ಫೆಬ್ರವರಿಯಿಂದ ರೈಲುಗಳಲ್ಲೇ ದೊರೆಯಲಿದೆ ಆಹಾರ; 10 ತಿಂಗಳುಗಳ ಬಳಿಕ ಸೇವೆ ಪುನರಾರಂಭ
Team Udayavani, Jan 23, 2021, 7:22 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಭಾರತೀಯ ರೈಲ್ವೇ ಇಲಾಖೆ ಫೆಬ್ರವರಿಯಿಂದ ಪ್ರಯಾಣಿಕರಿಗೆ ಇ-ಕ್ಯಾಟರಿಂಗ್ ಸೌಲಭ್ಯವನ್ನು ಪುನರಾರಂಭಿಸಲಿದೆ. ಇದಕ್ಕಾಗಿ ರೈಲ್ವೇ ಸಚಿವಾಲಯ ಐಆರ್‌ಸಿಟಿಸಿಗೆ ಅನುಮತಿ ನೀಡಿದೆ. ಆದ್ದರಿಂದ ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ ಆದೇಶಗಳನ್ನು ಕಾಯ್ದಿರಿಸಬಹುದಾಗಿದ್ದು, ಪ್ರಯಾಣಿಕರಿಗೆ ಈ ಹಿಂದಿನಂತೆ ಆಹಾರ ದೊರೆಯಲಿದೆ.
ಆರಂಭದಲ್ಲಿ ಈ ಸೇವೆಯನ್ನು ದೇಶದ ಆಯ್ದ ರೈಲ್ವೇ ನಿಲ್ದಾಣಗಳಿಂದ ಮಾತ್ರ ಪ್ರಾರಂಭಿಸಲಾಗುತ್ತದೆ. ಕೋವಿಡ್ ಪೂರ್ವದಲ್ಲಿ ಐಆರ್‌ಟಿಸಿ 20 ಸಾವಿರ ಆರ್ಡರ್‌ಗಳನ್ನು ಪ್ರತೀ ದಿನ ಪಡೆಯುತ್ತಿತ್ತು.
ಕಳೆದ ವರ್ಷ ಮಾರ್ಚ್ 23ರಂದು ಕೋವಿಡ್‌ನಿಂದಾಗಿ ಎಲ್ಲ ರೈಲು ನಿಲ್ದಾಣಗಳನ್ನು ಮುಚ್ಚುವುದಾಗಿ ಕೇಂದ್ರ ಸರಕಾರ ಘೋಷಿಸಿತ್ತು. ಇದಾದ ಕೆಲವು ತಿಂಗಳುಗಳ ಬಳಿಕ ಸೀಮಿತ ರೈಲು ಸೇವೆಗಳು ಪ್ರಾರಂಭವಾದಾಗ ಇ-ಕ್ಯಾಟರಿಂಗ್ ಅನ್ನು ನಿಲ್ಲಿಸಲಾಗಿತ್ತು. ಈಗ ಐಆರ್‌ಸಿಟಿಸಿಯು ನವೀಕರಗೊಳಿಸಿ ಈ ಸೌಲಭ್ಯವನ್ನು ನೀಡಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ಅವಧಿಯಲ್ಲಿಯೇ ಆನ್‌ಲೈನ್ ಮೂಲಕ ಆಹಾರವನ್ನು ಆರ್ಡರ್ ಮಾಡಬಹುದಾಗಿದೆ. ತಮ್ಮ ನೆಚ್ಚಿನ ರೆಸ್ಟೋರೆಂಟ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವಾಗ ಯಾವ ಸಮಯದಲ್ಲಿ ಆಹಾರ ಬರುತ್ತದೆ ಎಂದು ತಿಳಿಸಲಾಗುತ್ತದೆ. ಹೀಗಾಗಿ ಪ್ರಯಾಣಿಕರು ಹೊರಗೆ ಹೋಗಬೇಕಾಗಿಲ್ಲ. ಅವರ ಆಸನಕ್ಕೆ ಆಹಾರವನ್ನು ತಲುಪಿಸಲಾಗುತ್ತದೆ.
ಮುನ್ನೆಚ್ಚರಿಕೆ ಕಾಪಾಡಿಕೊಳ್ಳಲಾಗುತ್ತದೆ
ರೈಲ್ ರೆಸ್ಟ್ರೊ ಈ ತಿಂಗಳ ಅಂತ್ಯದಿಂದ ಕೆಲಸವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇದಕ್ಕಾಗಿ ಕಂಪೆನಿಯು ಕಾರ್ಯಾಚರಣೆಯ ಸಮಯದಲ್ಲಿ ವಿವಿಧ ಸಮಯಗಳಲ್ಲಿ ರೆಸ್ಟೋರೆಂಟ್ ಸಿಬಂದಿ ಮತ್ತು ವಿತರಣಾ ಸಿಬಂದಿಯ ಥರ್ಮಲ್ ಸ್ಕ್ಯಾನಿಂಗ್, ಅಡುಗೆ ಮನೆಗಳ ಸ್ವಚ್ಛತೆ, ಎಲ್ಲ ಸಿಬಂದಿಗೆ ಮಾಸ್ಕ್‌ಗಳು ಅಥವಾ ಫೇಸ್‌ಶೀಲ್ಡ್‌ಗಳನ್ನು ಬಳಸಲು ಕಠಿನ ಮಾರ್ಗಸೂಚಿಗಳನ್ನು ನೀಡಿದೆ. ಆರಂಭದಲ್ಲಿ 30 ರೈಲು ನಿಲ್ದಾಣಗಳಲ್ಲಿ ಇದು ದೊರೆಯಲಿದ್ದು, 250 ರೈಲುಗಳಲ್ಲಿ ಇದು ಲಭಿಸಲಿದೆ.
ದೊಡ್ಡ ಕಂಪೆನಿಗಳೊಂದಿಗೆ ಒಪ್ಪಂದ
ಐಆರ್‌ಸಿಟಿಸಿ ಅನೇಕ ಪ್ರಸಿದ್ಧ ಆಹಾರ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರೈಲು ಪ್ರಯಾಣದ ಸಮಯದಲ್ಲಿ, ಪ್ರಯಾಣಿಕರು ಎಂಟಿಆರ್, ಐಟಿಸಿ, ಡುಕೆನ್, ಟೈಗರ್ ಗೋಟ್, ಆರ್‌ಕೆ ಕ್ಯಾಟರರ್, ಹಲ್ದಿರಾಮ್ ಸೇರಿದಂತೆ ಅನೇಕ ಪ್ರಸಿದ್ಧ ಕಂಪೆನಿಗಳಿಂದ ಆಹಾರ ಪಡೆಯಲಿದ್ದಾರೆ. ಕೋವಿಡ್ ಕಾರಣದಿಂದಾಗಿ ಈ ಸಮಯದಲ್ಲಿ ವಿಶೇಷ ರೈಲುಗಳು ಮಾತ್ರ ಓಡುತ್ತಿವೆ. ಹೀಗಾಗಿ ಹಳೆಯ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ.
ecatering.irctc.com ಮೂಲಕ ಪ್ರಯಾಣಿಕರು ಇ-ಕ್ಯಾಟರಿಂಗ್ ಸೇವೆಯ ಪ್ರಯೋಜನ ಪಡೆಯಬಹುದು. ಇದಲ್ಲದೆ ಫೋನ್ ಮೂಲಕ ಇ-ಕ್ಯಾಟರಿಂಗ್ ಸೇವೆಯನ್ನು ಸಹ ಪಡೆಯಬಹುದು. ಪ್ರಯಾಣಿಕರು ಐಆರ್‌ಟಿಸಿ ಇ-ಕ್ಯಾಟರಿಂಗ್ ಅಪ್ಲಿಕೇಶನ್ ʼಫುಡ್ ಆನ್ ಟ್ರ್ಯಾಕ್ʼ ಅನ್ನು ಡೌನ್ಲೋಡ್ ಮಾಡಬಹುದು. ಪ್ರಯಾಣಿಕರ ಅನುಕೂಲಕ್ಕಾಗಿ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಸಹ ನೀಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.