Politics: ಹತ್ತೇ ದಿನಕ್ಕೆ YSRCP ತೊರೆದ ಅಂಬಟಿ ರಾಯುಡು… ಮಾಜಿ ಕ್ರಿಕೆಟಿಗ ಹೇಳಿದ್ದೇನು?
Team Udayavani, Jan 6, 2024, 1:02 PM IST
ಅಮರಾವತಿ: ಎಂಟು ದಿನಗಳ ಹಿಂದೆಯಷ್ಟೇ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷಕ್ಕೆ (ವೈಎಸ್‌ಆರ್‌ಸಿಪಿ) ಸೇರ್ಪಡೆಯಾಗಿದ್ದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಶಾಕ್ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಪಕ್ಷ ತೊರೆಯುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವಿಟರ್ x ನಲ್ಲಿ ಟ್ವೀಟ್ ಮಾಡಿದ ರಾಯುಡು ‘ಕೆಲ ದಿನಗಳ ಕಾಲ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದಾರೆ. ಬೇರೆ ಯಾವ ಪಕ್ಷಕ್ಕೂ ಸೇರುವುದಿಲ್ಲ ಎಂದು ಸೂಚನೆ ನೀಡಿದ್ದಾರೆ. ಸಮಯ ಬಂದಾಗ ಮುಂದಿನ ಚಟುವಟಿಕೆಗಳ ಬಗ್ಗೆ ಬಹಿರಂಗಪಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ರಾಯುಡು ಜೂನ್ 2023 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ರಾಜಕೀಯಕ್ಕೆ ಸೇರುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು.
This is to inform everyone that I have decided to quit the YSRCP Party and stay out of politics for a little while. Further action will be conveyed in due course of time.
Thank You.
— ATR (@RayuduAmbati) January 6, 2024
ವಾರದೊಳಗೆ ರಾಜೀನಾಮೆ
ಅಂಬಟಿ ರಾಯುಡು ಕಳೆದ ವಾರ ಡಿಸೆಂಬರ್ 28 ರಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಅವರ ಸಮ್ಮುಖದಲ್ಲಿ ವೈಎಸ್‌ಆರ್‌ಸಿಪಿ ಸೇರ್ಪಡೆಗೊಂಡರು. ವಿಧಾನಸಭೆ ಅಥವಾ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎಂಬ ಪ್ರಚಾರ ಪಕ್ಷದಲ್ಲಿ ಜೋರಾಗಿತ್ತು. ಇದೇ ವೇಳೆ ರಾಜೀನಾಮೆ ವಿಚಾರ ಸಂಚಲನ ಮೂಡಿಸಿತ್ತು. ವೈಎಸ್‌ಆರ್‌ಸಿಪಿ ಸೇರುವ ಮುನ್ನ ಜಗನ್ ಸರ್ಕಾರ ಕೈಗೊಂಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅಂದು ಕಲ್ಯಾಣ ಕಾರ್ಯಕ್ರಮಗಳು ಇಷ್ಟವಾದ ಕಾರಣ ವೈಎಸ್‌ಆರ್‌ಸಿಪಿ ಸೇರುವುದಾಗಿ ಘೋಷಿಸಿದರು.
ರಾಜೀನಾಮೆ ಕಾರಣ..?
ಅಂಬಟಿ ರಾಯುಡು ಗುಂಟೂರಿನಿಂದ ಲೋಕಸಭೆಗೆ ಸ್ಪರ್ಧಿಸಲು ನಿರ್ಧರಿಸಿರುವುದು ಗೊತ್ತೇ ಇದೆ. ಟಿಕೆಟ್ ನೀಡುವ ಬಗ್ಗೆ ಪಕ್ಷದಿಂದ ಯಾವುದೇ ಭರವಸೆ ಇರಲಿಲ್ಲ. ಚುನಾವಣೆಗೆ ಸಮಯ ಸಮೀಪಿಸುತ್ತಿರುವ ಕಾರಣ ವಿಳಂಬವಾಗಿರುವುದರಿಂದ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಗುಂಟೂರು ಲೋಕಸಭೆಯಿಂದ ಸ್ಪರ್ಧೆ..?
ಅಂಬಟಿ ರಾಯುಡು ಅವರ ಹುಟ್ಟೂರು ಗುಂಟೂರು ಜಿಲ್ಲೆ. ಎಪಿಯಲ್ಲಿ ಕಾಪು ಜಾತಿಯು ಪ್ರಬಲ ಸಾಮಾಜಿಕ ಗುಂಪು. ಅವರು ಕ್ರಿಕೆಟ್‌ನಲ್ಲಿ ಮಿಂಚಿದರು ಮತ್ತು ಉತ್ತಮ ಹೆಸರು ಪಡೆದರು. ಫಾರ್ಮ್‌ನಲ್ಲಿರುವಾಗಲೇ ನಿವೃತ್ತಿ ಘೋಷಿಸಿದ ಅವರು ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು. ಹಾಗಾಗಿ ವೈಎಸ್‌ಆರ್‌ಸಿಪಿ ಸೇರಿದರು ಇದಾದ ಒಂದೇ ವಾರದಲ್ಲೇ ಪಕ್ಷಕ್ಕೆ ರಾಜೀನಾಮೆ ನೀಡುವ ಸುದ್ದಿ ಹೊರಬಿದ್ದಿದೆ. ಹೊಸ ಮಾಹಿತಿಗಳ ಪ್ರಕಾರ ರಾಯುಡು ಜನಸೇನಾ ಅಥವಾ ತೆಲುಗು ದೇಶಂ ಪಕ್ಷ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರಣ ಈಗಿನ ಗುಂಟೂರು ಸಂಸದ ಗಲ್ಲಾ ಜಯದೇವ್ ಮತ್ತೆ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಹಾಗಾಗಿ.. ರಾಯುಡು ಟಿಡಿಪಿ ಸೇರಿದರೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: Kantara: ನೀನು ಮುನ್ನಗ್ಗು..ʼಕಾಂತಾರʼ ಸಿನಿಮಾದ ಕುರಿತು ರಿಷಬ್ ಶೆಟ್ಟಿಗೆ ಅಭಯ ನೀಡಿದ ದೈವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.