ಕಾಂಗ್ರೆಸ್‌ಗೆ OROP ಅಂದೆ‹ ಓನ್ಲಿ ರಾಹುಲ್, ಓನ್ಲಿ ಪ್ರಿಯಾಂಕಾ
Team Udayavani, Jan 29, 2019, 12:30 AM IST
ಹೊಸದಿಲ್ಲಿ: “ಕಳೆದ 70 ವರ್ಷಗಳಲ್ಲಿ ಯೋಧರ ಬಗ್ಗೆ ಎಲ್ಲರೂ ನಿರ್ಲಕ್ಷ್ಯ ವಹಿಸಿದರು. ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯೋಧರಿಗೆ ಸಮಾನ ಹುದ್ದೆ, ಸಮಾನ ಪಿಂಚಣಿ(ಒಆರ್‌ಒಪಿ) ಯೋಜನೆ ಅನುಷ್ಠಾನ ಮಾಡಲಾಯಿತು. ಕಾಂಗ್ರೆಸ್‌ನಲ್ಲೂ ಒಆರ್‌ಒಪಿ ಇದೆ. ಆದರೆ, ಕಾಂಗ್ರೆಸ್ ಪಾಲಿಗೆ ಒಆರ್‌ಒಪಿ ಎಂದರೆ ಓನ್ಲಿ ರಾಹುಲ್, ಓನ್ಲಿ ಪ್ರಿಯಾಂಕಾ.’
ಹೀಗೆಂದು ವ್ಯಂಗ್ಯಭರಿತ ಮಾತುಗಳಿಂದ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ. ಸೋಮವಾರ ಹಿಮಾಚಲಪ್ರದೇಶದಲ್ಲಿ ಬಿಜೆಪಿ ಸಮ್ಮೇಳನದಲ್ಲಿ ಮಾತನಾಡಿದ ಶಾ, ನಮ್ಮ ದೇಶವು ಬಲಿಷ್ಠ ಸರಕಾರವನ್ನು ಬಯಸುತ್ತದೆಯೇ ವಿನಾ ಅಸಹಾಯಕ ಸರಕಾರವನ್ನಲ್ಲ. ಯೋಧರನ್ನು ಕೊಲ್ಲುತ್ತಿರುವ ಪಾಕಿಸ್ಥಾನಕ್ಕೆ ತಕ್ಕ ಪ್ರತ್ಯುತ್ತರ ನೀಡುವಂಥ ಸರಕಾರ ದೇಶಕ್ಕೆ ಬೇಕಾಗಿದೆ ಎಂದಿದ್ದಾರೆ. ಜತೆಗೆ, ಬಡತನದ ಬಗ್ಗೆ ಮಾತನಾಡುವ ರಾಹುಲ್ ಅವರಲ್ಲಿ ನಾನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ. ದಶಕಗಳ ಕಾಲ ಆಡಳಿತದಲ್ಲಿದ್ದ ನಿಮ್ಮ ಪಕ್ಷದ ಸರಕಾರ ಬಡತನ ನಿರ್ಮೂಲನೆಗೆ ಮಾಡಿದ್ದಾದರೂ ಏನು? ಪ್ರತಿ ಕುಟುಂಬಕ್ಕೆ ಗ್ಯಾಸ್ ಸಿಲಿಂಡರ್ ವಿತರಿಸುವ ಕೆಲಸವನ್ನಾದರೂ ನೀವು ಮಾಡಿದ್ದೀರಾ ಎಂದು ಶಾ ಪ್ರಶ್ನಿಸಿದ್ದಾರೆ.
ನಮ್ಮ ಮೈತ್ರಿಗೆ ಕಾಂಗ್ರೆಸ್ ಬೆಂಬಲಿಸಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂದು ಕಾಂಗ್ರೆಸ್ ನಿಜಕ್ಕೂ ಬಯಸುವುದೇ ಆದಲ್ಲಿ, ಅದು ಎಸ್‌ಪಿ – ಬಿಎಸ್‌ಪಿ ಮೈತ್ರಿಗೆ ಬೆಂಬಲ ನೀಡಬೇಕು ಎಂದು ಎಸ್‌ಪಿ ನಾಯಕ ಅಖೀಲೇಶ್ ಯಾದವ್ ಹೇಳಿದ್ದಾರೆ. ಸೋಮವಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಅಲ್ಲದೆ, ನಾವು ಈಗಾಗಲೇ ಅಮೇಠಿ ಮತ್ತು ರಾಯ್‌ಬರೇಲಿಯನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಟ್ಟಿದ್ದೇವೆ ಎಂದೂ ಅವರು ಹೇಳಿದ್ದಾರೆ. ಪ್ರಿಯಾಂಕಾ ವಾದ್ರಾ ಸಕ್ರಿಯ ರಾಜಕಾರಣ ಪ್ರವೇಶದ ನಿರ್ಧಾರ ಘೋಷಣೆಯಾದ ಬೆನ್ನಲ್ಲೇ ಅಖೀಲೇಶ್ ಅವರ ಈ ಮಾತು ಮಹತ್ವ ಪಡೆದಿದೆ. ಇದೇ ವೇಳೆ, ಉತ್ತರಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಿದ್ದು, ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಹೌ ಈಸ್ ದ ಜೋಷ್
2014ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತ ಬಳಿಕ ಅಮೇಥಿಯಲ್ಲಿ ಸಕ್ರಿಯರಾಗಿರುವ ಕೇಂದ್ರ ಸಚಿವೆ ಸ್ಮತಿ ಇರಾನಿ, ಸೋಮವಾರ ಅಮೇಥಿಯ ಜನತೆಗೆಂದೇ ಸರ್ಜಿಕಲ್ ದಾಳಿಗೆ ಸಂಬಂಧಿಸಿದ ಉರಿ ಸಿನಿಮಾದ ಪ್ರದರ್ಶನವನ್ನು ಏರ್ಪಡಿಸಿದ್ದರು. ಈಗಾಗಲೇ ಜಿಲ್ಲೆಯ 5 ಅಸೆಂಬ್ಲಿ ಕ್ಷೇತ್ರಗಳಲ್ಲಿ ಮೊಬೈಲ್ ಥಿಯೇಟರ್‌ಗಳನ್ನು ಸ್ಥಾಪಿಸುವಲ್ಲಿ ನೆರವು ನೀಡಿರುವ ಸ್ಮತಿ, ಉಚಿತ ಸಿನಿಮಾ ಪ್ರದರ್ಶನದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ “ಹೌ ಈಸ್ ದ ಜೋಷ್’ ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಮೈತ್ರಿ ವಿಚಾರ ಬಂದಾಗ ಯಾವತ್ತೂ ಶಿವಸೇನೆಯೇ ಬಿಗ್ ಬ್ರದರ್. ಮೈತ್ರಿಗೆ ಸಂಬಂಧಿಸಿ ನಾವು ಯಾರ ಪ್ರಸ್ತಾಪವನ್ನೂ ಎದುರು ನೋಡುತ್ತಿಲ್ಲ.
ಸಂಜಯ್ ರಾವತ್, ಶಿವಸೇನೆ ಸಂಸದ
ಬಿಜೆಪಿಯು ಶಿವಸೇನೆ ಜತೆ ಮೈತ್ರಿ ಬಯಸುತ್ತದೆ. ಹಾಗೆಂದ ಮಾತ್ರಕ್ಕೆ ನಾವೇನೂ ಹತಾಶರಾಗಿ ಅದಕ್ಕೆ ಕಾಯುತ್ತಿಲ್ಲ. ಹಿಂದುತ್ವದ ಧೋರಣೆ ಹಿನ್ನೆಲೆಯಲ್ಲಿ ಮಾತ್ರವೇ ನಾವು ಮೈತ್ರಿಗೆ ಇಚ್ಛಿಸುತ್ತೇವೆ.
ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಸಿಎಂ
ಮೈತ್ರಿ ಸರಕಾರಗಳು ಭಾರತವನ್ನು ಶ್ರೇಷ್ಠ ಮತ್ತು ಬಲಿಷ್ಠವನ್ನಾಗಿಸಿದವು. ಆದರೆ, ಬಹು ಸಂಖ್ಯಾಬಲದ ಸರಕಾರವು ಜನರಿಗೆ ನೋಟು ಅಮಾನ್ಯ ಮತ್ತು ಜಿಎಸ್‌ಟಿಯ ಹೊರೆಯನ್ನು ನೀಡಿತು.
ಕಪಿಲ್ ಸಿಬಲ್, ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.