![Reel-Cinema](https://www.udayavani.com/wp-content/uploads/2024/07/Reel-Cinema-415x249.jpg)
Forbes ನಿಯತಕಾಲಿಕ ಬಿಡುಗಡೆ: ಜಗತ್ತಿನ ಶ್ರೀಮಂತರ ಪಟ್ಟಿಗೆ ಭಾರತದಿಂದ 25 ಮಂದಿ
Team Udayavani, Apr 4, 2024, 9:47 AM IST
![Forbes ನಿಯತಕಾಲಿಕ ಬಿಡುಗಡೆ: ಜಗತ್ತಿನ ಶ್ರೀಮಂತರ ಪಟ್ಟಿಗೆ ಭಾರತದಿಂದ 25 ಮಂದಿ](https://www.udayavani.com/wp-content/uploads/2024/04/foebs-620x374.jpg)
ಹೊಸದಿಲ್ಲಿ: ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿದೆ. ಈ ಪಟ್ಟಿಗೆ ಹೊಸತಾಗಿ 25 ಮಂದಿ ಶ್ರೀಮಂತ ಭಾರತೀಯರು ಸೇರ್ಪಡೆ ಯಾಗಿದ್ದಾರೆ.
ಈ ಪಟ್ಟಿಯಲ್ಲಿ 116 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಾಗತಿಕವಾಗಿ 9ನೇ ಸ್ಥಾನದಲ್ಲಿ, ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 84 ಬಿಲಿಯನ್ ಡಾಲರ್ ಆಸ್ತಿ ಯೊಂದಿಗೆ ಅದಾನಿ ಗ್ರೂಪ್ನ ಗೌತಮ್ ಅದಾನಿ ದೇಶದ ಎರಡನೇ, ವಿಶ್ವದ 17ನೇ ಸಿರಿವಂತ ವ್ಯಕ್ತಿಯಾಗಿದ್ದಾರೆ.
ಲ್ಯಾಂಡ್ಮಾರ್ಕ್ ಗ್ರೂಪ್ನ ರೇಣುಕಾ ಜಗ್ತಿಯಾನಿ ಕೂಡ ಹೊಸ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ದ್ದು, ಅತೀ ಹೆಚ್ಚು ಸಿರಿವಂತರಿರುವ 3ನೇ ದೇಶ ಭಾರತವಾಗಿದೆ.
– ಮುಕೇಶ್ ಅಂಬಾನಿ 166 ಬಿಲಿಯನ್ ಡಾಲರ್
– ಗೌತಮ್ ಅದಾನಿ 84 ಬಿಲಿಯನ್ ಡಾಲರ್
– ಶಿವ ನಾಡಾರ್ 36.9 ಬಿಲಿಯನ್ ಡಾಲರ್
– ಸಾವಿತ್ರಿ ಜಿಂದಾಲ್ 33.5 ಬಿಲಿಯನ್ ಡಾಲರ್
ಇದನ್ನೂ ಓದಿ: ನಾನು ಹಿಂದೂ, ರಾಮನ ಅವಮಾನ ಸಹಿಸಲಾರೆ… ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಗೌರವ್ ವಲ್ಲಭ್
ಟಾಪ್ ನ್ಯೂಸ್
![Reel-Cinema](https://www.udayavani.com/wp-content/uploads/2024/07/Reel-Cinema-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.