Panaji: ಸಂಚಾರ ನಿಯಮಗಳನ್ನು ಅನುಸರಿಸಿ,ಅಪಘಾತ ತಪ್ಪಿಸಿ: ಜಾಗೃತಿ ಜಾಥಾ
ಹೆಚ್ಚುತ್ತಿರುವ ರಸ್ತೆ ಅಪಘಾತ; ಜಾಗೃತಿ ಜಾಥಾ, ರ‍್ಯಾಲಿ
Team Udayavani, Feb 23, 2024, 12:52 PM IST
ಪಣಜಿ: ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಗೋವಾದ ಬಿಚೋಲಿ ಹಿರಿಯ ನಾಗರಿಕರು ಬಾಬಾ ಸಾವೈಕರ್ ಪ್ರತಿಷ್ಠಾನದ ಹಿರಿಯ ನಾಗರಿಕ ಸೇವಾ ಕೇಂದ್ರದ ನಾಗರಿಕರು ‘ಸಂಚಾರ ನಿಯಮಗಳನ್ನು ಅನುಸರಿಸಿ ಮತ್ತು ಅಪಘಾತಗಳನ್ನು ತಪ್ಪಿಸಿ’ ಎಂಬ ಸಂದೇಶದೊಂದಿಗೆ ನಗರದಲ್ಲಿ ಜಾಗೃತಿ ಜಾಥಾ ನಡೆಸಿದರು. ಈ ರ‍್ಯಾಲಿಯಲ್ಲಿ ಮಹಿಳೆಯರೂ ಭಾಗವಹಿಸಿದ್ದರು.
ಬಿಚೋಳಿ ತಾಲೂಕು ಜ್ಯೇಷ್ಠ ಸಿಟಿಜನ್ ಮಂಚ್ ಸಹಯೋಗದಲ್ಲಿ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಚೌಕ್‍ನಿಂದ ರ‍್ಯಾಲಿ ಆರಂಭವಾಗಿದ್ದು, ಕೈಯಲ್ಲಿ ಫಲಕಗಳನ್ನು ಹಿಡಿದುಕೊಂಡು ಹಿರಿಯ ನಾಗರಿಕರು ಘೋಷಣೆಗಳನ್ನು ಕೂಗಿದರು.
ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಧರಿಸಿ, ವಾಹನ ಚಲಾಯಿಸುವಾಗ ಮೊಬೈಲ್ ಬಳಸಬೇಡಿ, ಸಂಚಾರಿ ನಿಯಮಗಳನ್ನು ಪಾಲಿಸಿ ಎಂಬಿತ್ಯಾದಿ ಸಂದೇಶಗಳನ್ನು ನೀಡುವ ಮೂಲಕ ನಗರವಾಸಿಗಳ ಗಮನ ಸೆಳೆದರು. ಬಳಿಕ ಮಾರುಕಟ್ಟೆಗೆ ಜಾಗೃತಿ ಮೂಡಿಸಿ ರ‍್ಯಾಲಿ ಮುಕ್ತಾಯಗೊಳಿಸಲಾಯಿತು.
ರ‍್ಯಾಲಿಯಲ್ಲಿ ಜ್ಯೇಷ್ಠ ನಗರ ಮಂಚ್‍ನ ಕಾಜಿತನ್ ವಾಜ್, ವೆಂಕಟೇಶ ನಾಟೇಕರ್ ಅವರೊಂದಿಗೆ ಮಾರುತಿ ಪಾಟೀಲ್, ರಾಜಾರಾಂ ಖೋಬರೇಕರ್, ಎಂ. ಕೃ. ಪಾಟೀಲ್, ವಿಜಯ್ ತೆಲಂಗ್, ಉಜ್ವಲಾ ಆಚಾರ್ಯ ಸೇರಿದಂತೆ ಹಿರಿಯ ನಾಗರಿಕರು ಭಾಗವಹಿಸಿದ್ದರು.
ಬಾಬಾ ಸಾವೈಕರ್ ಸೇವಾ ಪ್ರತಿಷ್ಠಾನದ ಟ್ರಸ್ಟಿ ರಮಾಕಾಂತ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ರ‍್ಯಾಲಿ ಆರಂಭವಾಯಿತು. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭೀಕರ ಅಪಘಾತದಲ್ಲಿ ಕೆಲವರು ಪ್ರಾಣ ಕಳೆದುಕೊಳ್ಳುವಂತಾಗುತ್ತಿದೆ ಎಂದು ಖಾಂತ್ ಶೆಟ್ಟಿ ಅಳಲು ತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.