Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
‘ಮಾ ಕಿ ರಸೋಯಿ’ಯಲ್ಲಿ ಸಿಗುವ ಊಟದಲ್ಲಿ ಎಷ್ಟು ಬಗೆಗಳಿವೆ?, ʼಕುಂಭವಾಣಿ' ಎಫ್ಎಂ ರೇಡಿಯೋ ಚಾನೆಲ್ ಉದ್ಘಾಟಿಸಿದ ಸಿಎಂ ಯೋಗಿ ಆದಿತ್ಯನಾಥ್
Team Udayavani, Jan 10, 2025, 8:34 PM IST
ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ವಿಶ್ವದಲ್ಲೇ ಭಾರೀ ಸಂಖ್ಯೆಯಲ್ಲಿ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾದ ಮಹಾಕುಂಭಕ್ಕೆ ಆಗಮಿಸುವವರಿಗಾಗಿ ಕಡಿಮೆ ಮೊತ್ತದಲ್ಲಿ ಭರ್ಜರಿ ಭೋಜನ ಸಿಗುವ ಮಾ ಕಿ ರಸೋಯ್ (ಅಮ್ಮನ ಅಡುಗೆಮನೆ)ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಚಾಲನೆ ನೀಡಿದರು.
ಈ ಸಮುದಾಯ ಅಡುಗೆಮನೆಯು ಸ್ವರೂಪ್ ರಾಣಿ ನೆಹರು ಆಸ್ಪತ್ರೆಯ ಕ್ಯಾಂಪಸ್‌ನಲ್ಲಿದ್ದು ನಂದಿ ಸೇವಾ ಸಂಸ್ಥಾನ ನಿರ್ವಹಿಸಲಿದೆ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಜನರನ್ನು ಬೆಂಬಲಿಸಲು ಉತ್ತರ ಪ್ರದೇಶ ಸರ್ಕಾರ ಈ ಯೋಜನೆಯ ಘೋಷಿಸಿದೆ. ನಂದಿ ಸೇವಾ ಸಂಸ್ಥಾನದ ಪ್ರಕಾರ, ತಮ್ಮ ಎಸ್‌ಆರ್‌ಎನ್ ಆಸ್ಪತ್ರೆಗೆ ಬರುವವರಿಗೆ ಮತ್ತು ಆಹಾರದ ಬಗ್ಗೆ ಚಿಂತೆ ಮಾಡುವವರಿಗೆ ‘ಮಾ ಕಿ ರಸೋಯಿ’ ಉಪಯುಕ್ತವಾಗಿದೆ. ಈ ಮಾ ಕಿ ರಸೋಯ್‌ಯಲ್ಲಿ ಸಿಗುವ ಊಟದಲ್ಲಿ ದಾಲ್, ನಾಲ್ಕು ರೊಟ್ಟಿ, ತರಕಾರಿ ಪಲ್ಯಗಳು, ಅನ್ನ, ಸಲಾಡ್ ಮತ್ತು ಸಿಹಿತಿಂಡಿ ಒಳಗೊಂಡಿದೆ ಇದಿಷ್ಟು ಬಗೆಗಳಿಗೆ ವಿಧಿಸಿರುವ ಮೊತ್ತ ಮಾತ್ರ ಕೇವಲ 9 ರೂಪಾಯಿ.
ಕಡಿಮೆ ಹಣದಲ್ಲಿ ಪೌಷ್ಟಿಕ ಆಹಾರ
ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ ಸಿಎಂ ಯೋಗಿ ಆಸ್ಪತ್ರೆಯ ಸೌಲಭ್ಯಗಳನ್ನು ಪರಿಶೀಲಿಸಿದರು ಮತ್ತು ಉಪಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಹಾಜರಿದ್ದವರಿಗೆ ವೈಯಕ್ತಿಕವಾಗಿ ಆಹಾರ ನೀಡಿದರು. ಮಹಾಕುಂಭದ ಸಮಯದಲ್ಲಿ ಸಂದರ್ಶಕರು, ನಿವಾಸಿಗಳಿಗೆ ಕೈಗೆಟುಕುವ ಮತ್ತು ಪೌಷ್ಟಿಕಾಂಶದ ಊಟವನ್ನು ಖಾತ್ರಿಪಡಿಸುವಲ್ಲಿ ಈ ಯೋಜನೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಉದ್ಘಾಟನೆಯ ನಂತರ, ಕೈಗಾರಿಕಾ ಅಭಿವೃದ್ಧಿ ಸಚಿವ ನಂದಗೋಪಾಲ್ ಗುಪ್ತಾ ಅವರು ಸಿಎಂಗೆ ಅಲ್ಲಿ ಆಹಾರದ ಗುಣಮಟ್ಟ, ನೈರ್ಮಲ್ಯ ಮಾನದಂಡಗಳು ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.
ಮಾ ಕಿ ರಸೋಯಿ, ಸಂಪೂರ್ಣ ಹವಾನಿಯಂತ್ರಿತ (ಎಸಿ), ಆರೋಗ್ಯಕರ ಮತ್ತು ಆಧುನಿಕ ರೆಸ್ಟೋರೆಂಟ್, ಎಸ್‌ಆರ್‌ಎನ್ ಕ್ಯಾಂಪಸ್‌ನಲ್ಲಿ ಸುಮಾರು 2000 ಚದರ ಅಡಿ ಪ್ರದೇಶದಲ್ಲಿ ನಂದಿ ಸೇವಾ ಸಂಸ್ಥಾನದಿಂದ ಸಿದ್ಧಪಡಿಸಲಾಗಿದೆ. ಏಕಕಾಲದಲ್ಲಿ ಸುಮಾರು 150 ಮಂದಿ ಒಟ್ಟಿಗೆ ಕುಳಿತು ಊಟ ಮಾಡಲು ಸಾಧ್ಯವಾಗುತ್ತದೆ.
ಮಹಾಕುಂಭಮೇಳ ಮಾಹಿತಿ ಪ್ರಸಾರಕ್ಕಾಗಿ “ಕುಂಭವಾಣಿ’ ಎಫ್ಎಂ
ಮಹಾಕುಂಭಮೇಳ ಕಾರ್ಯಕ್ರಮದ ಮಾಹಿತಿ ಪ್ರಸಾರ ಮಾಡುವ ಸಲುವಾಗಿ ಪ್ರಸಾರ ಭಾರತಿ “ಕುಂಭವಾಣಿ” ಎಂಬ ಎಫ್ಎಂ ರೇಡಿಯೋ ಚಾನೆಲ್‌ನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಕುಂಭವಾಣಿಯು ಪ್ರತಿ ಹಳ್ಳಿಗಳಿಗೂ ತಲುಪಿ ಜನರಿಗೆ ಮಾಹಿತಿ ನೀಡಲಿದೆ. ಮೇಳದಲ್ಲಿ ಭಾಗಿಯಾಗಲು ಸಾಧ್ಯವಾಗದವರಿಗೆ ಮಾಹಿತಿ ನೀಡುವ ಮೂಲಕ ಜನಪ್ರಿಯತೆ ಗಳಿಸಲಿದೆ’ ಎಂದು ಹೇಳಿದ್ದಾರೆ. ಒಟಿಟಿ ಆಧರಿತವಾಗಿರುವ ಈ ಚಾನೆಲ್ ಜ.10ರಿಂದ ಜ.26ರವರೆಗೆ ಲಭ್ಯವಿರಲಿದೆ.
प्रयागराज में ‘यू.पी. स्टेट पवेलियन’ प्रदर्शनी के उद्घाटन हेतु आयोजित कार्यक्रम में… https://t.co/aEgUtpGcjq
— Yogi Adityanath (@myogiadityanath) January 10, 2025
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway; 2 ವರ್ಷದಲ್ಲಿ 50 ಅಮೃತ್ ಭಾರತ ರೈಲು ಉತ್ಪಾದನೆ: ಅಶ್ವಿನಿ ವೈಷ್ಣವ್
Cardiac arrest: ಗುಜರಾತ್ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಸಾ*ವು
Chhattisgarh: ನಕ್ಸಲರು ಇಟ್ಟಿದ್ದ ಐಇಡಿ ಸ್ಫೋ*ಟ, ವ್ಯಕ್ತಿ ಸಾ*ವು
Industrial production ಕಳೆದ ನವೆಂಬರ್‌ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.