ಸರಕಾರಿ ವಿಡಿಯೋ ಕಾನ್ಫರೆನ್ಸ್ ವೇಳೆ ಪರದೆಯಲ್ಲಿ ಕಾಣಿಸಿಕೊಂಡಿತು ಸೆಕ್ಸ್ ಚಿತ್ರ !
Team Udayavani, Jun 4, 2019, 12:42 PM IST
ಜೈಪುರ : ರಾಜಸ್ಥಾನ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಯುತ್ತಿದ್ದ ನಡುವೆಯೇ ಇದ್ದಕ್ಕಿದ್ದಂತೆ ಪರದೆಯಲ್ಲಿ ಸೆಕ್ಸ್ ವಿಡಿಯೋ ಕಾಣಿಸಿಕೊಂಡು ಅಧಿಕಾರಿಗಳೆಲ್ಲ ಮುಜುಗರ ಪಡುವ ಸನ್ನಿವೇಶ ತಲೆದೋರಿದ ಘಟನೆ ವರದಿಯಾಗಿದೆ.
ಈ ವಿಡಿಯೋ ಕಾನ್ಫರೆನ್ಸ್ ಸಭೆಯನ್ನು ಇಲಾಖಾ ಕಾರ್ಯದರ್ಶಿ ಮುಗ್ಧ ಸಿಂಗ್ ಅವರು ಸಚಿವಾಲಯದ ಎನ್ಐಸಿ ಹಾಲ್ ನಲ್ಲಿ ನಡೆಸುತ್ತಿದ್ದರು.
ಇಲಾಖೆಯ ಅಧಿಕಾರಿಗಳು, ಎನ್ಐಸಿ ಪ್ರತಿನಿಧಿಗಳು ಮತ್ತು ಇತರ 10 ಮಂದಿ ಹಾಲ್ನಲ್ಲಿ ಇದ್ದರು. ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಎಲ್ಲ 33 ಜಿಲ್ಲೆಗಳ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆಯಲ್ಲಿ ಇಲಾಖೆಯ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳ ಪ್ರಗತಿ ಪರಾಮರ್ಶೆ ನಡೆಯುತ್ತಿತ್ತು.
ಸಭೆ ನಡೆಯುತ್ತಿದ್ದಂತೆಯೇ ವಿಡಿಯೋ ಕಾನ್ಫರೆನ್ಸ್ ಪರದೆಯಲ್ಲಿ ಇದ್ದಕ್ಕಿದ್ದಂತೆಯೇ ಸೆಕ್ಸ್ ವಿಡಿಯೋ ಕೆಲ ಕಾಲ ಪ್ರಸಾರವಾಯಿತು.
ಘಟನೆಯಿಂದ ಕ್ರುದ್ಧರಾದ ಕಾರ್ಯದರ್ಶಿ ಮುಗ್ಧ ಸಿಂಗ್ ಅವರು ಕೂಡಲೇ ಎನ್ಐಸಿ ನಿರ್ದೇಶಕರನ್ನು ಕರೆಸಿಕೊಂಡು ಘಟನೆ ಬಗ್ಗೆ ತನಿಖೆ ನಡೆಸಿ ತನಗೆ ವರದಿ ಸಲ್ಲಿಸುವಂತೆ ಆದೇಶಿಸಿದರು.
ಎನ್ಐವಿ ನಿರ್ದೇಶಕರ ತನಿಖಾ ವರದಿ ಆಧರಿಸಿ ತಪ್ಪುಗಾರ ಸಿಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಗ್ಧ ಸಿಂಗ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.