ಡೇರಾ ಮುಖ್ಯಸ್ಥನ ಪಲಾಯನ ಸಂಚು: ಇನ್ನೂ 4 ಪೊಲೀಸರು ಸೆರೆ

Team Udayavani, Sep 15, 2017, 11:16 AM IST

Dera Chief5-700.jpg

ಹೊಸದಿಲ್ಲಿ : ಕಳೆದ ಆಗಸ್ಟ್‌ 24ರಂದು ಡೇರಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ಗೆ ಅತ್ಯಾಚಾರ ಅಪರಾಧಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದ್ದ ಸಂದರ್ಭದಲ್ಲಿ ಕೋರ್ಟ್‌ ಆವರಣದಿಂದಲೇ ಆತ ಪರಾರಿಯಾಗುವುದಕ್ಕೆ ಸಹಕರಿಸಿದ ಸಂಚಿನಲ್ಲಿ ಭಾಗಿಯಾಗಿದ್ದ ನಾಲ್ವರು ಪೊಲೀಸರ ಸಹಿತ ಒಟ್ಟು ಐವರನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.

ಡೇರಾ ಮುಖ್ಯಸ್ಥನ ಪಲಾಯನಕ್ಕೆ ಸಹಕರಿಸಿದ ಸಂಚಿನಲ್ಲಿ ಭಾಗಿಯಾಗಿದ್ದ  ಮೂವರು ಹರಿಯಾಣ ಪೊಲೀಸ್‌ ಕಮಾಂಡೋಗಳನ್ನು ಪಂಚಕುಲದಲ್ಲಿ  ನಿನ್ನೆ ಗುರುವಾರ ಬಂಧಿಸಲಾಗಿದೆಯಾದರೆ 
ರಾಜಸ್ಥಾನ ಪೊಲೀಸ್‌ ಸಿಬಂದಿ ಓಂ ಪ್ರಕಾಶ್‌ ಎಂಬಾತನನ್ನು ಹನುಮಾನ್‌ಗಢದಲ್ಲಿ ಸೆರೆ ಹಿಡಿಯಲಾಯಿತು. 

ಬಂಧಿತ ಕಮಾಂಡೋಗಳನ್ನು ಹೆಡ್‌ ಕಾನ್‌ಸ್ಟೆಬಲ್‌ (ಎಚ್‌ಸಿ) ಅಮಿತ್‌ ಕುಮಾರ್‌ ಮತ್ತು ರಾಜೇಶ್‌ ಕುಮಾರ್‌ ಹಾಗೂ ಕಾನ್‌ಸ್ಟೆಬಲ್‌ ರಾಜೇಶ್‌ ಕುಮಾರ್‌ ಎಂದು ಗುರುತಿಸಲಾಗಿದೆ. 

ಹರಿಯಾಣ ಪೊಲೀಸರು ನಡೆಸಿರುವ ತನಿಖೆಯಿಂದ ಈ ಮೂವರು ಕಮಾಂಡೋಗಳು ಮಾತ್ರವಲ್ಲದೆ ಡೇರಾ ಮುಖ್ಯಸ್ಥನ ಕೋರ್ಟ್‌ ರೂಮ್‌ ಪಲಾಯನ ಸಂಚಿನಲ್ಲಿ ಇತರ ರಾಜ್ಯಗಳ, ಸಮವಸ್ತ್ರದಲ್ಲಿದ್ದ ಆದರೆ ಅಧಿಕೃತವಾಗಿ ಕರ್ತವ್ಯದಲ್ಲಿ ಇಲ್ಲದಿದ್ದ, ಏಳು ಮಂದಿ ಪೊಲೀಸರು ಭಾಗಿಗಳಾಗಿರುವುದು ಪತ್ತೆಯಾಗಿದೆ. 

ರಾಮ್‌ ರಹೀಮ್‌ ಅಪರಾಧಿ ಎಂದು ಘೋಷಿಸಲ್ಪಟ್ಟು 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಕೋರ್ಟ್‌ ತೀರ್ಪಿನ ದಿನದಂದು ಇವರೆಲ್ಲ ರಾಮ್‌ ರಹೀಮ್‌ ಜತೆಗೆ ಕೋರ್ಟಿಗೆ ಬಂದವರಾಗಿದ್ದಾರೆ. 

ಪಂಚಕುಲ ಪೊಲೀಸ್‌ ಕಮಿಶನರ್‌ ಎ ಎಸ್‌ ಚಾವ್ಲಾ ಅವರು, “ಪಂಜಾಬ್‌, ಚಂಡೀಗಢ ಮತುತ ರಾಜಸ್ಥಾನದ ಪೊಲೀಸ್‌ ಸಿಬಂಧಿಗಳು ಮಾತ್ರವಲ್ಲದೆ ಹರಿಯಾಣ ಪೊಲೀಸ್‌ನ ಮೂವರು ಕಮಾಂಡೋಗಳು ಆಗಸ್ಟ್‌ 25ರಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು’ ಎಂದು ತಿಳಿಸಿದ್ದಾರೆ. 

ಮೂವರು ಹರಿಯಾಣ ಪೊಲೀಸ್‌ ಕಮಾಂಡೋಗಳಿಗೆ ಡೇರಾ ಮುಖ್ಯಸ್ಥನ ಕೋರ್ಟ್‌ ರೂಮ್‌ ಪಲಾಯನ ಸಂಚಿಗೆ ಸಂಬಂಧಿಸಿದ ತನಿಖೆಗೆ ಸಮನ್ಸ್‌ ನೀಡಿ ಕರೆಸಿಕೊಂಡ ಸಂದರ್ಭದಲ್ಲಿ “ತಾವು ತೀರ್ಪು ಪ್ರಕಟನೆಯ ದಿನದಂದು ಪಂಚಕುಲಕ್ಕೆ ಯಾಕೆ ಬಂದಿದ್ದರು ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಕೊಟ್ಟಿಲ್ಲ’ ಎಂದು ಚಾವ್ಲಾ ಹೇಳಿದರು. 

ಈ ಬಂಧನಗಳಿಗೆ ಹೊರತಾಗಿ ಮತ್ತು ಪ್ರತ್ಯೇಕವಾಗಿ ಡೇರಾ ಮುಖ್ಯಸ್ಥನ ನಿಕಟವರ್ತಿ, ವಕ್ತಾರ, ಹಿಂಸೆಗೆ ಪ್ರಚೋದನೆ ನೀಡಿದಾತ, ದಿಲಾವರ್‌ ಸಿಂಗ್‌ ಇನ್ಸಾನ್‌ನನ್ನು ಹರಿಯಾಣ ಪೊಲೀಸರು ನಿನ್ನೆ ಗುರುವಾರ ಸೋನೇಪತ್‌ನಲ್ಲಿ ಸೆರೆ ಹಿಡಿದಿದ್ದಾರೆ. 

ಟಾಪ್ ನ್ಯೂಸ್

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.