ದೇಶದಲ್ಲಿ ಸತತ 17ನೇ ಬಾರಿಗೆ ಏರಿಕೆಯಾದ ಪೆಟ್ರೋಲ್ ಮತ್ತು ಡಿಸೇಲ್ ದರ
Team Udayavani, Jun 23, 2020, 9:30 AM IST
ನವದೆಹಲಿ: ಭಾರತದಲ್ಲಿ ಮತ್ತೊಮ್ಮೆ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಾಗಿದೆ. ದೈನಂದಿನ ಪರಿಷ್ಕರಣೆಯ ಭಾಗವಾಗಿ ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರ (23-06-20200) ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಸಿದ್ದು, ಜೂನ್ 7 ರಿಂದ ಸತತ 17 ನೇ ಭಾರೀ ಇಂಧನ ದರ ಹೆಚ್ಚಳವಾಗಿದೆ.
ದೇಶಾದ್ಯಂತ ಪೆಟ್ರೋಲ್ ದರವನ್ನು ಪ್ರತಿ ಲೀಟರ್ಗೆ 18-20 ಪೈಸೆ ಹೆಚ್ಚಿಸಿದ್ದರೆ, ಡೀಸೆಲ್ ದರ ಸುಮಾರು 55 ಪೈಸೆ ಏರಿಕೆಯಾಗಿದೆ.
ಇಂದಿನ ಪರಿಷ್ಕರಣೆಯ ನಂತರ, ರಾಷ್ಟ್ರ ರಾಜಧಾನಿದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 79.76 ರೂ. ಆಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 79.40 ರೂ.ಗೆ ಏರಿದೆ.
ಜೈಪುರದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 87 ರೂ. ಮತ್ತು ಡೀಸೆಲ್ ಬೆಲೆ 80.36 ರೂ. ಏರಿಕೆಯಾಗಿದೆ. ಮಾತ್ರವಲ್ಲದೆ ಡೀಸೆಲ್ ದರ ಲೀಟರ್ ಗೆ 80 ರೂ. ಗಳನ್ನು ಮುಟ್ಟಿದ ಏಕೈಕ ನಗರ ಇದು. ಮುಂಬಯಿಯಲ್ಲಿ, ಹೊಸ ಏರಿಕೆಯ ನಂತರ ಪೆಟ್ರೋಲ್ ಬೆಲೆ ಲೀಟರ್ಗೆ 86.54 ರೂ.ಗೆ ಮತ್ತು ಡೀಸೆಲ್ ಬೆಲೆ ಕೂಡ ಪ್ರತಿ ಲೀಟರ್ಗೆ 77.76 ರೂ.ಗೆ ಲಭ್ಯವಿದೆ.
ದೇಶದಲ್ಲಿ 10 ಪ್ರಮುಖ ನಗರಗಳು ಒಂದು ಲೀಟರ್ ಪೆಟ್ರೋಲ್ ಗೆ 80 ರೂ. ಪಾವತಿಸುತ್ತಿದೆ. ಕೋಲ್ಕತ್ತಾ (81.45 / ರೂ), ಮುಂಬೈ (86.54 ರೂ), ಚೆನ್ನೈ (83.04 ರೂ), ನೋಯ್ಡಾ (80.45 ರೂ), ಬೆಂಗಳೂರು (82.35 ರೂ). ಭುವನೇಶ್ವರ (80.32 ರೂ ), ಹೈದರಾಬಾದ್ (82.79 ರೂ), ಜೈಪುರ (87.01 ರೂ), ಲಕ್ನೋ (80.55 ರೂ ) ಪಾಟ್ನಾ (82.85 ರೂ) ಮತ್ತು ತಿರುವನಂತಪುರಂ (81.48 ರೂ).
ಜೂನ್ 7 ರಿಂದ ಸತತ ಹೆಚ್ಚಳದಿಂದಾಗಿ ಪೆಟ್ರೋಲ್ ಬೆಲೆ ಒಟ್ಟು 8.5 ರೂ ಮತ್ತು ಡೀಸೆಲ್ ದರವನ್ನು 10 ರೂ.ಗೆ ಏರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.