![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 7, 2019, 7:02 PM IST
ಚೆನ್ನೈ:ಬಹುನಿರೀಕ್ಷೆಯ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ದಕ್ಷಿಣ ಧ್ರುವದಲ್ಲಿ ಚಂದಿರನ ಅಂಗಳ ಸ್ಪರ್ಶಿಸುವಲ್ಲಿ ವಿಫಲವಾಗಿದ್ದನ್ನು ಕಂಡ ಇಸ್ರೋ ವಿಜ್ಞಾನಿ ಕೆ.ಶಿವನ್ ಭಾವೋದ್ವೇಗದಿಂದ ಅತ್ತಾಗ ಪ್ರಧಾನಿ ನರೇಂದ್ರ ಮೋದಿ ಅವರು ತಬ್ಬಿಹಿಡಿದು ಸಂತೈಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಆದರೆ ಕೈಲಾಸವಾದಿವೋ ಶಿವನ್ ಅವರು ಚಂದ್ರಯಾನ 2 ಮಿಷನ್ ಯೋಜನೆ ವೇಳೆ ಹೆಸರು ಹೆಚ್ಚು ಪ್ರಚಲಿತವಾಯಿತು. ಆದರೆ ಅದಕ್ಕೂ ಮುನ್ನ ಕೆ.ಶಿವನ್ ಅವರ ಹೆಸರನ್ನು ಬಹುತೇಕರು ಕೇಳಿರಲಿಲ್ಲ. 2018ರಲ್ಲಿ ಶಿವನ್ ಅವರು ಇಸ್ರೋದ 9ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು.
ರೈತನ ಮಗ ಶಿವನ್..
ಕನ್ಯಾಕುಮಾರಿ ಜಿಲ್ಲೆಯ ತಾರಾಕ್ಕಾನ್ ವಿಲ್ಲೈ ಗ್ರಾಮದ ರೈತ ಕುಟುಂಬದಲ್ಲಿ ಶಿವನ್ ಜನಿಸಿದ್ದರು. ಅಲ್ಲಿಯ ಸ್ಥಳೀಯ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಶಿವನ್ ಅವರು ಕ್ರಯೋಜನಿಕ್ ಎಂಜಿನ್ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದ್ದರು.
ಇಡೀ ಕುಟುಂಬದಲ್ಲಿಯೇ ಪದವಿ ಪಡೆದ ಮೊದಲ ವ್ಯಕ್ತಿ ಶಿವನ್ ಎಂಬುದಾಗಿ ಚಿಕ್ಕಪ್ಪ ಷಣ್ಮುಗವೇಲ್ ಹೆಮ್ಮೆ ಪಡುತ್ತಾರೆ. ಈ ರಾಕೆಟ್ ಮ್ಯಾನ್ ಶಾಲೆಗೆ, ಕಾಲೇಜಿಗೆ ಹೋಗುವಾಗ ಯಾವತ್ತೂ ಟ್ಯೂಷನ್ ಪಡೆದಿರಲಿಲ್ಲ. ಹೀಗೆ ನಾಗರ್ ಕೊಯಿಲ್ ಎಸ್ ಟಿ ಹಿಂದೂ ಕಾಲೇಜಿನಲ್ಲಿ ಶಿವನ್ ಪದವಿ ಪಡೆದಿದ್ದರು.
1980ರಲ್ಲಿ ಮದ್ರಾಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು ಶಿವನ್. ಐಐಎಸ್ ಸಿ ಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ನ ಮಾಸ್ಟರ್ ಡಿಗ್ರಿ ಪಡೆದಿದ್ದರು. ಬಳಿಕ 2006ರಲ್ಲಿ ಬಾಂಬೆ ಐಐಟಿಯಲ್ಲಿ ಪಿಎಚ್ ಡಿ ಪೂರ್ಣಗೊಳಿಸಿದ್ದರು. ಸತ್ಯಭಾಮಾ ಯೂನಿರ್ವಸಿಟಿ ಶಿವನ್ ಅವರಿಗೆ ವಿಜ್ಞಾನದಲ್ಲಿನ ಸೇವೆಗಾಗಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.
1982ರಲ್ಲಿ ಶಿವನ್ ಇಸ್ರೋಗೆ ಸೇರಿದ್ದರು. ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್(ಪಿಎಸ್ ಎಲ್ ವಿ) ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳಲ್ಲಿ ಶಿವನ್ ಪ್ರಮುಖ ಪಾತ್ರವಹಿಸಿದ್ದರು. ಮೂರು ದಶಕಗಳ ದೀರ್ಘಾವಧಿ ಸೇವೆಯಲ್ಲಿ ಶಿವನ್ ಅವರು ಜಿಎಸ್ ಎಲ್ ವಿ, ಪಿಎಸ್ ಎಲ್ ವಿ, ಜಿಎಸ್ ಎಲ್ ವಿ ಮಾರ್ಕ್ -3 ಸೇರಿದಂತೆ ಹಲವು ಪ್ರತಿಷ್ಠಿದ ಮಿಷನ್ ಗಳಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸಿದ್ದರು.
ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಶಿವನ್ ಅವರು 1999ರಲ್ಲಿ ಡಾ.ವಿಕ್ರಮ್ ಸಾರಾಭಾಯ್ ರಿಸರ್ಚ್ ಪ್ರಶಸ್ತಿ, 2007ರಲ್ಲಿ ಇಸ್ರೋ ಮೆರಿಟ್ ಪ್ರಶಸ್ತಿ, 2011ರಲ್ಲಿ ಬಿರೇನ್ ರಾಯ್ ಸ್ಪೇಸ್ ಸೈನ್ಸ್ ಪ್ರಶಸ್ತಿಗೆ ಭಾಜನರಾಗಿದ್ದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.