![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 28, 2018, 6:00 AM IST
ರಾಯುಪುರ: ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಸಿಬ್ಬಂದಿ ಸಾಗುತ್ತಿದ್ದ ನೆಲಬಾಂಬ್ ನಿರೋಧಕ ವಾಹನ(ಎಂಪಿವಿ)ವನ್ನು ನಕ್ಸಲರು ಸ್ಫೋಟಿಸಿದ ಪರಿಣಾಮ, ಸಿಆರ್‌ಪಿಎಫ್ನ ನಾಲ್ವರು ಯೋಧರು ಹುತಾತ್ಮರಾಗಿ, ಇಬ್ಬರು ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಸಿಆರ್‌ಪಿಎಫ್ನ ಮುರ್ದಂಡಾ ಶಿಬಿರದ ಬಳಿಕ ಸಂಜೆ 4 ಗಂಟೆ ವೇಳೆಗೆ ಈ ದಾಳಿ ನಡೆದಿದೆ. 6 ಮಂದಿ ಯೋಧರನ್ನು ಹೊತ್ತೂಯ್ಯುತ್ತಿದ್ದ ವಾಹನವು ಶಿಬಿರಕ್ಕೆ ತಲುಪಲು ಇನ್ನೇನು ಒಂದು ಕಿ.ಮೀ. ಇದೆ ಎನ್ನುವಾಗಲೇ ನಕ್ಸಲರು ಪ್ರಬಲ ನೆಲಬಾಂಬ್ ಸ್ಫೋಟಿಸಿ ಕುಕೃತ್ಯ ಎಸಗಿದ್ದಾರೆ. ಸ್ಫೋಟದ ತೀವ್ರತೆಗೆ ನಾಲ್ವರು ಯೋಧರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ರಕ್ಷಣಾ ತಂಡ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿತು ಎಂದು ಬಿಜಾಪುರ ಎಸ್‌ಪಿ ಮೋಹಿತ್ ಗಾರ್ಗ್ ತಿಳಿಸಿದ್ದಾರೆ.
ಛತ್ತೀಸ್‌ಗಡ ವಿಧಾನಸಭೆಗೆ ನ.12ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಈ ಪೈಕಿ ನಕ್ಸಲ್‌ಪೀಡಿತ 18 ಕ್ಷೇತ್ರಗಳೂ ಸೇರಿವೆ. ಈಗಾಗಲೇ ನಕ್ಸಲರು ಚುನಾವಣೆ ಬಹಿಷ್ಕರಿಸುವಂತೆ ಬಸ್ತಾರ್ ಪ್ರಾಂತ್ಯದಲ್ಲಿ ಪೋಸ್ಟರ್‌ಗಳನ್ನೂ ಅಳವಡಿಸಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.