Wine ನಾಶಪಡಿಸಲು 1425 ಕೋಟಿ ರೂ. ಪಾವತಿ! ಫ್ರಾನ್ಸ್‌ಗೆ ಈ ಮೊತ್ತ ನೀಡಿದ ಐರೋಪ್ಯ ಒಕ್ಕೂಟ
ವೈನ್ ಬೆಲೆ ಕುಸಿತದ ಹಿನ್ನೆಲೆ ಈ ಕ್ರಮ
Team Udayavani, Aug 26, 2023, 8:40 PM IST
ನವದೆಹಲಿ:ಬೆಲೆ ತೀರಾ ಕುಸಿತಗೊಂಡಾಗ ರೈತರು ಪ್ರತಿಭಟನಾರ್ಥವಾಗಿ ಟೊಮೆಟೋ, ಈರುಳ್ಳಿಯಂಥ ತರಕಾರಿಗಳನ್ನು ರಸ್ತೆಗೆ ಎಸೆಯುವುದನ್ನು ನೀವು ನೋಡಿರುತ್ತೀರಿ. ಆದರೆ, ಎಲ್ಲಾದರೂ ಮದ್ಯವನ್ನು ಈ ರೀತಿ ನಾಶ ಮಾಡಿದ್ದನ್ನು ಕೇಳಿದ್ದೀರಾ?
ಫ್ರಾನ್ಸ್‌ನಲ್ಲಿ ವೈನ್ ಬೆಲೆ ಇಳಿಕೆಯಾಗಿದೆ ಎಂಬ ಕಾರಣಕ್ಕೆ ಹೆಚ್ಚುವರಿ ವೈನ್ ಅನ್ನು ನಾಶ ಮಾಡಲಾಗುತ್ತಿದೆ. ವಿಶೇಷವೆಂದರೆ, ವೈನ್ ನಾಶಪಡಿಸಲೆಂದೇ ಫ್ರಾನ್ಸ್‌ಗೆ ಐರೋಪ್ಯ ಒಕ್ಕೂಟವು ಬರೋಬ್ಬರಿ 1425.70 ಕೋಟಿ ರೂ.(160 ದಶಲಕ್ಷ ಯೂರೋ) ಗಳನ್ನು ನೀಡಿದೆ.
ಕ್ರಾಫ್ಟ್ ಬಿಯರ್‌ನ ಜನಪ್ರಿಯತೆ ಹೆಚ್ಚಿರುವುದು, ಜೀವನವೆಚ್ಚ ಹೆಚ್ಚಳವಾಗಿರುವುದು, ಅತಿಯಾದ ಉತ್ಪಾದನೆ ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ ವೈನ್ ಕುಡಿಯುವವರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ಐರೋಪ್ಯ ಒಕ್ಕೂಟದಲ್ಲಿ ವೈನ್ ಉತ್ಪಾದನೆಯು ಶೇ.4ರಷ್ಟು ಹೆಚ್ಚಳವಾಗಿದ್ದರೂ, ಬಳಕೆ ಮಾತ್ರ ಶೇ.34ರಷ್ಟು ಕುಸಿತಗೊಂಡಿದೆ. ಹೀಗಾಗಿ, ವೈನ್ ಬೆಲೆಯೂ ಇಳಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಐರೋಪ್ಯ ಒಕ್ಕೂಟವು 1,420.70 ಕೋಟಿ ರೂ.ಗಳನ್ನು ಫ್ರಾನ್ಸ್‌ಗೆ ಪಾವತಿಸಿದೆ. ಈ ಮೊತ್ತವನ್ನು ಬಳಸಿಕೊಂಡು ಮಾರಾಟವಾಗದೇ ಉಳಿದ ವೈನ್ ಅನ್ನು ಖರೀದಿಸಿ, ಅದರಲ್ಲಿರುವ ಆಲ್ಕೋಹಾಲ್ ಅನ್ನು ಪ್ರತ್ಯೇಕಿಸಿ ಹ್ಯಾಂಡ್ ಸ್ಯಾನಿಟೈಸರ್, ಸ್ವತ್ಛಗೊಳಿಸುವ ಉತ್ಪನ್ನಗಳು, ಸುಗಂಧದ್ರವ್ಯಗಳ ತಯಾರಿಕೆಗೆ ಬಳಸಲು ನಿರ್ಧರಿಸಲಾಗಿದೆ. ಅಲ್ಲದೇ, ಸ್ವಲ್ಪ ಮೊತ್ತವನ್ನು ವೈನ್ ಬೆಳೆಗಾರರಿಗೆ ನೀಡಿ, ಆಲಿವ್‌ಗಳನ್ನು ಬೆಳೆಯುವಂತೆ ಸೂಚಿಸಲಾಗುತ್ತದೆ.
ವೈನ್ ಸೇವನೆ ಇಳಿಕೆ (ಜನವರಿಯಿಂದ ಜೂನ್‌ವರೆಗೆ)
ಇಟಲಿ- ಶೇ.7
ಸ್ಪೇನ್- ಶೇ.10
ಫ್ರಾನ್ಸ್- ಶೇ.15
ಜರ್ಮನಿ- ಶೇ.22
ಪೋರ್ಚುಗಲ್- ಶೇ.34
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
Uddhav Thackeray: ಚಂದ್ರಚೂಡ್ ಜಡ್ಜ್ ಬದಲು ಅಧ್ಯಾಪಕರಾಗಿದ್ದರೆ ಖ್ಯಾತಿ ಸಿಗುತ್ತಿತ್ತು
Uttar Pradesh: ಹಳಿ ಮೇಲೆ ಸಿಮೆಂಟ್ ಕಲ್ಲಿಟ್ಟು ರೈಲು ಹಳಿತಪ್ಪಿಸಲು ಪ್ರಯತ್ನ
MUST WATCH
ಹೊಸ ಸೇರ್ಪಡೆ
Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.