ಯಾಕೆ? ಇಂಧನ ದರ ಇಳಿಕೆಯಾಯಿತು
Team Udayavani, Mar 10, 2020, 6:21 AM IST
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆ ಕಂಡಿದೆ. ಕೊರೊನಾ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು ಬೇಡಿಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ತೈಲ ದರ ಇಳಿಕೆಯಾಗುತ್ತಲೇ ಇತ್ತು. ಇದನ್ನು ಸ್ಥಿರಗೊಳಿಸಲು ಶೇ. 4ರಷ್ಟು ಉತ್ಪಾದನೆ ತಗ್ಗಿಸುವ ಕುರಿತಾಗಿ 14 ಸದಸ್ಯರನ್ನು ಒಳಗೊಂಡಿರುವ ಪೆಟ್ರೋಲಿಯಂ ರಫ್ತುರಾಷ್ಟ್ರಗಳ ಸಂಘಟನೆ (ಒಪೆಕ್) ಮುಂದಾಗಿತ್ತು. ಆದರೆ…
ರಷ್ಯಾ ಕಾರಣ!
ಮಾರ್ಚ್ ತಿಂಗಳಿಗೆ ಈ ಒಪ್ಪಂದ ಕೊನೆಯಾಗ ಲಿರುವ ಹಿನ್ನೆಲೆಯಲ್ಲಿ ಮತ್ತೆ ಮುಂದುವರಿಸುವಂತೆ ಸೌದಿ ಅರೆಬೀಯಾ ಮಾತುಕತೆಗೆ ಮುಂದಾಗಿತ್ತು. ಆದರೆ ಮತ್ತೆ ಒಪ್ಪಂದ ನಡೆಸಲು ನಾವು ಸಿದ್ಧರಿಲ್ಲ ಎಂದು ರಷ್ಯಾ ಹೇಳಿದ ಬೆನ್ನÇÉೇ ಈಗ ತೈಲ ಉತ್ಪಾದಿಸುವ ರಾಷ್ಟ್ರಗಳ ಮಧ್ಯೆ ದರ ಸಮರ ಆರಂಭಗೊಂಡಿದೆ. ದರ ಇಳಿಕೆಗೆ ಇದು ಕಾರಣ.
ಪ್ರಸ್ತಾವದಲ್ಲಿ ಏನಿತ್ತು?
ಒಪೆಕ್ ರಾಷ್ಟ್ರಗಳು ಈಗ ಪ್ರತಿ ದಿನ ಉತ್ಪಾದನೆ ಯಾಗುತ್ತಿರುವ ತೈಲ ಪ್ರಮಾಣ ಕಡಿತಗೊಳಿಸಲು ನಿರ್ಧರಿಸಿದ್ದವು. ಎಪ್ರಿಲ್‌ನಿಂದ ಪ್ರತಿದಿನ ಶೇ. 1.5 ದಶಲಕ್ಷ ಬ್ಯಾರೆಲ್ (ಶೇ. 4ರಷ್ಟು) ಇಳಿಸಿ ಡಿಸೆಂ ಬರ್ ವರೆಗೆ ಇದೇ ಮಾನದಂಡದ ಅನ್ವಯ ತೈಲ ಉತ್ಪಾದಿಸುವ ಪ್ರಸ್ತಾವವಿತ್ತು. ಆದರೆ ಈ ಪ್ರಸ್ತಾವ ವನ್ನು ರಷ್ಯಾ ತಿರಸ್ಕರಿಸಿದ್ದು, ಗಲ್ಫ್ ರಾಷ್ಟ್ರಗಳು ಉತ್ಪಾ ದನೆ ಹೆಚ್ಚಿಸಿದ್ದು ಪರಿಣಾಮವಾಗಿ ದರ ಇಳಿದಿದೆ.
ಸೌದಿಯತ್ತ ಚಿತ್ತ
ವಿಶ್ವದ ಅತಿ ದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿ ರುವ ಸೌದಿ ಅರೇಬಿಯಾ ಸೋಮವಾರವೇ ಕಚ್ಚಾ ತೈಲದ ಬೆಲೆಯನ್ನು ಇಳಿಕೆ ಮಾಡಿದೆ. ಈಗಿನ ಉತ್ಪಾ ದನೆಗಿಂತ ಹೆಚ್ಚುವರಿಯಾಗಿ ಪ್ರತಿದಿನ 10 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದಿಸುವುದಾಗಿ ಹೇಳಿದೆ.
ಭಾರತಕ್ಕೆ ಲಾಭ ಇದೆಯೇ?
ಚೀನ, ಅಮೆರಿಕದ ಬಳಿಕ ಭಾರತ ಹೆಚ್ಚು ತೈಲ ಆಮದು ಮಾಡುತ್ತಿದೆ. ಇದು ಆರ್ಥಿಕತೆ ಮೇಲೆ ತೈಲ ದರ ಭಾರೀ ಪ್ರಭಾವ ಬೀರುತ್ತದೆ. ಭಾರತ ತನ್ನ ಬೇಡಿಕೆಯ ಶೇ. 80ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ತೈಲ ದರ ಇಳಿಕೆಯಾದರೆ ಆಮದು ಹೊರೆ ಕಡಿಮೆಯಾಗಿ ರಫ್ತು ವಹಿವಾಟಿನ ನಡುವಿನ ಚಾಲ್ತಿ ಖಾತೆಯ ಕೊರತೆಯೂ ನೀಗುತ್ತದೆ.
ಪೂರ್ಣ ಲಾಭ ಯಾಕಿಲ್ಲ?
ದರ ಇಳಿಕೆಯ ಪೂರ್ಣ ಲಾಭ ಭಾರತಕ್ಕೆ ಸದ್ಯದ ಮಟ್ಟಿಗೆ ದೊರೆಯುವುದು ಕಷ್ಟ. ಡಾಲರ್ ಮತ್ತು ರೂಪಾಯಿ ನಡುವಿನ ಅಂತರದ ಮೇಲೆ ಅದು ಅವಲಂಬಿಸಿದೆ. ಸದ್ಯ ಭಾರತ ಹೆಚ್ಚು ಡಾಲರ್ ನೀಡಿ ಖರೀದಿಸಬೇಕಾಗುತ್ತದೆ. ಈ ಕಾರಣಕ್ಕೆ ಗ್ರಾಹಕನಿಗೆ ಇದರ ಪೂರ್ಣ ಲಾಭ ಸಿಗದು.
ಬೇಡಿಕೆ ಇಳಿಕೆಯಾಗುವ ಸಾಧ್ಯತೆ
ಏಶ್ಯಾದ ಪ್ರಬಲ ರಾಷ್ಟ್ರವಾಗಿರುವ ಚೀನದಲ್ಲಿ ಮಾರಣಾಂತಿಕ ಕೊರೊನಾ ಭೀತಿಯಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಇದರೊಂದಿಗೆ ದಕ್ಷಿಣ ಕೊರಿಯಾ, ಇಟಲಿಯಲ್ಲಿಯೂ ಕೊರೊನಾ ವೇಗವಾಗಿ ಹಬ್ಬು ತ್ತಿದೆ. ಯುರೋಪ್, ಏಶ್ಯಾ ರಾಷ್ಟ್ರಗಳಿಗೆ ಭೀತಿ ಎದು ರಾದ ಹಿನ್ನೆಲೆಯಲ್ಲಿ ಈ ಬಾರಿ ತೈಲ ಬೇಡಿಕೆ ಮತ್ತಷ್ಟು ಇಳಿಕೆಯಾಗುವ ಸೂಚನೆ ಇದು ಎನ್ನಲಾಗಿದೆ.
ರಷ್ಯಾಕ್ಕೆ ಸೌದಿ ಪಾಠ
ಅಂದು 2016ರಲ್ಲಿ ಅಮೆರಿಕದ ಶೇಲ್ ತೈಲ ಉತ್ಪಾದನೆ ತಗ್ಗಿಸಲು ಸೌದಿ ಅರೇಬಿಯಾ, ರಷ್ಯಾ ಸೇರಿದಂತೆ ಮಧ್ಯಪ್ರಾಚ್ಯದ ಇತರ ತೈಲ ಉತ್ಪಾದಕ ರಾಷ್ಟ್ರಗಳು ಏಶ್ಯಾದ ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ತೈಲವನ್ನು ಪೂರೈಸಿದ್ದವು. ಈಗ ಈ ಒಪ್ಪಂದದಿಂದ ಹಿಂದಕ್ಕೆ ಸರಿದ ರಷ್ಯಾಕ್ಕೆ ಪಾಠ ಕಲಿಸಲು ಸೌದಿ ಭಾರೀ ಪ್ರಮಾಣದಲ್ಲಿ ಉತ್ಪಾದಿಸಲು ಮುಂದಾಗಿದೆ. ಬೆಲೆ ಕಡಿಮೆ ಮಾಡಿದರೆ ಸಹಜವಾಗಿ ಖರೀದಿಯ ಬೇಡಿಕೆ ಹೆಚ್ಚಾಗುವುದರಿಂದ ಯುರೋಪ್ ಮತ್ತು ಏಶ್ಯಾದಲ್ಲಿ ರಷ್ಯಾ ಜತೆಗೆ ಪೈಪೋಟಿ ನಡೆಸುವುದು ಇದರ ಉದ್ದೇಶವಾಗಿದೆ.
ಅಬಕಾರಿ ಸುಂಕ ಏರಿಸಿದರೆ…?
ಒಂದು ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರಕಾರ 17.98 ರೂ. ಅಬಕಾರಿ ಸುಂಕ ಹಾಕಿದೆ. 1 ಲೀಟರ್ ಡೀಸೆಲ್ ಮೇಲೆ 13.83 ರೂ. ಸುಂಕ ಇದೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾದಾಗ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಈಗ ಭಾರೀ ಗಾತ್ರದಲ್ಲಿ ದರ ಇಳಿಕೆಯಾದ ಹಿನ್ನೆಲೆಯಲ್ಲಿ ಅಬಕಾರಿ ಸುಂಕ ಏರಿಕೆಯಾಗುವ ಸಾಧ್ಯತೆಯೂ ದಟ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.