ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ ಬಿಜೆಪಿಗೆ ಸೇರ್ಪಡೆ..!
ಮನೋಜ್ ತಿವಾರಿ ಟಿ ಎಮ್ ಸಿ ಗೆ, ಅಶೋಕ್ ದಿಂಡಾ ಬಿಜೆಪಿ ಗೆ ಸೇರ್ಪಡೆ
Team Udayavani, Feb 25, 2021, 1:56 PM IST
ಕೊಲ್ಕತ್ತಾ : ಮಾಜಿ ಕ್ರಿಕೆಟ್ ಆಟಗಾರ ಅಶೋಕ್ ದಿಂಡಾ ಬುಧವಾರ(ಫೆ. 25)ದಂದು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾಚವಣೆಯ ಮತ ಪ್ರಚಾರ ಸಭೆಗಳು ಬಿಡುವಿಲ್ಲದೇ ನಡೆಯುತ್ತಿದೆ. ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಸೆಲೆಬ್ರಿಟಿಗಳನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನವನ್ನು ಪಕ್ಷಗಳು ಮಾಡುತ್ತಿವೆ ಎನ್ನುವುದು ಕಂಡುಬರುತ್ತಿದೆ.
ಓದಿ : ಮತ್ತೆ ಅಭಿನಯಕ್ಕೆ ಸಜ್ಜಾದ ರಾಗಿಣಿ…‘ಕರ್ವಾ 3’ ಚಿತ್ರದಲ್ಲಿ ತುಪ್ಪದ ಬೆಡಗಿ
ಕೊಲ್ಕತ್ತಾದಲ್ಲಿ ನಡೆದ ಬಿಜೆಪಿ ಮತ ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವ ಬಾಬೂಲ್ ಸುಪ್ರಿಯೋ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರ್ಜುನ್ ಸಿಂಗ್ ಸಮ್ಮುಖದಲ್ಲಿ ಮಾಜಿ ಕ್ರಿಕೆಟಿಗೆ ಅಶೋಕ್ ದಿಂಡಾ ಬಿಜೆಪಿಗೆ ಸೇರಿದ್ದಾರೆ.
ಪ್ರಸ್ತುತ ಆಡಳಿತ ಸರ್ಕಾರದ ಅಧಿಕಾರಾವಧಿ ಮೇ 30 ಕ್ಕೆ ಕೊನೆಗೊಳ್ಳುವುದರಿಂದ 294 ಸ್ಥಾನಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆ ಹಿನ್ನಲೆಯಲ್ಲಿ ಅಶೋಕ್ ದಿಂಡಾ ಅವರನ್ನು ಬಿಜೆಪಿ ಸೇರ್ಪಡೆ ಮಾಡಿಕೊಂಡಿದೆ.
ಅಶೋಕ್ ದಿಂಡಾ ಇತ್ತೀಚೆಗೆ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಬಲ ಗೈ ಬೌಲರ್ ಆಗಿದ್ದ ಅಶೋಕ್ ದಿಂಡಾ 13 ಏಕದಿನ ಪಂದ್ಯ ಹಾಗೂ ಒಂಬತ್ತು ಟಿ ಟ್ವೆಂಟಿ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ನಿನ್ನೆ(ಬುಧವಾರ. ಫೆ.24), ಕ್ರಿಕೆಟಿಗ ಮನೋಜ್ ತಿವಾರಿ, ಕೋಲ್ಕತ್ತಾದ ಬಳಿ ನಡೆದ ತೃಣಮೂಲ ಕಾಂಗ್ರೆಸ್(ಟಿ ಎಮ್ ಸಿ)ನ ಮತ ಪ್ರಚಾರ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಟಿ ಎಮ್ ಸಿ ಗೆ ಸೇರ್ಪಡೆಗೊಂಡಿದ್ದರು.
ಓದಿ : ಪೆಟ್ರೋಲ್-ಡೀಸೆಲ್ ಬೆಲೆ ನಿಯಂತ್ರಣ ಕೇಂದ್ರ ಸರ್ಕಾರದ ಕೈಯಲ್ಲಿಲ್ಲ: ಅಶ್ವಥ್ ನಾರಾಯಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.