ಪುತ್ರನ ಔದಾರ್ಯ: ಉಪಚುನಾವಣೆ ಗೆದ್ದ ನಾಗಾಲ್ಯಾಂಡ್ ಮಾಜಿ ಸಿಎಂ
Team Udayavani, Aug 3, 2017, 11:54 AM IST
ಕೊಹಿಮಾ : ನಾಗಾಲ್ಯಾಂಡ್ ಮಾಜಿ ಮುಖ್ಯಮಂತ್ರಿ ಮತ್ತು ಆಳುವ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಇದರ ನಾಮಾಂಕಿತ ಅಭ್ಯರ್ಥಿಯಾಗಿದ್ದ ಡಾ. ಶುರೋಝೆಲೀ ಲೀಝೆತ್ಸು ಅವರು 10-ಉತ್ತರ ಅಂಗಾಮಿ-1 ವಿಧಾನಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ.
ಡಾ. ಲೀಝೆತ್ಸು ಅವರಿಗೆ 8,026 ಮತಗಳು ಪ್ರಾಪ್ತವಾಗಿವೆ; ಅವರ ನಿಕಟ ಏಕೈಕ ಎದುರಾಳಿಯಾಗಿದ್ದ ಪಕ್ಷೇತರ ಅಭ್ಯರ್ಥಿ ಕೇಖ್‌ರೀ ಯೋಮೆ ಅವರಿಗೆ 4,558 ಮತಗಳು ಪ್ರಾಪ್ತವಾಗಿವೆ. ಹಾಗಾಗಿ ಲೀಝೆತ್ಸು ಅವರ ವಿಜಯ 3,470 ಮತಗಳ ಅಂತರದಲ್ಲಿ ದಾಖಲಾಗಿದೆ.
ಈ ಉಪ ಚುನಾವಣೆಗೆ ಲೀಝೆತ್ಸು ಅವರ ಪುತ್ರ, ಹಾಲಿ ಶಾಸಕ ಕ್ರೀಹು ಲೀಝೆತ್ಸು ಕಳೆದ ಮೇ 24ರಂದು ನೀಡಿದ್ದ ರಾಜೀನಾಮೆಯೇ ಕಾರಣವಾಯಿತು. ತಂದೆ ವಿಧಾನಸಭೆಗೆ ಚುನಾಯಿತರಾಗುವುದಕ್ಕಾಗಿ ಪುತ್ರ ತನ್ನ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.