ಮತ್ತೆ ರಫೇಲ್ ಲಡಾಯಿ: ನ್ಯಾಯಾಂಗ ತನಿಖೆಗೆ ನಡೆಸಲು ಮುಂದಾದ ಫ್ರಾನ್ಸ್
Team Udayavani, Jul 4, 2021, 8:11 AM IST
ನವದೆಹಲಿ: ಬಹುಕೋಟಿ ಮೌಲ್ಯದ ರಫೇಲ್ ಯುದ್ಧ ವಿಮಾನ ಡೀಲ್ ವಿರುದ್ಧ ಫ್ರಾನ್ಸ್ನಲ್ಲಿ ನ್ಯಾಯಾಂಗ ತನಿಖೆಗೆ ಸೂಚಿಸಲಾಗಿದೆ. ಭಾರತ ಮತ್ತು ಫ್ರಾನ್ಸ್ ನಡುವಿನ 59 ಸಾವಿರ ಕೋಟಿ ರೂ. ನಡುವಿನ ಒಪ್ಪಂದದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ಆರೋಪದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ನ್ಯಾಯಾಂಗ ತನಿಖೆಗೆ ನಡೆಸಲು ನ್ಯಾಯಮೂರ್ತಿಯೊಬ್ಬರನ್ನು ನೇಮಕ ಮಾಡಿದೆ ಎಂದು ಫ್ರಾನ್ಸ್ನ ತನಿಖಾ ಪತ್ರಿಕೋದ್ಯಮ ವೆಬ್ಸೈಟ್ “ಮೀಡಿಯಾಪಾರ್ಟ್’ ವರದಿ ಮಾಡಿದೆ.
ಈ ಅಂಶ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಡೀಲ್ಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರೇ ತನಿಖೆಗೆ ಆದೇಶ ನೀಡಬೇಕು. ಜತೆಗೆ ಸಂಸತ್ನ ಜಂಟಿ ಸಮಿತಿ ಮೂಲಕ ತನಿಖೆಯಾಗಬೇಕು. ಈ ಅಂಶವನ್ನು ಸಂಸತ್ನ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಇದನ್ನೂ ಓದಿ:ಜು.11ಕ್ಕೆ ಸಿರಿಷಾ ಗಗನಯಾನ : ಆಂಧ್ರಪ್ರದೇಶದ ಗುಂಟೂರು ಮೂಲದ ವಿಜ್ಞಾನಿಯ ಸಾಹಸ
ಒಪ್ಪಂದ ಮಾಡಿಕೊಳ್ಳಲು ವಿಫಲಗೊಂಡ ರಕ್ಷಣಾ ಕಂಪನಿಗಳು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ದಾಳವನ್ನಾಗಿ ಬಳಸಿಕೊಂಡು ಸುಳ್ಳು ಆರೋಪ ಗಳನ್ನು ಮಾಡಲಾಗುತ್ತಿದೆ ಎಂದು ಬಿಜೆಪಿ ಸಂಸದ ಸಂಭಿತ್ ಪಾತ್ರಾ ಆರೋಪಿಸಿದ್ದಾರೆ. ರಫೇಲ್ ವಿವಾದ ಮುಂದಿಟ್ಟುಕೊಂಡು ಕಾಂಗ್ರೆಸ್ ದೇಶದ ಬಲ ಕುಂದಿಸಲು ಯತ್ನಿಸುತ್ತಿದೆ ಎಂದು ದೂರಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.