![6-ptr](https://www.udayavani.com/wp-content/uploads/2024/12/6-ptr-415x249.jpg)
55 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದ ಪೆಟ್ರೋಲ್, ಡೀಸಿಲ್ ದರ
Team Udayavani, Apr 23, 2018, 7:29 PM IST
![Petrol-pumps-700.jpg](https://www.udayavani.com/wp-content/uploads/2018/04/23/Petrol-pumps-700-620x375.jpg)
ಹೊಸದಿಲ್ಲಿ : ಇಂದು ಸೋಮವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸಿಲ್ ದರ ಕಳೆದ 55 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿತು. ಗ್ರಾಹಕರ ಮೇಲೆ ಹೊರೆಯನ್ನು ಕಡಿಮೆ ಮಾಡಲು ಸರಕಾರ ಈ ಸಂದರ್ಭದಲ್ಲಿ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಇಳಿಸಬೇಕು ಎಂಬ ಕೂಗು ಈಗ ಪುನಃ ಮುಗಿಲು ಮುಟ್ಟಿದೆ.
ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಪೆಟ್ರೋಲಿಯಂ ಸಚಿವಾಲಯ ತೈಲ ಮಾರಾಟ ಕಂಪೆನಿಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದೆ; ಅಂತೆಯೇ ಹಣಕಾಸು ಸಚಿವಾಲಯದೊಡನೆಯೂ ಮಾತುಕತೆ ನಿಗದಿಸಿದೆ. ದಕ್ಷಿಣ ಏಶ್ಯದಲ್ಲೇ ಅತ್ಯಧಿಕ ಇಂಧನ ದರ ಇರುವುದು ಭಾರತದಲ್ಲಿ.
ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ ಲೀಟರಿಗೆ ಈಗ 74.50 ರೂ. ಇದೆ. ಇದು 2013ರ ಸೆ.14ರ ಬಳಿಕದ (76.06 ರೂ.) ಗರಿಷ್ಠ ದರವಾಗಿದೆ. ಇದೇ ರೀತಿ ಡೀಸಿಲ್ ದರ ಲೀಟರ್‌ಗೆ 65.75 ರೂ.ಗೆ ಏರಿದೆ.
ಗ್ರಾಹಕರು ಪ್ರತೀ ಲೀಟರ್ ಇಂಧನಕ್ಕೆ ತೆರುವ ಒಟ್ಟು ದರದ ಅರ್ಧಾಂಶ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅಬಕಾರಿ ಸುಂಕ ರೂಪದಲ್ಲಿ ದಕ್ಕುತ್ತದೆ. ಕೇಂದ್ರ ಅಬಕಾರಿ ಸುಂಕ ಲೀಟರ್ ಪೆಟ್ರೋಲ್ ಗೆ 19.48 ರೂ. ಇದೆ; ಡೀಸಿಲ್ ಮೇಲೆ 15.33 ರೂ. ಇದೆ. ರಾಜ್ಯ ಸರಕಾರಗಳು ಇದರ ಮೇಲೆ ವ್ಯಾಟ್ (ಮಾರಾಟ ತೆರಿಗೆ) ಹೇರುತ್ತದೆ. ದಿಲ್ಲಿಯಲ್ಲಿ ಪೆಟ್ರೋಲ್ ಲೀಟರ್ ಮೇಲೆ ವ್ಯಾಟ್ 15.84 ಮತ್ತು ಡೀಸಿಲ್ ಮೇಲೆ 9.68 ಇದೆ.
ಟಾಪ್ ನ್ಯೂಸ್
![6-ptr](https://www.udayavani.com/wp-content/uploads/2024/12/6-ptr-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Parliament; Pushing in front of Parliament House; Two MPs injured, allegations against Rahul Gandhi](https://www.udayavani.com/wp-content/uploads/2024/12/rahul-mp-150x87.jpg)
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
![ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು](https://www.udayavani.com/wp-content/uploads/2024/12/hospital-150x89.jpg)
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
![New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು](https://www.udayavani.com/wp-content/uploads/2024/12/new-year-150x87.jpg)
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
![K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ](https://www.udayavani.com/wp-content/uploads/2024/12/KV-Narayan-150x84.jpg)
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
![6-ptr](https://www.udayavani.com/wp-content/uploads/2024/12/6-ptr-150x90.jpg)
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
![Parliament; Pushing in front of Parliament House; Two MPs injured, allegations against Rahul Gandhi](https://www.udayavani.com/wp-content/uploads/2024/12/rahul-mp-150x87.jpg)
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
![BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್](https://www.udayavani.com/wp-content/uploads/2024/12/4-37-150x90.jpg)
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
![ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು](https://www.udayavani.com/wp-content/uploads/2024/12/hospital-150x89.jpg)
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
![1](https://www.udayavani.com/wp-content/uploads/2024/12/1-37-150x80.jpg)
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.