗಳನ್ನು ಪ್ರಚುರಪಡಿಸಿ. “ಟಾಯ್ಕನಮಿ'(ಆಟಿಕೆ ಆರ್ಥಿಕತೆ)ಯಲ್ಲಿ ಭಾರತದ ಸ್ಥಾನವನ್ನು ಎತ್ತರಕ್ಕೇರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಗುರುವಾರ ನಡೆದ “ಟಾಯ್ಕಥಾನ್-2021′ ಎಂಬ ಕಾರ್ಯಕ್ರಮದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ ಅವರು, ಸದ್ಯ ಭಾರತವು ಶೇ.80ರಷ್ಟು ಆಟಿಕೆಗಳನ್ನು ರಫ್ತು ಮಾಡುತ್ತಿದೆ. ಬರೋಬ್ಬರಿ 100 ಶತಕೋಟಿ ಡಾಲರ್(7.5 ಲಕ್ಷ ಕೋಟಿ ರೂ.) ಮೌಲ್ಯದ ಜಾಗತಿಕ ಆಟಿಕೆ ಮಾರುಕಟ್ಟೆಯ ಪೈಕಿ ಭಾರತದ ಪಾಲು ಕೇವಲ 1.5 ಶತಕೋಟಿ ಡಾಲರ್(ಸುಮಾರು 11 ಸಾವಿರ ಕೋಟಿ ರೂ. ) ಮಾತ್ರ. ಹೀಗಾಗಿ ಆಟಿಕೆ ಕ್ಷೇತ್ರದಲ್ಲಿ ಭಾರತದ ಪಾಲನ್ನು ಹೆಚ್ಚಿಸಬೇಕು ಮತ್ತು ಆಟಿಕೆ ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಬೇಕಿದೆ ಎಂದು ಹೇಳಿದ್ದಾರೆ.
ಆಟಿಕೆ ಕ್ಷೇತ್ರವು ತನ್ನದೇ ಆದ ಸಣ್ಣ ಮಟ್ಟದ ಕೈಗಾರಿಕೆಯನ್ನು ಹೊಂದಿದೆ. ಇಲ್ಲಿ ಗ್ರಾಮೀಣ ಪ್ರದೇಶದ ದಲಿತ, ಬಡ ಹಾಗೂ ಬುಡಕಟ್ಟು ಜನಾಂಗದ ಕುಶಲಕರ್ಮಿಗಳು ಕೆಲಸ ಮಾಡುತ್ತಾರೆ. ಇದರಲ್ಲಿ ಮಹಿಳೆಯರ ಪಾಲೂ ಹೆಚ್ಚಿದೆ. ಈ ವರ್ಗಗಳಿಗೆ ಅನುಕೂಲ ಆಗಬೇಕೆಂದರೆ ನಾವೆಲ್ಲರೂ ಸ್ಥಳೀಯ ಆಟಿಕೆಗಳಿಗೆ ಉತ್ತೇಜನ ನೀಡಬೇಕು. ಜಾಗತಿಕ ಮಟ್ಟದಲ್ಲಿ ಭಾರತದ ಆಟಿಕೆಗಳು ಸ್ಪರ್ಧೆ ನೀಡುವಂತೆ ಹೊಸ ಹೊಸ ಸಂಶೋಧನೆಗಳು ಹಾಗೂ ನಾವೀನ್ಯವನ್ನು ಪರಿಚಯಿಸಬೇಕು ಎಂದೂ ಮೋದಿ ಸಲಹೆ ನೀಡಿದ್ದಾರೆ.
ಭಾರತೀಯತೆಯ ಸೊಗಡಿರಲಿ: ಜತೆಗೆ ಜಗತ್ತು ಭಾರತದ ಸಾಮರ್ಥ್ಯ, ಕಲೆ, ಸಂಸ್ಕೃತಿ ಮತ್ತು ಸಮಾ ಜದ ಬಗ್ಗೆ ಕಲಿಯಲು ಇಚ್ಛಿಸುತ್ತಿದೆ. ಇದರಲ್ಲಿ ಆಟಿಕೆ ಗಳು ಕೂಡ ದೊಡ್ಡ ಮಟ್ಟದ ಪಾತ್ರ ವಹಿಸುತ್ತವೆ. ಹೀಗಾಗಿ, ಭಾರತೀಯತೆಯನ್ನು ಮೈಗೂಡಿಸಿಕೊಂಡ ಆಟಿಕೆಗಳು ಹಾಗೂ ಗೇಮ್‌ಗಳನ್ನು ನಾವು ಪರಿಚಯಿಸ ಬೇಕಿದೆ. ಇದಕ್ಕಾಗಿ ಹೊಸ ಸ್ಟಾರ್ಟ್‌ಅಪ್‌ಗ್ಳು ಮತ್ತು ಯುವ ಸಂಶೋಧಕರು ಮುಂದೆ ಬರಬೇಕು.ದೇಶದ 75ನೇ ಸ್ವಾತಂತ್ರೊéàತ್ಸವದ ವೇಳೆ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳು, ಆಗಿನ ಘಟನೆ ಗಳು, ಅವರ ದಿಟ್ಟತನ, ನಾಯಕತ್ವವನ್ನು ಬಿಂಬಿಸುವ “ಗೇಮ್’ಗಳನ್ನು ಅಭಿವೃದ್ಧಿಪಡಿಸುವಂತೆಯೂ ಮೋದಿ ಕರೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.