Shivashakti: ಚಂದ್ರನ ಶಿವಶಕ್ತಿ ಪಾಯಿಂಟ್‌ನಲ್ಲಿ ಪ್ರಜ್ಞಾನ್‌ನಿಂದ ಶಿಲೆಗಳ ತುಣುಕು ಪತ್ತೆ!
ಚಂದಿರನ ವಾತಾವರಣ, ಶಿಲೆಗಳ ಹಂಚಿಕೆ, ಮೂಲ ತಿಳಿಯಲು ಸಹಕಾರಿ
Team Udayavani, Jul 2, 2024, 11:32 PM IST
ನವದೆಹಲಿ: ಚಂದ್ರನ ಕುರಿತ ಅನ್ವೇಷಣೆಯಲ್ಲಿ ಮಹತ್ವದ ಹೆಜ್ಜೆಯೆಂಬಂತೆ, ಭಾರತದ ಚಂದ್ರಯಾನ-3ರ ಪ್ರಜ್ಞಾನ್ ರೋವರ್ ಪತ್ತೆ ಹಚ್ಚಿದ್ದ ಕೆಲವು ಪ್ರಮುಖ ಅಂಶಗಳು ಇತ್ತೀಚೆಗೆ ಬಹಿರಂಗಗೊಂಡಿವೆ.
ಚಂದಿರನ ಒಂದು ದಿನ (ಭೂಮಿಯ 29.5 ದಿನ)ದಲ್ಲಿ ರೋವರ್ ಶಶಾಂಕನ ದಕ್ಷಿಣ ಮೇಲ್ಮೈನಲ್ಲಿ ಸುಮಾರು 103 ಮೀಟರ್‌ನಷ್ಟು ಸುತ್ತಾಡಿದೆ. ವಿಕ್ರಂ ಲ್ಯಾಂಡರ್ ಇಳಿದಿದ್ದಂತಹ ಸ್ಥಳದಲ್ಲಿರುವ ಸಣ್ಣ ಕುಳಿಯಲ್ಲಿ ಹಾಗೂ ಆ ಕುಳಿಯ ಗೋಡೆಗಳಲ್ಲಿ ಮತ್ತು ಅಂಚಿನ ಸುತ್ತಲೂ ಸಣ್ಣದಾದ ಶಿಲೆಗಳ ತುಣುಕು (1ರಿಂದ 11.5 ಸೆ.ಮೀ. ಗಾತ್ರದವು) ಗಳನ್ನು ರೋವರ್ ಪತ್ತೆಹಚ್ಚಿತ್ತು. ಗ್ರಹದ ತಳಪಾಯವನ್ನು ಆವರಿಸಿರುವ ಘನ ಪದರದಲ್ಲಿನ ಶಿಲೆಗಳು ಕ್ರಮೇಣ ಒರಟಾಗುತ್ತವೆ ಎಂಬ ಈ ಹಿಂದಿನ ಅಧ್ಯಯನಗಳಿಗೆ ಇದು ಪೂರಕವಾಗಿದೆ.
ಶಿವಶಕ್ತಿ ಪಾಯಿಂಟ್‌ನ ಸುಮಾರು 30 ಮೀಟರ್‌ನಷ್ಟು ಪಶ್ಚಿಮಕ್ಕೆ ಹೋದಂತೆ ಶಿಲೆಗಳ ತುಣುಕುಗಳ ಪ್ರಮಾಣ ಹಾಗೂ ಗಾತ್ರವೂ ಹೆಚ್ಚಿರುವುದನ್ನು ರೋವರ್ ಗುರುತಿಸಿತ್ತು. ಇವುಗಳ ಪೈಕಿ 2 ಶಿಲೆಗಳು ಅವನತಿಯ ಕುರುಹನ್ನು ಪ್ರದರ್ಶಿಸಿದೆ. ಅಂದರೆ, ಕಾಲಗಳು ಉರುಳಿದಂತೆ ಚಂದಿರನ ಮೇಲ್ಮೈನಲ್ಲಿರುವ ವಸ್ತುಗಳ ಮೇಲೆ ವಾತಾವರಣವು ಹೇಗೆ ಪ್ರಭಾವ ಬೀರುತ್ತವೆ ಎನ್ನುವುದರ ಮಾಹಿತಿಯನ್ನು ಇದು ನೀಡುತ್ತದೆ. ಶಿಲೆಗಳ ತುಣುಕುಗಳ ಹಂಚಿಕೆ ಮತ್ತು ಮೂಲವನ್ನು ತಿಳಿಯಲು ಇದು ಸಹಾಯಕವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.