ಐವರಲ್ಲಿ ನಾಲ್ವರು ಬಿಹಾರಿ ಮಹಿಳೆಯರು ಎಂದೂ ಇಂಟರ್ನೆಟ್ ಬಳಸಿಲ್ಲ!
Team Udayavani, Dec 20, 2020, 2:45 PM IST
ಮಣಿಪಾಲ: ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಭಾಗವಾಗಿ ಸರ್ವೇ ಆಫ್ ಇಂಡಿಯಾ ಮಾಡಿದ ಸಮೀಕ್ಷೆಯಲ್ಲಿ ಬಿಹಾರಿ ಮಹಿಳೆಯರು ಅತೀ ಕಡಿಮೆ ಪ್ರಮಾಣದಲ್ಲಿ ಅಂತರ್ಜಾಲ ಬಳಕೆ ಮಾಡುತ್ತಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಬಿಹಾರದಲ್ಲಿ ಕೇವಲ ಶೇ. 20.6 ರಷ್ಟು ಮಹಿಳೆಯರ ಮಾತ್ರ ಅಂತರ್ಜಾಲ ಬಳಕೆ ಮಾಡುತ್ತಾರೆ ಎನ್ನುತ್ತದೆ ಸರ್ವೇ. ಮಹಿಳೆಯರ ಇಂಟರ್ನೆಟ್ ಬಳಕೆಯಲ್ಲಿ ಸಿಕ್ಕಿಂ ಮೊದಲ ಸ್ಥಾನದಲ್ಲಿದೆ. (ಶೇ. 76.7). ಪುರುಷರ ಅಂತರ್ಜಾಲ ಬಳಕೆಯಲ್ಲಿ ಮೇಘಾಲಯ ಕೊನೆಯ ಸ್ಥಾನದಲ್ಲಿದ್ದು, (ಶೇ. 42.1) ಹಾಗೂ ಅತೀ ಹೆಚ್ಚು ಗೋವಾ ಅತೀ ಹೆಚ್ಚು ಅಂದರೆ ಶೇ. 82.9 ರಷ್ಟು ಪುರುಷರು ಇಂಟರ್ನೆಟ್ ಬಳಕೆ ಮಾಡುತ್ತಾರೆ.
2019ರ ಕೊನೆಯಲ್ಲಿ ನಡೆಸಲಾದ ಸಮೀಕ್ಷೆ ಇದಾಗಿದ್ದು, ದೇಶದ ಒಟ್ಟು 22 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಎರಡು ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಮೀಕ್ಷೆ ನಡೆಸಲಾಗಿಲ್ಲ. ಮಹಿಳೆಯರು ಹಾಗೂ ಪುರುಷರು ಮತ್ತು ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಡುವೆ ಸರ್ವೇ ಮಾಡಲಾಗಿದೆ. ಕೇಂದ್ರ ಸರಕಾರದ ಡಿಜಿಟಲ್ ಯೋಜನೆಗಳಿಗೆ ಈ ಸಮೀಕ್ಷೆ ಸಹಾಯಕವಾಗಲಿದೆ.
718.75 ಮಿಲಿಯನ್ ಇಂಟರ್‌ನೆಟ್ ಬಳಕೆದಾರರು
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಅಂಕಿ ಅಂಶಗಳ ಪ್ರಕಾರ 2019ರ ವೇಳೆಯಲ್ಲಿ ಭಾರತದಲ್ಲಿ 718.75 ಮಿಲಿಯನ್ ಇಂಟರ್‌ನೆಟ್ ಬಳಕೆದಾರರಿದ್ದು 2018ರಿಂದ ಶೇ. 19 ಹೆಚ್ಚಳವಾಗಿದೆ.
ಅತೀ ಕಡಿಮೆ ಅಂತರ್ಜಾಲ ಬಳಕೆ ಮಾಡುವ 5 ರಾಜ್ಯಗಳು (ಮಹಿಳೆಯರು)
1. ಬಿಹಾರ ಶೇ. 20.6
2. ಆಂಧ್ರಪ್ರದೇಶ ಶೇ.21
3. ತ್ರಿಪುರ ಶೇ. 22.9
4. ಪಶ್ಚಿಮಬಂಗಾಲ ಶೇ. 25.5
5. ತೆಲಂಗಾಣ ಶೇ. 26.5
ಇದನ್ನೂ ಓದಿ:ತುಕ್ಕು ಹಿಡಿಯುತ್ತಿವೆ ನಿರುಪಯುಕ್ತ ಸರಕಾರಿ ಆ್ಯಂಬುಲೆನ್ಸ್‌ಗಳು !
ಅತೀ ಹೆಚ್ಚು ಅಂತರ್ಜಾಲ ಬಳಕೆ ಮಾಡುವ 5 ರಾಜ್ಯಗಳು (ಮಹಿಳೆಯರು)
1.ಸಿಕ್ಕಿಂ ಶೇ. 76.7
2.ಗೋವಾ ಶೇ. 73.7
3.ಮಿಜೋರಾಂ ಶೇ. 67.6
4.ಕೇರಳ ಶೇ .61.1
5.ಲಡಾಖ್ ಶೇ. 56.4
ಅತೀ ಕಡಿಮೆ ಅಂತರ್ಜಾಲ ಬಳಕೆ ಮಾಡುವ 5 ರಾಜ್ಯಗಳು (ಪುರುಷರು)
1.ಮೇಘಾಲಯ ಶೇ. 42.1
2.ಅಸ್ಸಾಂ ಶೇ.42.3
3.ಬಿಹಾರ ಶೇ. 43.6
4.ತ್ರಿಪುರಾ ಶೆ. 45.7
5 ಅಂಡಮಾನ್ ನಿಕೋಬಾರ್ ಶೆ. 46.5
ಅತೀ ಹೆಚ್ಚು ಅಂತರ್ಜಾಲ ಬಳಕೆ ಮಾಡುವ 5 ರಾಜ್ಯಗಳು (ಪುರುಷರು)
1.ಗೋವಾ ಶೇ. 82.9
2.ಲಕ್ಷದ್ವೀಪ ಶೇ. 80.3
3.ಮಿಜೊರಾಂ ಶೇ. 79.7
4.ಸಿಕ್ಕಿಂ ಶೇ. 78.2
5.ಕೇರಳ ಶೇ.76.1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.