ಚೀನದೊಂದಿಗಿನ ಭಾರತ ಗಡಿ ಯೋಧರಿಗೆ ಇನ್ನು ಪೂರ್ಣ ಪಿಂಚಣಿ
Team Udayavani, Mar 10, 2018, 11:36 AM IST
ಹೊಸದಿಲ್ಲಿ : ಚೀನದೊಂದಿಗಿನ ಗಡಿ ರಕ್ಷಣೆಯಲ್ಲಿ ತೊಡಗಿದ್ದ ವೇಳೆ ಮೃತಪಟ್ಟ ಅಥವಾ ಗಾಯಗೊಂಡ ಭಾರತೀಯ ಯೋಧರಿಗೆ ಪೂರ್ಣ ಪಿಂಚಣಿಯನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.
ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೋಕ್‌ಲಾಂ ಪ್ರದೇಶದಲ್ಲಿ ಭಾರತ ಮತ್ತು ಚೀನ ಪಡೆಗಳು ಸುಮಾರು 6 ತಿಂಗಳ ಕಾಲ ಮುಖಾಮುಖೀಯಾಗಿ ಬಹುತೇಕ ದೈಹಿಕ ಜಟಾಪಟಿಗೆ ಮುಂದಾಗುವ ಸನ್ನಿವೇಶ ತಲೆದೋರಿ ಕೊನೆಗೂ ಈ ಸಮರ ಸನ್ನಿಹಿತ ಸ್ಥಿತಿಯು ಉನ್ನತ ರಾಜತಾಂತ್ರಿಕ ಮಾತುಕತೆಯಲ್ಲಿ ಶಮನಗೊಂಡ ಆರು ತಿಂಗಳ ಬಳಿಕ ಸರಕಾರ ಈಗ ಚೀನ ಗಡಿಯಲ್ಲಿ ಮೃತಪಟ್ಟ ಅಥವಾ ಗಾಯಗೊಂಡ ಭಾರತೀಯ ಯೋಧರಿಗೆ ಪೂರ್ಣ ಪಿಂಚಣಿ ನೀಡುವ ನಿರ್ಧಾರವನ್ನು ಕೈಗೊಂಡಿದೆ.
ಈ ವರೆಗಿನ ನಿಯಮಗಳ ಪ್ರಕಾರ ಯೋಧರಿಗೆ ಅವರು ಕೊನೆಯ ಬಾರಿ ಪಡೆದ ವೇತನದ ಶೇ.30ರಷ್ಟು ಮಾತ್ರವೇ ಅವರಿಗೆ ಪಿಂಚಣಿಯಾಗಿ ಸಿಗುತ್ತಿತ್ತು. ಇದೀಗ ಉದಾರೀಕೃತ ಕುಟುಂಬ ಪಿಂಚಣಿಯು ಅವರಿಗೆ ಶೇ.100 ಪಿಂಚಣಿಯನ್ನು ಪಡೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.
ಆದರೆ ಶೇ.100 ಪಿಂಚಣಿ ಪಡೆಯುವ ಭಾಗ್ಯ ಈ ತನಕ ಪಾಕಿಸ್ಥಾನದ ಅಂತಾರಾಷ್ಟ್ರೀಯ ಗಡಿಯಲ್ಲಿ ಮೃತಪಡುವ ಅಥವಾ ಗಾಯಗೊಳ್ಳುವ ಯೋಧರಿಗೆ ಮಾತ್ರವೇ ಅನ್ವಯಿಸುತ್ತಿತ್ತು. ಇದೀಗ ಈ ಉದಾರೀಕೃತ ಪಿಂಚಣಿಯನ್ನು ಸರಕಾರ ಚೀನದೊಂದಿಗೆ ಭಾರತ ಗಡಿ ರಕ್ಷಣೆಯಲ್ಲಿರುವ ಭಾರತೀಯ ಯೋಧರಿಗೂ ಅನ್ವಯಿಸಿದೆ.
ಈ ಉದಾರೀಕೃತ ಪೂರ್ಣ ಪಿಂಚಣಿ ಭಾಗ್ಯವು ಚೀನದೊಂದಿಗೆ ಭಾರತ ಗಡಿ ರಕ್ಷಣೆಯಲ್ಲಿರುವ ಯೋಧರಿಗೆ ಇದೇ ಮಾರ್ಚ್ 7ರಂದು ಅನ್ವಯವಾಗುವಂತೆ ಜಾರಿ ಮಾಡಲಾಗಿದೆ. ಆದರೆ ಈ ದಿನಾಂಕಕ್ಕೆ ಮೊದಲು ಪಿಂಚಣಿ ಪಡೆದವರಿಗೆ ಇದನ್ನು ಪೂರ್ವಾನ್ವಯ ಮಾಡಲಾಗುವುದಿಲ್ಲ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.