ಕೋವಿಡ್‌ನಿಂದ ಕುಸಿದ ವಾಯುಸಾರಿಗೆ; ಆದಾಯದಲ್ಲಿ 85.7% ನಷ್ಟ
Team Udayavani, Sep 20, 2020, 6:00 AM IST
ಸಾಂದರ್ಭಿಕ ಚಿತ್ರ
ಮಣಿಪಾಲ: ಕೋವಿಡ್ 19 ಅನ್ನು ತಡೆಯಲು ಆರಂಭಿಸಿದ ಲಾಕ್‌ಡೌನ್‌ನಿಂದಾಗಿ ದೇಶದ ಹಲವು ಉತ್ಪಾದನಾ ವಲಯಗಳು ಸಂಪಾದನೆಯಲ್ಲಿ ಕಡಿಮೆ ಸಾಮರ್ಥ್ಯವನ್ನು ಹೊಂದಿತ್ತು. ಇದರಲ್ಲಿ ವಾಯು ಸಾರಿಗೆಯೂ ಸೇರಿದ್ದು ಕೋವಿಡ್‌ನಿಂದಾಗಿ ಭಾರೀ ನಷ್ಟದ ಹಾದಿಯನ್ನು ತುಳಿದಿವೆ. 2020-21ರ ಆರ್ಥಿಕ ವರ್ಷದ ಪ್ರಥಮ ತ್ತೈಮಾಸಿಕ ಅವಧಿಯಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳ ಆದಾಯದಲ್ಲಿ ಶೇ. 85.7ರಷ್ಟು ಕುಸಿತ ಕಂಡು ಬಂದಿದೆ.
2019ರ ಎಪ್ರಿಲ್-ಜೂನ್ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳು 25,517 ಕೋಟಿ ರೂ. ಆದಾಯ ಗಳಿಸಿತ್ತು. ಆದರೆ 2020ರ ಎಪ್ರಿಲ್‌ನಿಂದ ಜೂನ್ ವರೆಗಿನ ಅವಧಿಯಲ್ಲಿ 3,651 ಕೋಟಿ ರೂ. ಆದಾಯ ಹೊಂದಲು ಮಾತ್ರ ಶಕ್ತವಾಗಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 85.7ರಷ್ಟು ಆದಾಯ ಕಡಿಮೆ.
ಮಾರ್ಚ್ 31ಕ್ಕೆ 97,760ರಷ್ಟು ಉದ್ಯೋಗಿಗಳು ನಿಲ್ದಾಣಗಳಲ್ಲಿ ಇದ್ದರೆ ಇದರ ಪ್ರಮಾಣ ಜುಲೈ 31ಕ್ಕೆ 64,514ಕ್ಕೆ ಇಳಿಕೆಯಾಗಿದೆ. ಇದಕ್ಕೆ ವಾಯು ಸಾರಿಗೆಯನ್ನು ಮಾರ್ಚ್ ತೃತೀಯ ವಾರದಿಂದ ಮೇ ಅಂತ್ಯದ ವರೆಗೆ ಸ್ಥಗಿತಗೊಳಿಸಿರುವುದು ಕಾರಣವಾಗಿದೆ.
5.85 ಕೋಟಿಯಿಂದ 1.2 ಕೋಟಿಗೆ !
2019-20ರ ಅವಧಿಯಲ್ಲಿ ದೇಶದಲ್ಲಿ ವಾಯು ಸಂಚಾರ ಪ್ರಮಾಣ 5.85 ಕೋಟಿಯಷ್ಟಿದ್ದರೆ 2020ರ ಎಪ್ರಿಲ್-ಜೂನ್ ಅವಧಿಗೆ ಅದರ ಪ್ರಮಾಣ 1.2 ಕೋಟಿಗೆ ಇಳಿಕೆಯಾಗಿದೆ.
ಏರ್ ಇಂಡಿಯಾ ಆದಾಯ ಏನಾಯಿತು?
ಏರ್ ಇಂಡಿಯಾದ ಆದಾಯವು 2020ರ ಎಪ್ರಿಲ್-ಜೂನ್ ಅವಧಿಯಲ್ಲಿ 1,531 ಕೋಟಿಗೆ ಸೀಮಿತವಾಗಿದೆ. 2019ರ ಅವಧಿಯಲ್ಲಿ ಇದು 7,066 ಕೋಟಿ. ರೂ. ಆಗಿತ್ತು.
ಉದ್ಯೋಗಗಳ ಸಂಖ್ಯೆಯಲ್ಲೂ ಕುಸಿತ
ಲಾಕ್‌ಡೌನ್ ಕಾರಣದಿಂದ ನಿರುದ್ಯೋಗಿಗಳ ಪ್ರಮಾಣವೂ ಏರಿಕೆಯಾಗಿದೆ. ಇದರಲ್ಲಿ ವಾಯು ಸಾರಿಗೆಯ ಪಾತ್ರ
ಶೇ. 7.07ರಷ್ಟಿದೆ. ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಶೇ. 74,887ರಷ್ಟು ಉದ್ಯೋಗಿಗಳು ವಾಯು ಸಾರಿಗೆಯಲ್ಲಿದ್ದರೆ ಜುಲೈ 31ಕ್ಕೆ ಇದು 69,589ಕ್ಕೆ ಕುಸಿದಿದೆ.
ನಿರ್ವಾಹಕರ ಆದಾಯ ಕಡಿಮೆ
ವಿಮಾನ ನಿಲ್ದಾಣದ ನಿರ್ವಾಹಕರ ಆದಾಯದಲ್ಲೂ ಇಳಿಕೆಯಾಗಿದ್ದು 2019ರ ಎಪ್ರಿಲ್-ಜೂನ್ ಅವಧಿಯಲ್ಲಿ 5,745 ಕೋಟಿ ರೂ. ಇದ್ದ ಆದಾಯ 2020ರ ಎಪ್ರಿಲ್-ಜೂನ್ ನಲ್ಲಿ 894 ಕೊಟಿ ರೂ.ಗೆ ಇಳಿದಿದೆ.
ಅಂತಾರಾಷ್ಟ್ರೀಯ ಏರ್
ಟ್ರಾಫಿಕ್ ಪ್ರಮಾಣ 93.45 ಲಕ್ಷದಿಂದ 11.55ಕ್ಕೆ ಇಳಿಕೆಯಾಗಿದೆ. ದೇಶಿಯ ಏರ್ ಟ್ರಾಫಿಕ್ 5.85 ಕೋಟಿಯಿಂದ 1.2 ಕೋಟಿಗೆ ಇಳಿಕೆಯಾಗಿದೆ. ಆದರೆ ಜುಲೈ ಬಳಿಕ ಪ್ಯಾಸೆಂಜರ್ ವಿಮಾನಗಳು “ವಂದೇ ಭಾರತ್ ಮಿಷನ್’ ಯೋಜನೆಯಡಿ ಜುಲೈ ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.