G20: ಭಾರತ, ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಮಾತುಕತೆ ಪುನಾರಂಭ!
ಮಲ್ಯ, ನೀರವ್ ಹಸ್ತಾಂತರ ಬಗ್ಗೆಯೂ ಚರ್ಚೆ
Team Udayavani, Nov 20, 2024, 6:30 AM IST
ರಿಯೋ ಡಿ ಜನೈರೋ: ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ಶೀಘ್ರ ಮಾತುಕತೆ ಆರಂಭ, ಬ್ರಿಟನ್‌ನಲ್ಲಿ ಭಾರತದ 2 ರಾಯಭಾರಿ ಕಚೇರಿ ಸ್ಥಾಪನೆ, ವಿಜಯ್ ಮಲ್ಯ, ನೀರವ್ ಮೋದಿ ಹಸ್ತಾಂತರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್‌ಮರ್ ಜತೆ ಮಾತುಕತೆ ನಡೆಸಿದ್ದಾರೆ. ಇದು ಈ ಇಬ್ಬರು ನಾಯಕರ ನಡುವಿನ ಮೊದಲ ಮಾತುಕತೆಯಾಗಿದೆ.
ಜಿ20 ಶೃಂಗಸಭೆ ಬಳಿಕ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ವ್ಯಾಪಾರ ಒಪ್ಪಂದ, ಭದ್ರತೆ, ಶಿಕ್ಷಣ, ತಂತ್ರಜ್ಞಾನ, ಹವಾಮಾನ ಬದಲಾವಣೆಯಂತಹ ಕ್ಷೇತ್ರಗಳಲ್ಲಿ ಸಮಗ್ರ ಸಹಕಾರ ಒಳಗೊಂಡಂತೆ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ನಾವು ಬಯಸುತ್ತಿದ್ದೇವೆ ಎಂದು ಬ್ರಿಟನ್ ಹೇಳಿದೆ.
ಭಾರತದೊಂದಿಗೆ ಸಮಗ್ರ ವಾಣಿಜ್ಯ ಒಪ್ಪಂದ ಮಾತುಕತೆ ಆರಂಭಿಸಲು ಬ್ರಿಟನ್ ಬದ್ಧವಾಗಿದೆ ಎಂದು ಸ್ಟಾರ್ಮರ್ ವಕ್ತಾರರು ತಿಳಿಸಿದ್ದಾರೆ. ಸ್ಟಾರ್ಮರ್ ಜತೆಗಿನ ಮಾತುಕತೆಯನ್ನು ಅತ್ಯಂತ ಫಲಪ್ರದ ಎಂದು ಮೋದಿ ಬಣ್ಣಿಸಿದ್ದಾರೆ.
2 ರಾಯಭಾರ ಕಚೇರಿ ಸ್ಥಾಪನೆ
ಬ್ರಿಟನ್‌ನ ಬೆಲ್‌ಫಾಸ್ಟ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ ಹೊಸದಾಗಿ 2 ರಾಯಭಾರ ಕಚೇರಿಗಳನ್ನು ತೆರೆಯಲು ಭಾರತ ಒಪ್ಪಂದ ಮಾಡಿಕೊಂಡಿದೆ. ಅಲ್ಲದೇ ಭಾರತದಲ್ಲಿ ಅಕ್ರಮ ಎಸಗಿ ಪರಾರಿಯಾಗಿರುವ ವಿಜಯ್ ಮಲ್ಯ, ನೀರವ್ ಮೋದಿ ಹಸ್ತಾಂತರದ ಬಗ್ಗೆಯೂ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.
ಹಲವು ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ
ಶೃಂಗಸಭೆಯ ಬಳಿಕ ಪ್ರಧಾನಿ ಮೋದಿ ಅವರು ಹಲವು ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಶಿಕ್ಷಣ, ಭದ್ರತೆ, ವ್ಯಾಪಾರ, ತಂತ್ರಜ್ಞಾನ, ಆರೋಗ್ಯ, ಹವಾಮಾನ ಬದಲಾವಣೆಯಂತಹ ಕ್ಷೇತ್ರಗಳಲ್ಲಿ ಸಮಗ್ರ ಸಹಕಾರದ ಬಗ್ಗೆ ಚರ್ಚಿಸ ಲಾ ಗಿದೆ. ಇಟಲಿ, ಇಂಡೋನೇಷ್ಯಾ, ನಾರ್ವೆ, ಪೋರ್ಚುಗಲ್, ಈಜಿಪ್ಟ್, ದಕ್ಷಿಣ ಕೊರಿಯಾ, ಫ್ರಾನ್ಸ್ ದೇಶಗಳ ಮುಖ್ಯಸ್ಥರು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಗೀತಾ ಗೋಪಿನಾಥ್, ಐರೋಪ್ಯ ಒಕ್ಕೂಟದ ಮುಖ್ಯಸ್ಥರನ್ನು ಮೋದಿ ಭೇಟಿ ಮಾಡಿದರು.
ಹಸಿವು ನಿರ್ಮೂಲನೆ, ಗಾಜಾಗೆ ಹೆಚ್ಚಿನ ನೆರವು: ಜಿ20 ನಿರ್ಣಯ
ಜಾಗತಿಕವಾಗಿ ಹಸಿವು ನಿಯಂತ್ರಣ ಹಾಗೂ ಗಾಜಾಗೆ ಹೆಚ್ಚಿನ ನೆರವು ಒದಗಿಸುವ ಜಾಗತಿಕ ಒಪ್ಪಂದಕ್ಕೆ ಜಿ20 ನಾಯಕರು ಕರೆ ನೀಡಿದರು. ಅಲ್ಲದೇ ಜಾಗತಿಕವಾಗಿ ನಡೆಯುತ್ತಿರುವ ಯುದ್ಧಗಳನ್ನು ಖಂಡಿಸಿದ ನಾಯಕರು ಇದನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಒಪ್ಪಂದ ಮಾಡಿಕೊಂಡರು. ಇದೇ ವೇಳೆ ಉಕ್ರೇನ್ ಸಾರ್ವಭೌಮತೆಯ ಪರವಾಗಿ ಅಮೆರಿಕ ತನ್ನ ನಿಲುವನ್ನು ಪ್ರದರ್ಶಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!
Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ
TTD: ತಿರುಪತಿ ದರ್ಶನ ಕಾಯುವಿಕೆ ಅವಧಿ ಇಳಿಕೆಗೆ ಕೃತಕ ಬುದ್ಧಿಮತ್ತೆ ಬಳಕೆ?
Pilot: ಕೆಲಸದ ಟೈಂ ಮುಗೀತು ಎಂದು ವಿಮಾನ ಹಾರಿಸದ ಏರ್ ಇಂಡಿಯಾ ಪೈಲಟ್!
Nanded: ಸಂಗಾತಿಯ ಅರಸುತ್ತಾ 300 ಕಿ.ಮೀ. ಸಂಚರಿಸಿದ “ಜಾನಿ’ ಎಂಬ ಹುಲಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.