ಭಾರತ್ ಜೋಡೋಗೆ ಚಾಲನೆ; ಕನ್ಯಾಕುಮಾರಿಯಿಂದ ಕಾಂಗ್ರೆಸ್‌ನ ಯಾತ್ರೆ ಆರಂಭ
ತಮಿಳುನಾಡು ಸಿಎಂ ಸ್ಟಾಲಿನ್‌ರಿಂದ ರಾಹುಲ್‌ಗೆ ಧ್ವಜ ಹಸ್ತಾಂತರ
Team Udayavani, Sep 8, 2022, 7:15 AM IST
ಕನ್ಯಾಕುಮಾರಿ: ಕಾಂಗ್ರೆಸ್ ಪುನರುತ್ಥಾನದ ಯಾತ್ರೆ ಎಂದೇ ಬಿಂಬಿತ ವಾಗಿರುವ 3,570 ಕಿ.ಮೀ. ಉದ್ದದ ಕನ್ಯಾ ಕುಮಾರಿಯಿಂದ ಕಾಶ್ಮೀರದವರೆಗಿನ ಭಾರತ್ ಜೋಡೋ ಯಾತ್ರೆಗೆ ತಮಿಳು ನಾಡಿನ ಕನ್ಯಾಕುಮಾರಿಯಲ್ಲಿ ಬುಧವಾರ ಚಾಲನೆ ಸಿಕ್ಕಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ಯಾತ್ರೆಯ ನೇತೃತ್ವ ವಹಿ ಸಿದ್ದು, 150 ದಿನಗಳ ಕಾಲ ಪಾದಯಾತ್ರೆ ನಡೆಸುವರು. ಅಷ್ಟೇ ಅಲ್ಲ, ವಾಸ್ತವ್ಯಕ್ಕಾಗಿ ರೂಪಿಸಿರುವ ಕಂಟೈನರ್‌ನಲ್ಲೇ ರಾಹುಲ್ ವಾಸಿಸುವರು. ಯಾತ್ರೆ ಅಂಗವಾಗಿ ಮಂಗಳವಾರ ರಾತ್ರಿಯೇ ರಾಹುಲ್ ಗಾಂಧಿಯವರು ತಮಿಳುನಾಡಿಗೆ ಆಗಮಿಸಿದ್ದರು. ಬುಧವಾರ ಬೆಳಗ್ಗೆ ಶ್ರೀಪೆರಂಬ ದೂರಿಗೆ ತೆರಳಿ ತಂದೆ ರಾಜೀವ್ ಗಾಂಧಿ ಯವರ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಅಲ್ಲಿಯೇ ಕೊಂಚ ಹೊತ್ತು ಧ್ಯಾನಿಸಿ ಬಳಿಕ ರಾಹುಲ್ ಕನ್ಯಾಕುಮಾರಿಗೆ ತೆರಳಿದರು. ಇವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾಥ್ ನೀಡಿದರು.
ಸ್ಟಾಲಿನ್‌ರಿಂದ ಧ್ವಜ ಹಸ್ತಾಂತರ
ಕನ್ಯಾಕುಮಾರಿಯಲ್ಲಿ ಯಾತ್ರೆ ಆರಂಭಿ ಸಿದ ರಾಹುಲ್‌ಗೆ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಭಾರತದ ಧ್ವಜ ಹಸ್ತಾಂ ತರಿಸಿ ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು. ವಿವೇಕಾನಂದ ಪ್ರತಿಮೆಗೆ ರಾಹುಲ್ ಗಾಂಧಿ ಪುಷ್ಪನಮನ ಸಲ್ಲಿಸಿದರು.
ಕೇಂದ್ರದ ವಿರುದ್ಧ ವಾಗ್ಧಾಳಿ
ಕನ್ಯಾಕುಮಾರಿಯಲ್ಲಿ ನಡೆದ ಸಭೆಯಲ್ಲಿ ರಾಹುಲ್, ಕೇಂದ್ರ ಸರಕಾರದ ವಿರುದ್ಧ ನೇರ ವಾಗ್ಧಾಳಿ ನಡೆಸಿದರು. ಸದ್ಯ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ಭಾರತೀಯ ಧ್ವಜದ ಮೇಲೆ ದಾಳಿ ನಡೆಯುತ್ತಿದೆ ಎಂದು ದೂಷಿಸಿದರು.
ದೇಶವನ್ನು ಧರ್ಮ, ಭಾಷೆಯ ಮೇಲೆ ವಿಭಾಗಿಸಲಾಗುತ್ತಿದೆ. ಹಾಗೆಯೇ ರಾಷ್ಟ್ರಧ್ವಜವನ್ನು ತನ್ನ ವೈಯಕ್ತಿಕ ಆಸ್ತಿ ಎಂಬಂತೆ ಬಿಜೆಪಿ ವರ್ತಿಸುತ್ತಿದೆ ಎಂದು ಕಿಡಿಕಾರಿದರು.
ಭಾರತದ ಧ್ವಜವನ್ನು ಯಾರೋ ಕೊಡುಗೆಯಾಗಿ ಕೊಟ್ಟಿದ್ದಲ್ಲ, ಸುಲಭವಾಗಿಯೂ ದಕ್ಕಿದ್ದಲ್ಲ. ಭಾರತೀಯರೇ ಗಳಿಸಿಕೊಂಡಿದ್ದು ಎಂದರು. ಈ ಧ್ವಜವು ಪ್ರತಿಯೊಬ್ಬ ಭಾರತೀಯನಿಗೂ ರಕ್ಷಣೆ ನೀಡುತ್ತದೆ. ಎಲ್ಲರಿಗೂ ತಮ್ಮ ತಮ್ಮ ಧರ್ಮಗಳ ಆಚರಣೆಗೂ ಖಾತ್ರಿ ನೀಡಿದೆ. ಆದರೆ, ಇಂದು ಇದೇ ಧ್ವಜಕ್ಕೆ ಧಕ್ಕೆ ಬಂದಿದೆ. ಹಾಗಾಗಿ ಜನರು ಎಚ್ಚೆತ್ತು, ರಾಷ್ಟ್ರಧ್ವಜದ ಹಿಂದಿರುವ ಒಗ್ಗಟ್ಟಿನ ಮೌಲ್ಯವನ್ನು ಉಳಿಸಬೇಕಿದೆ ಎಂದು ಕರೆನೀಡಿದರು.
ಸದ್ಯ ಕೇಂದ್ರ ಸರ್ಕಾರವು ಎಲ್ಲಾ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ. ಭಾರತ ಹಿಂದೆಂದೂ ಕಾಣದ ಆರ್ಥಿಕ ಸಮಸ್ಯೆಯನ್ನು ಇಂದು ಎದುರಿಸುತ್ತಿದೆ. ನಿರುದ್ಯೋಗ ತಾಂಡವವಾಡುತ್ತಿದ್ದು, ದೇಶ ವಿನಾಶದತ್ತ ಸಾಗುತ್ತಿದೆ ಎಂದು ಟೀಕಿಸಿದರು.
ಈ ಕಾರ್ಯಕ್ರಮದಲ್ಲಿ ರಾಜಸ್ಥಾನ ಮತ್ತು ಛತ್ತೀಸ್‌ಗಡದ ಮುಖ್ಯಮಂತ್ರಿಗಳು, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರು ಭಾಗಿಯಾಗಿದ್ದರು.
ಪರಿವಾರ ಜೋಡೋ ಯಾತ್ರೆ!
ಕಾಂಗ್ರೆಸ್ ಜೋಡೋ ಯಾತ್ರೆಯ ಭಿತ್ತಿಪತ್ರವೊಂದರಲ್ಲಿ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಫೋಟೋ ಕಾಣಿಸಿಕೊಂಡಿರುವುದನ್ನು ಬಿಜೆಪಿ ಟೀಕಿಸಿದೆ. ಇದು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಅಲ್ಲ, ಬದಲಾಗಿ ಪರಿವಾರ ಜೋಡೋ ಯಾತ್ರೆ ಎಂದು ವ್ಯಂಗ್ಯವಾಡಿದೆ. ವಿಶೇಷವೆಂದರೆ, ತಮ್ಮ ಫೋಟೋ ಇದ್ದ ಫ್ಲೆಕ್ಸ್ ಅನ್ನು ರಾಬರ್ಟ್ ವಾದ್ರಾ ಅವರೇ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಇದು ಪರಿವಾರ ಜೋಡೋ ಮತ್ತು ಭ್ರಷ್ಟಾಚಾರ ಜೋಡೋ ಎಂದು ಟೀಕಿಸಿದೆ.
ಸೆ. 30ರಿಂದ ರಾಜ್ಯದಲ್ಲಿ ಯಾತ್ರೆ
ಮೈಸೂರು ಮೂಲಕ ಯಾತ್ರೆಯು ಸೆ. 30ಕ್ಕೆ ಕರ್ನಾಟಕ ಪ್ರವೇ ಶಿಸಲಿದ್ದು, 20 ದಿನ 511 ಕಿ.ಮೀ.ಗಳನ್ನು ಪಯಣಿಸಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹಿತ ಹಲವು ನಾಯಕರು ಯಾತ್ರೆಯಲ್ಲಿ ಭಾಗಿಯಾಗುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.