ಕಾಸರಗೋಡಿನ ನಾಲ್ವರು ಐಸಿಸ್ ಉಗ್ರರ ಸಾವು
Team Udayavani, Mar 31, 2018, 6:00 AM IST
ಕಾಸರಗೋಡು: ಐಸಿಸ್‌ಗೆ ಸೇರ್ಪಡೆಗೊಂಡ ಕಾಸರಗೋಡಿನ ನಾಲ್ವರು ಅಫ್ಘಾನಿಸ್ಥಾನದಲ್ಲಿ ಅಮೆರಿಕ ಸೇನೆಯ ಬಾಂಬ್ ದಾಳಿಗೆ ಬಲಿಯಾಗಿದ್ದಾರೆ. ಕಾಸರಗೋಡು ಪಡನ್ನದ ನಿವಾಸಿಗಳಾದ ಶಿಹಾಬ್, ಪತ್ನಿ ಅಜ್ಮಲಾ, ಅವರ ಮಗು ಮತ್ತು ತೃಕ್ಕರಿಪುರದ ಮುಹಮ್ಮದ್ ಮನ್ಸಾದ್ ಮೃತಪಟ್ಟವರು ಎಂದು ವರದಿಯಾಗಿದೆ. ನಂಗರ ಹಾರ್ ಪ್ರದೇಶದ ಐಸಿಸ್ ಶಿಬಿರದ ಮೇಲೆ ಅಮೆರಿಕದ ವಾಯುಪಡೆ ನಡೆಸಿದ ಬಾಂಬ್ ದಾಳಿಯಲ್ಲಿ ಇವರು ಸಾವಿಗೀಡಾಗಿದ್ದಾರೆ. ಕೇರಳದಿಂದ ನಾಪತ್ತೆಯಾಗಿದ್ದ ಇವರು ಅಫ್ಘಾನ್ ತಲುಪಿದ್ದರು.
ಕೇರಳದಿಂದ 22 ಮಂದಿ ಐಸಿಸ್ ಸೇರ್ಪಡೆಯಾಗಿದ್ದಾರೆಂದು ಪೊಲೀಸ್ ವರದಿ ಮಾಡಿತ್ತು. ಕೇರಳದಲ್ಲಿ ಐಸಿಸ್ ಚಟುವಟಿಕೆ ನೇತೃತ್ವ ವಹಿಸಿದ್ದ ಶಜೀರ್ ಮಂಗಲಶೆರಿ ಸಹಿತ 14 ಮಂದಿ ಕಳೆದ ವರ್ಷ ಸಿರಿಯಾದಲ್ಲಿ ಸೇನೆ ಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಾವಿಗೀಡಾಗಿದ್ದರು ಎಂದು ರಹಸ್ಯ ತನಿಖಾ ವಿಭಾಗ ಖಚಿತಪಡಿಸಿತ್ತು. ಕಾಸರಗೋಡಿನ ನಿವಾಸಿಗಳನ್ನು ಐಸಿಸ್ ಕೇಂದ್ರಕ್ಕೆ ತಲುಪಿಸಲು ನೆರವಾದ ಪ್ರಕರಣದಲ್ಲಿ ಬಿಹಾರ್ ನಿವಾಸಿ ಯಾಸ್ಮಿನ್ ಅಹಮ್ಮದ್‌ಗೆ ಎನ್‌ಐಎ ನ್ಯಾಯಾಲಯ ಏಳು ವರ್ಷ ಸಜೆ ವಿಧಿಸಿತ್ತು. 2016ರ ಜು.30ರಂದು ಪುತ್ರನೊಂದಿಗೆ ವಿದೇಶಕ್ಕೆ ಪಲಾಯನಗೈಯಲು ಯತ್ನಿಸುತ್ತಿದ್ದಾಗ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾಸ್ಮಿನ್‌ಳನ್ನು ಬಂಧಿಸಲಾಗಿತ್ತು.
ಕಾಸರಗೋಡು ನಿವಾಸಿಗಳಾದ 15 ಮಂದಿ ಯನ್ನು ಭಯೋತ್ಪಾದಕ ಸಂಘಟನೆಯಾದ ಐಸಿಸ್‌ಗೆ ಸೇರ್ಪಡೆಗೊಳಿಸಲು ವಿದೇಶಕ್ಕೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಯಾಸ್ಮಿನ್ ವಿರುದ್ಧ ಕೇಸು ದಾಖಲಿಸಲಾಗಿತ್ತು. ನಿಗೂಢ ರೀತಿಯಲ್ಲಿ ಕಾಸರಗೋಡಿನ ತೃಕ್ಕರಿಪುರದಿಂದ ನಾಪತ್ತೆಯಾಗಿದ್ದವರಲ್ಲಿದ್ದ ಅಬ್ದುಲ್ ರಶೀದ್ ಅಬ್ದುಲ್ಲನೊಂದಿಗೆ ಯಾಸ್ಮಿನ್ ನಿಕಟ ಸಂಪರ್ಕ ವಿತ್ತೆಂದು ತನಿಖೆಯಿಂದ ತಿಳಿದು ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.