J&K:SIU ನಿಂದ ಮೂವರು ಶಂಕಿತ ಉಗ್ರರ ಮನೆಗಳ ಮೇಲೆ ದಾಳಿ
Team Udayavani, May 17, 2023, 2:44 PM IST
ಶ್ರೀನಗರ: ಉಗ್ರ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ತನಿಖಾ ಘಟಕವು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದ ಮೂರು ಸ್ಥಳಗಳಲ್ಲಿ ದಾಳಿ ನಡೆಸಿದೆ.
ಭಯೋತ್ಪಾದಕ ಚಟುವಟಿಕೆಗಳ ಮೇಲೆ ತನ್ನ ಶಿಸ್ತುಕ್ರಮವನ್ನು ಮುಂದುವರೆಸಿದ ಎಸ್ಐಯು ಮೂವರು ಶಂಕಿತರಾದ ಮಂಜೂರ್ ಅಹ್ಮದ್ ವಾನಿ, ಮೌಹ್ಸಿನ್ ಅಹ್ಮದ್ ಲೋನ್ ಮತ್ತು ಆರಿಯಾಫ್ ಬಶೀರ್ ಭಟ್ ಅವರ ಮನೆಗಳ ಮೇಲೆ ದಾಳಿ ನಡೆಸಿದೆ. ಇತರ ಭಯೋತ್ಪಾದಕ ಅಪರಾಧಗಳಲ್ಲಿ ಅವರು ಭಾಗಿಯಾಗಿರುವ ಕುರಿತು ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸಲು ಹುಡುಕಾಟಗಳನ್ನು ನಡೆಸಿದ್ದಾರೆ.
ಪೊಲೀಸ್ ಸ್ಟೇಷನ್ ಟ್ರಾಲ್ನಲ್ಲಿ ದಾಖಲಾದ 2023 ರ ಎಫ್ಐಆರ್ ನಂ.10 ರೊಂದಿಗೆ ಉಗ್ರಗಾಮಿ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಎಸ್ಐಯು ತಂಡ ರೆಶಿಪೋರ್ ಟ್ರಾಲ್ನಲ್ಲಿ ಮೂರು ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಜಿಎನ್ಎಸ್ ವರದಿ ಮಾಡಿದೆ.ಯಾವುದೇ ಬಂಧನಗಳ ಬಗ್ಗೆ ವರದಿಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.