ಆಹಾರ ಇಲಾಖೆ ಆಯುಕ್ತ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು
Team Udayavani, May 18, 2017, 3:45 AM IST
ಲಕ್ನೋ/ಬೆಂಗಳೂರು: ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರಾಗಿದ್ದ ಅನುರಾಗ್ ತಿವಾರಿ ಅವರು ಉತ್ತರ ಪ್ರದೇಶದ ಲಕ್ನೋದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಜನ್ಮದಿನದಂದೇ ಅವರು ಸಾವನಪ್ಪಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಉತ್ತರ ಪ್ರದೇಶ ಮೂಲದ ಅನುರಾಗ್ ತಿವಾರಿ 2007ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದರು. ಬುಧವಾರ ಜನ್ಮದಿನದ ಹಿನ್ನೆಲೆಯಲ್ಲಿ ಲಕ್ನೋಗೆ ತೆರಳಿದ್ದರು. ಎರಡು ದಿನಗಳಿಂದ ಲಕ್ನೋದ ಹಜರತ್‌ಗಂಜ್ ಪ್ರದೇಶದಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ತಂಗಿದ್ದ ಅವರು ಬುಧವಾರ ಬೆಳಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಸೂರಿಯಲ್ಲಿರುವ ಲಾಲ್‌ಬಹದ್ದೂರ್ ಶಾಸಿŒ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ನಡೆದ ವೃತ್ತಿ ತರಬೇತಿಯಲ್ಲಿ ಪಾಲ್ಗೊಂಡಿದ್ದ ಅವರು ಎರಡು ದಿನಗಳಿಂದ ತಮ್ಮ ಬ್ಯಾಚ್‌ನ ಸಹೋದ್ಯೋಗಿಗಳೊಂದಿಗೆ ಸರ್ಕಾರಿ ಅತಿಥಿ ಗೃಹದಲ್ಲಿ ತಂಗಿದ್ದರು. ತಿವಾರಿ ಅವರ ಮೃತದೇಹ ಪತ್ತೆಯಾದ ವೇಳೆ ರಾತ್ರಿ ಉಡುಗೆಯಲ್ಲಿದ್ದರು. ಬೆಳಗ್ಗೆ ವಾಯು ವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆಯಿಂದ ಕೂಗಳತೆ ದೂರದಲ್ಲಿನ ಬಿಗಿಭದ್ರತೆಯ ಹಜರತ್‌ಗಂಜ್ ಪ್ರದೇಶದ ಸರ್ಕಾರಿ ಅತಿಥ ಗೃಹದ ಮುಂಭಾಗವೇ ಅವರ ಮೃತದೇಹ ಪತ್ತೆಯಾಗಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಅವರ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಕೆನ್ನೆಯ ಭಾಗದಲ್ಲಿ ಒಂದು ಗಾಯವಾಗಿರುವುದನ್ನು ಹೊರತುಪಡಿಸಿದರೆ ದೇಹದ ಉಳಿದ ಯಾವ ಭಾಗದಲ್ಲಿಯೂ ಗಾಯಗಳಿರುವುದು ಪತ್ತೆಯಾಗಿಲ್ಲ. ಬೆಳಗ್ಗೆ ದಾರಿಹೋಕರು ಮೃತದೇಹದ ಬಗ್ಗೆ ನೀಡಿದ ಮಾಹಿತಿ ಆಧರಿಸಿ ಪರಿಶೀಲಿಸಿದಾಗ ಅದು ಅನುರಾಗ್ ತಿವಾರಿ ಅವರ ಮೃತದೇಹ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶವ ಪರೀಕ್ಷೆ ಬಳಿಕವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ದೀಪಕ್ ಕುಮಾರ್ ಹೇಳಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಪತ್ರ
ಈ ಮಧ್ಯೆ, ಅನುರಾಗ್ ತಿವಾರಿ ಅನುಮಾನಾಸ್ಪದ ಸಾವಿನ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೋರಿ ಸಂಸದೆ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಅನುರಾಗ್ ತಿವಾರಿ ಅವರ ಮೃತದೇಹ ಲಕ್ನೋದ ವಸತಿಗೃಹ ಪಕ್ಕದ ರಸ್ತೆಬದಿ ಪತ್ತೆಯಾಗಿದೆ. ಇದರಿಂದಾಗಿ ಅವರ ಸಾವಿನ ಬಗ್ಗೆ ಅನುಮಾನ ಮೂಡುವಂತಾಗಿದೆ. ಸತ್ಯಾಂಶ ಹೊರಬೀಳುವ ಮುನ್ನವೇ ಅವರ ಸಾವಿಗೆ ಪತ್ನಿಯೊಂದಿಗಿನ ಜಗಳ ಕಾರಣ ಎಂಬ ವರದಿಗಳು ಪ್ರಕಟವಾಗುತ್ತಿವೆ. ಆದರೆ, ಈ ಸಾವಿನ ಹಿಂದೆ ಬೇರೆ ಕಾರಣಗಳು ಇವೆ ಎಂಬ ಶಂಕೆಯಿದ್ದು, ಅದನ್ನು ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಯೋಗಿ ಆದಿತ್ಯನಾಥ್ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ದಿಗ್ಭ್ರಮೆ
ಯುವ ಐಎಎಸ್ ಅಧಿಕಾರಿಯ ನಿಗೂಢ ಸಾವಿಗೆ ರಾಜ್ಯ ಸರ್ಕಾರವೂ ದಿಗ್ಭ್ರಮೆ ವ್ಯಕ್ತಪಡಿಸಿದೆ. ಅನುರಾಗ್ ತಿವಾರಿ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಐಎಎಸ್ ಅಧಿಕಾರಿಗಳಾದ ಅಭಿರಾಂ ಶಂಕರ್ ಹಾಗೂ ಪಂಕಜ್ ಕುಮಾರ್ ಪಾಂಡೆ ಅವರನ್ನು ಲಕ್ನೋಗೆ ಕಳುಹಿಸಿದ್ದು, ಸಾವಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವಂತೆ ಸೂಚಿಸಿದ್ದಾರೆ.ಇನ್ನೊಂದೆಡೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಉತ್ತರ ಪ್ರದೇಶದ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿ ಪ್ರಕರಣದ ಸಮಗ್ರ ತನಿಖೆ ನಡೆಸಲು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಹುಟ್ಟುಹಬ್ಬದಂದೇ ಸಾವು
ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯವರಾದ ಅನುರಾಗ್ ತಿವಾರಿ ಎಂಜಿನಿಯರಿಂಗ್ ಪದವೀಧರರು. ಮೃತ ತಿವಾರಿ ಅವರ ಜೇಬಿನಲ್ಲಿ ಪರ್ಸ್ ಇದ್ದು, ಅದರಲ್ಲಿನ ಗುರುತು ಚೀಟಿ ಆಧಾರದಲ್ಲಿ ಐಎಎಸ್ ಅಧಿಕಾರಿ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಮೇ 17 ಅವರ ಜನ್ಮದಿನವಾಗಿದ್ದು, 37ನೇ ವರ್ಷಕ್ಕೆ ಕಾಲಿಡುವ ದಿನವೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ತಿವಾರಿ ಅವರ ಸಾವು ಉತ್ತರ ಪ್ರದೇಶ ರಾಜಧಾನಿಯಲ್ಲಿ ಒಂದು ಬಗೆಯ ಆಘಾತ ಸೃಷ್ಟಿಸಿದೆ. ಉತ್ತರ ಪ್ರದೇಶದ ವಿಧಿವಿಜ್ಞಾನ ತಜ್ಞರು ಅವರ ಕೂಲಂಕಶವಾಗಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಇನ್ನಷ್ಟೇ ನೀಡಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
*”ಕಿರಿಯ ವಯಸ್ಸಿನ ಅನುರಾಗ್ ತಿವಾರಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಸಾವಿಗೆ ಕಾರಣ ಏನು ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಇಬ್ಬರು ಐಎಎಸ್ ಅಧಿಕಾರಿಗಳನ್ನು ಲಕ್ನೋಗೆ ಕಳುಹಿಸಲಾಗಿದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.