ಪುಗ್ಸಟ್ಟೆ ವೇತನ ವಾಪಸ್! 24 ಲಕ್ಷ ರೂ. ವೇತನ ವಾಪಸ್ ಕೊಟ್ಟ ಉಪನ್ಯಾಸಕ
Team Udayavani, Jul 8, 2022, 6:50 AM IST
ಮುಜಫರ್‌ಪುರ: ಕೆಲಸ ಮಾಡಿದರೂ ಸರಿ, ಮಾಡದಿದ್ದರೂ ಸರಿ ತಿಂಗಳ ಅಂತ್ಯದಲ್ಲಿ ಸಂಬಳ ಬಂದರೆ ಸಾಕು ಎಂದು ಯೋಚಿಸುವ ಎಷ್ಟೋ ಮಂದಿಯನ್ನು ನೀವು ನೋಡಿರಬಹುದು. ಆದರೆ ಬಂದ ಸಂಬಳವನ್ನೇ “ಬೇಡ’ ಎಂದು ವಾಪಸ್ ಕೊಟ್ಟವರನ್ನು ನೋಡಿದ್ದೀರಾ?
ಯಾರೋ ದೊಡ್ಡ ಕುಳ ಇರಬಹುದು. ಅದಕ್ಕೇ ಸಂಬಳ ವಾಪಸ್ ಕೊಟ್ಟಿರಬಹುದು ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಊಹೆ ತಪ್ಪು. ಈ ರೀತಿ ತಮ್ಮ ವೇತನ ಕೊಟ್ಟವರು ಯಾವ ಶ್ರೀಮಂತ ವ್ಯಕ್ತಿಯೂ ಅಲ್ಲ, ಬಿಹಾರದ ಹಿಂದಿ ಸಾಹಿತ್ಯ ಉಪನ್ಯಾಸಕ 33 ವರ್ಷದ ಲಲನ್ ಕುಮಾರ್. ಹೌದು ಕಳೆದ ಮೂರು ವರ್ಷಗಳಲ್ಲಿ ವೇತನ ಹಾಗೂ ಇತರ ಭತ್ತೆಯ ರೂಪದಲ್ಲಿ ಬಂದ ಅಷ್ಟೂ ಮೊತ್ತವನ್ನು ಅಂದರೆ ಬರೋಬ್ಬರಿ 24 ಲಕ್ಷ ರೂ.ಗಳನ್ನು ಕಾಲೇಜು ಉಪನ್ಯಾಸಕ ಲಲನ್ ಕುಮಾರ್ ವಿವಿಗೆ ಮರಳಿಸಿದ್ದಾರೆ!
ಯಾಕೆ ಗೊತ್ತಾ?
ತರಗತಿಗೆ ವಿದ್ಯಾರ್ಥಿಗಳೇ ಬರುತ್ತಿಲ್ಲ ಎಂಬ ಕಾರಣಕ್ಕೆ. 2019ರ ಸೆಪ್ಟಂಬರ್‌ನಲ್ಲಿ ಲಲನ್ ಅವರು ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಬಿಹಾರ ವಿಶ್ವ ವಿದ್ಯಾನಿಲಯದಡಿ ಬರುವ ನಿತೀಶೇಶ್ವರ ಕಾಲೇಜಿಗೆ ಹಿಂದಿ ಉಪನ್ಯಾಸಕರಾಗಿ ಸೇರಿದ್ದರು. ಆದರೆ ಹಿಂದಿ ತರಗತಿಗೆ ಯಾವೊಬ್ಬ ವಿದ್ಯಾರ್ಥಿಯೂ ಹಾಜರಾಗುತ್ತಿರಲಿಲ್ಲ. ಕಲಿಸಲು ವಿದ್ಯಾರ್ಥಿಗಳೇ ಇಲ್ಲ ಎಂದ ಮೇಲೆ ನಾನ್ಯಾಕೆ ವೇತನ ಪಡೆಯಬೇಕು ಎಂಬ ಪ್ರಶ್ನೆ ಲಲನ್ ರನ್ನು ಕಾಡುತ್ತಿತ್ತು. ಪಾಠವನ್ನೇ ಮಾಡದೇ ವೇತನ ಪಡೆಯಲು ನನ್ನ ಮನಸ್ಸಾಕ್ಷಿ ಒಪ್ಪುತ್ತಿಲ್ಲ. ಹೀಗಾಗಿ ಮೂರು ವರ್ಷಗಳ ಸಂಪೂರ್ಣ ವೇತನವನ್ನು ವಾಪಸ್ ನೀಡುತ್ತಿದ್ದೇನೆ ಎಂದು ಹೇಳಿ 24 ಲಕ್ಷ ರೂ.ಗಳನ್ನು ಮರಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.