ಜನನಾಯಕಿಗೆ ಕಣ್ಣೀರ ವಿದಾಯ

ದಿಲ್ಲಿಯ ಲೋಧಾ ರಸ್ತೆಯ ಚಿತಾಗಾರದಲ್ಲಿ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಅಂತ್ಯಕ್ರಿಯೆ

Team Udayavani, Aug 8, 2019, 6:00 AM IST

p-44

ಹೊಸದಿಲ್ಲಿ: ಮಂಗಳವಾರ ರಾತ್ರಿ ನಿಧನರಾದ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ಅವರ ಅಂತ್ಯ ಸಂಸ್ಕಾರ ಇಲ್ಲಿನ ಲೋಧಿ ರಸ್ತೆಯಲ್ಲಿನ ಚಿತಾಗಾರದಲ್ಲಿ ಬುಧವಾರ ಸಂಜೆ, ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ಸುಷ್ಮಾ ಅವರ ಏಕಮೇವ ಪುತ್ರಿ ಬಾನ್ಸುರಿ ನೆರವೇರಿಸಿದರು.

ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಭೂತಾನ್‌ನ ಪ್ರಧಾನಿ ಶೆರಿಂಗ್‌ ಟೋಬ್ಗೆ, ಬಿಜೆಪಿಯ ಧುರೀಣ ಎಲ್‌.ಕೆ. ಆಡ್ವಾಣಿ, ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯಸಭೆಯ ವಿರೋಧ ಪಕ್ಷಗಳ ನಾಯಕ ಗುಲಾಂ ನಬಿ ಆಜಾದ್‌, ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಆನಂದ್‌ ಶರ್ಮಾ, ಎನ್‌ಡಿಎಯ ನಾಯಕರು ಹಾಗೂ ಸುಷ್ಮಾ ಅವರ ಸಾವಿರಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಬುಧವಾರ ಬೆಳಗ್ಗೆ ಸುಷ್ಮಾ ಪಾರ್ಥಿವ ಶರೀರವನ್ನು ಅವರ ನಿವಾಸದಿಂದ ಸಂಜೆಯ ಹೊತ್ತಿಗೆ ಲೋಧಿ ರಸ್ತೆಯಲ್ಲಿರುವ ಅಂತ್ಯಸಂಸ್ಕಾರ ಸ್ಥಳಕ್ಕೆ ವ್ಯಾನ್‌ನಲ್ಲಿ ತರಲಾಯಿತು. ದಾರಿಯ ಇಕ್ಕೆಲಗಳಲ್ಲಿ ನಿಂತಿದ್ದ ಸಾವಿರಾರು ಮಂದಿ ಅಭಿಮಾನಿಗಳು ಈ ಅಂತಿಮ ಯಾತ್ರೆಯ ದೃಶ್ಯಗಳನ್ನು ತಮ್ಮ ಮೊಬೈಲ್‌ಗ‌ಳಲ್ಲಿ ಸೆರೆಹಿಡಿದರು.

ಕರೆತಂದ ಮೋದಿ: ಅಂತ್ಯಸಂಸ್ಕಾರಕ್ಕೂ ಮುನ್ನ ಪಾರ್ಥೀವ ಶರೀರ ದರ್ಶನಕ್ಕಾಗಿ ಬಂದ ಆಡ್ವಾಣಿಯವರನ್ನು ತಮ್ಮ ಆಸನದಿಂದ ಪ್ರಧಾನಿ ಮೋದಿ ಕೈ ಹಿಡಿದು ನಡೆಸಿಕೊಂಡು ಚಿತೆಯ ಬಳಿ ಕರೆತಂದರು. ಜತೆಯಲ್ಲಿ, ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಮುಂತಾದವರಿದ್ದರು. ಚಿತೆಯ ಬಳಿ ಮತ್ತೂಮ್ಮೆ ಆಡ್ವಾಣಿ ಜತೆಯಲ್ಲಿ ಎಲ್ಲಾ ನಾಯಕರು ಅಂತಿಮ ನಮನ ಸಲ್ಲಿಸಿದರು.

ಪ್ರಮುಖ ಪ್ರಚಾರಕಿ: ಬಿಜೆಪಿಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಆಡ್ವಾಣಿ 1990ರ ದಶಕದಲ್ಲಿ ಸುಷ್ಮಾ ಸ್ವರಾಜ್‌ ಪ್ರಮುಖ ನಾಯಕಿಯಾಗಿದ್ದರು. ಜತೆಗೆ ಬಿಜೆಪಿಯ ತಾರಾ ಪ್ರಚಾರಕರಲ್ಲಿ ಒಬ್ಬರಾಗಿದ್ದರು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಪ್ರಮುಖ ಸ್ಥಳಗಳಲ್ಲಿ ಅವರು ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದ ವೇಳೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರುತ್ತಿದ್ದರು. 1990 ಮತ್ತು 2 ಸಾವಿರನೇ ಇಸ್ವಿಯಲ್ಲಿ ಸುಷ್ಮಾ ಸ್ವರಾಜ್‌ ಪ್ರಚಾರಕ್ಕೆ ಆಗಮಿಸಲೇಬೇಕು ಎಂದು ಬಿಜೆಪಿಯ ಚುನಾವಣಾ ಅಭ್ಯರ್ಥಿಗಳು ದುಂಬಾಲು ಬೀಳುತ್ತಿದ್ದರು.

ದಾದಿಗಳ ನೆನೆಕೆ
ಐದು ವರ್ಷಗಳ ಹಿಂದೆ ಕೇರಳದ ದಾದಿಯರ ಗುಂಪು ಇರಾಕ್‌ನಲ್ಲಿ ಐಸಿಸ್‌ ಉಗ್ರ ಸಂಘಟನೆಯಿಂದ ಅಪಹರಣಕ್ಕೆ ಒಳಗಾಗಿದ್ದ ವೇಳೆ ಅವರ ಬಿಡುಗಡೆಗೆ ಸುಷ್ಮಾ ಶ್ರಮ ವಹಿಸಿದ್ದು ಅವರ ಮನಸ್ಸಿನಲ್ಲಿ ಇನ್ನೂ ಇದೆ. ಮಾಜಿ ಸಚಿವೆಯ ಅಕಾಲಿಕ ನಿಧನದಿಂದ 46 ಮಂದಿ ದಾದಿಯರು ಹಾಗೂ ಅವರ ಕುಟುಂಬ ಸದಸ್ಯರೀಗ ದುಃಖೀತರಾಗಿದ್ದಾರೆ. ಆ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿಯಾಗಿದ್ದ ಊಮ್ಮನ್‌ ಚಾಂಡಿ ಕೂಡ ನರ್ಸ್‌ಗಳ ಬಿಡುಗಡೆಗಾಗಿ ಸುಷ್ಮಾ ಸ್ವರಾಜ್‌ಗೆ ಮನವಿ ಮಾಡಿದ್ದಾಗ ಸೂಕ್ತವಾಗಿ ಸ್ಪಂದಿಸಿದ್ದರು ಎಂದು ನೆನಪಿಸಿ ಕೊಂಡರು. ತಡರಾತ್ರಿಯಲ್ಲಿ ಪರಿಸ್ಥಿತಿ ವಿವರಿಸಿ ಫೋನ್‌ ಮಾಡಿದ್ದೆ. ಯಾವುದೇ ರೀತಿಯಲ್ಲಿ ಚಿಂತೆ ಮಾಡುವುದು ಬೇಡ ಎಂದು ಅವರು ಭರವಸೆ ನೀಡಿದ್ದರು. ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಪರಿಶೀಲಿಸಿ 15 ನಿಮಿಷದಲ್ಲಿ ಮತ್ತೆ ಫೋನ್‌ ಮಾಡುವುದಾಗಿ ಹೇಳಿ ಅದರಂತೆಯೇ ನಡೆದುಕೊಂಡಿದ್ದರು ಎಂದು ಚಾಂಡಿ ದುಃಖೀಸಿದರು. ಅವಿರತ ಶ್ರಮದ ಬಳಿಕ 2014ರ ಜುಲೈನಲ್ಲಿ ಎಲ್ಲರೂ ಸುರಕ್ಷಿತವಾಗಿ ಬಿಡುಗಡೆಯಾದರು ಎಂದು ನೆನಪಿಸಿಕೊಂಡಿದ್ದಾರೆ.

ತಂದೆ, ಮಗಳ ವಿದಾಯದ ಸೆಲ್ಯೂಟ್‌
ಸುಷ್ಮಾ ಸ್ವರಾಜ್‌ ಪಾರ್ಥಿವ ಶರೀರವನ್ನು ಬುಧವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿತ್ತು. ಈ ವೇಳೆ ಸುಷ್ಮಾ ಪಾರ್ಥಿವ ಶರೀರದ ಬಳಿಯೇ ಪತಿ ಸ್ವರಾಜ್‌ ಕೌಶಲ್‌ ಹಾಗೂ ಪುತ್ರಿ ಬಾನ್ಸುರಿ ಕೂಡ ನಿಂತಿದ್ದರು. ದಶಕಗಳವರೆಗೆ ಜೊತೆಯಿದ್ದ ಪತ್ನಿಯನ್ನು ಕಳೆದುಕೊಂಡ ನೋವು ಸ್ವರಾಜ್‌ ಕೌಶಲ್‌ ಮುಖದಲ್ಲಿ ಕಾಣಿಸು ತ್ತಿದ್ದರೆ, ಇಡೀ ದೇಶಕ್ಕೆ ಹೆಮ್ಮೆಯಾಗಿದ್ದ ಅಮ್ಮನನ್ನು ಕಳೆದುಕೊಂಡು ಅನಾಥ ಭಾವ ಪುತ್ರಿ ಬಾನ್ಸುರಿಯ ಮುಖದಲ್ಲಿತ್ತು. ಇನ್ನೇನು ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಸ್ವರಾಜ್‌ ಕೌಶಲ್‌, ಪುತ್ರಿ ಬಾನ್ಸುರಿ ವಿದಾಯ ಸೆಲ್ಯೂಟ್‌ ನೀಡಿದರು. ದೀನ ದಯಾಳ ಉಪಾಧ್ಯಾಯ ಮಾರ್ಗದ ಮೂಲಕ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಈ ವೇಳೆಯೂ ಇಬ್ಬರೂ ಕಣ್ಣಲ್ಲಿ ನೀರು ತುಂಬಿಕೊಂಡೇ ಜೊತೆ ಸಾಗಿದರು.

ಅಗಲಿಕೆ ಗಾಢವಾಗಿ ಕಾಡುತ್ತಿದೆ: ಸೋನಿಯಾ
ಸುಷ್ಮಾ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ “ಅವರ ಅಗಲುವಿಕೆ ಗಾಢವಾಗಿ ಕಾಡುತ್ತಿದೆ’ ಎಂದು ಹೇಳಿದ್ದಾರೆ. ಸುಷ್ಮಾರ ಪತಿ ಸ್ವರಾಜ್‌ ಕೌಶಲ್‌ ರಿಗೆ ಬರೆದಿರುವ ಪತ್ರದಲ್ಲಿ “ಉತ್ತಮ ವಾಗ್ಮಿ, ಸಂಸದೀಯ ಪಟು ಹಾಗೂ ಹಲವಾರು ಪ್ರತಿಭೆಗಳ ಸಂಗಮವಾಗಿದ್ದ, ನಿಮ್ಮ ಪ್ರೀತಿಯ ಮಡದಿ ಸುಷ್ಮಾ ಅವರು ಇನ್ನಿಲ್ಲ ಎಂದು ಕೇಳಿ ಮನಸ್ಸಿಗೆ ತೀವ್ರ ಬೇಸರವಾಯಿತು. ಸಾರ್ವಜನಿಕ ಸೇವೆಯಲ್ಲಿ ಅವರು ತೋರುತ್ತಿದ್ದ ಶ್ರದ್ಧೆ, ಕಾಳಜಿ, ಸಮರ್ಪಣಾ ಭಾವ ಅನುಕರಣೀಯ. ಪ್ರತಿಯೊಂ ದು ಹುದ್ದೆಗೂ ನ್ಯಾಯ ಒದ ಗಿಸಿದ ಧೀಮಂತೆ ಅವರು. ಅವರ ಅಗಲುವಿಕೆ ಗಾಢ ವಾಗಿ ಕಾಡುತ್ತಿದೆ’ ಎಂದಿದ್ದಾರೆ. “ರಾಜಕೀಯ ಹೊರತಾಗಿಯೂ ಉತ್ತಮ ವ್ಯಕ್ತಿತ್ವ ಹೊಂದಿದ್ದರಿಂದಾಗಿ ಅವರು, ತಮ್ಮ ಸಾರ್ವಜನಿಕ ಸೇವೆಗೂ ಒಂದು ವರ್ಚಸ್ಸನ್ನು ತಂದಿದ್ದರು’ ಎಂದಿದ್ದಾರೆ ಸೋನಿಯಾ.

ವಿಶ್ವನಾಯಕರ ಕಂಬನಿ
ಸುಷ್ಮಾ ಸ್ವರಾಜ್‌ ನಿಧನಕ್ಕೆ ಭಾರತದ ನಾಯಕರು ಮಾತ್ರವಲ್ಲ ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರು ಕಂಬನಿ ಮಿಡಿದಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ, ಇರಾನ್‌ ವಿದೇಶಾಂಗ ಸಚಿವ ಜಾವೇದ್‌ ಜಾಫ್ರಿ, ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಮಾರ್‌ ಎ ಫ‌ರ್ನಾಂಡ ಎಸ್ಪಿನೋಸಾ ಸೇರಿದಂತೆ ಹಲವಾರು ಮಂದಿ ಇತರ ರಾಷ್ಟ್ರಗಳ ನಾಯಕರು ಶೋಕ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಉತ್ತಮ ಸ್ನೇಹಿತೆಯನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ. ಇರಾನ್‌ಗೆ ಭೇಟಿ ನೀಡಿದ್ದ ವೇಳೆ ಸ್ವರಾಜ್‌ ಜತೆಗೆ ಉತ್ತಮ ರೀತಿಯಲ್ಲಿ ಮಾತುಕತೆಗಳು ನಡೆದಿದ್ದವು ಎಂದು ಸಚಿವ ಜಾವೇದ್‌ ಜಾಫ್ರಿ ಹೇಳಿಕೊಂಡಿದ್ದಾರೆ. ಬಹ್ರೈನ್‌ನ ವಿದೇಶಾಂಗ ಸಚಿವ ಖಾಲಿದ್‌ ಬಿನ್‌ ಅಹ್ಮದ್‌ ಅಲ್‌ ಖಲೀಫಾ “ನನ್ನ ಸಹೋದರಿಯೇ, ಬಹ್ರೈನ್‌ ಮತ್ತು ಭಾರತ ನಿಮ್ಮನ್ನು ಕಳೆದುಕೊಂಡಿದೆ. ನಿಮ್ಮ ಆತ್ಮಕ್ಕೆ ಶಾಂತಿ ಲಭಿಸಲಿ’ ಎಂದಿದ್ದಾರೆ.

ನಿಮ್ಮ ಹಿಂದೆ ಓಡುತ್ತಿದ್ದೇನೆ..
ಚುನಾವಣೆಗೆ ಸ್ಪರ್ಧಿಸುವುದಿಲ್ಲ 2018 ನವೆಂಬರ್‌ನಲ್ಲಿ ಎಂದು ಸುಷ್ಮಾ ನಿರ್ಧರಿಸಿದ್ದಾಗ ಸರಣಿ ಟ್ವೀಟ್‌ಗಳ ಮೂಲಕ ಪತಿ ಸ್ವರಾಜ್‌ ಕೌಶಲ್‌ ಪತ್ನಿಯ ರಾಜಕೀಯ ಜೀವನದ ಬಗ್ಗೆ ಬರೆದಿದ್ದರು. ಮೇಡಂ, ಇನ್ನು ಚುನಾವಣೆಗೆ ಸ್ಪರ್ಧಿಸದೇ ಇರುವ ನಿಮ್ಮ ನಿರ್ಧಾರಕ್ಕೆ ಧನ್ಯವಾದ ಗಳು. ಮಿಲ್ಕಾ ಸಿಂಗ್‌ ಕೂಡ ಒಂದು ದಿನ ಓಟ ನಿಲ್ಲಿಸಿದ್ದರು. 47 ವರ್ಷ ಗಳು ಸಂದಿವೆ. ನೀವು 11 ನೇರ ಚುನಾವಣೆಗೆ ಸ್ಪರ್ಧಿಸಿದ್ದೀರಿ. 1977ರ ನಂತರ 1991 ಹಾಗೂ ಕಳೆದ 46 ವರ್ಷಗಳಿಂದ ನಾನು ನಿಮ್ಮ ಹಿಂದೆ ಓಡುತ್ತಿದ್ದೇನೆ. ನಾನು ಇನ್ನೂ 19 ವರ್ಷದ ಹುಡುಗನಲ್ಲ. ನನ್ನ ಉಸಿರೂ ಉಡುಗುತ್ತಿದೆ ಧನ್ಯವಾದಗಳು ಎಂದಿದ್ದರು.

ವರ್ಷದಲ್ಲಿ 3 ಮಾಜಿ ಸಿಎಂಗಳ ಸಾವು
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಮೂವರು ನಾಯಕರು ಒಂದೇ ವರ್ಷದ ಅವಧಿಯಲ್ಲಿ ಕೊನೆಯುಸಿರೆಳೆದಿದ್ದಾರೆ. 1998ರ ಅಕ್ಟೋಬರ್‌ನಿಂದ ಡಿಸೆಂಬರ್‌ ಅವಧಿಗೆ ಸುಷ್ಮಾ ಸ್ವರಾಜ್‌ ಮುಖ್ಯಮಂತ್ರಿಯಾಗಿದ್ದವರು ಮಂಗಳವಾರ ನಿಧನರಾಗಿದ್ದಾರೆ. ಜು. 20ರಂದು 15 ವರ್ಷಗಳ ಕಾಲ ಸಿಎಂ ಆಗಿದ್ದ ಶೀಲಾ ದೀಕ್ಷಿತ್‌ ಅವರು ನಿಧನರಾಗಿದ್ದರು. 1993-1996ರ ವರೆಗೆ ಮುಖ್ಯಮಂತ್ರಿಯಾಗಿದ್ದ ಮದನ್‌ ಲಾಲ್‌ ಖುರಾನ 2018ರ ಅಕ್ಟೋಬರ್‌ನಲ್ಲಿ ಕೊನೆಯುಸಿರೆಳೆದಿದ್ದರು.

ಗದ್ಗದಿತರಾದ ಪಿಎಂ ಮೋದಿ
ಸುಷ್ಮಾ ಸ್ವರಾಜ್‌ರ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಗದ್ಗದಿತರಾದರು. ಪ್ರಧಾನಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ, ಅಲ್ಲೇ ಪಕ್ಕದಲ್ಲಿ ನಿಂತಿದ್ದ ಸ್ವರಾಜ್‌, ಪುತ್ರಿ ಬಾನ್ಸುರಿಗೆಗೆ ಸಾಂತ್ವನ ಹೇಳುವಾಗ ಕಂಬನಿ ಮಿಡಿದರು.

ಹೆಗಲು ಕೊಟ್ಟರು: ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕಾಗಿ ಲೋಧಿ ಗಾರ್ಡನ್‌ಗೆ ಬಿಜೆಪಿ ಕಚೇರಿಯಿಂದ ಕೊಂಡೊಯ್ಯುವಾಗ, ಆಡ್ವಾಣಿ, ಅವರ ಪುತ್ರಿ ಪ್ರತಿಭಾ ಆಡ್ವಾಣಿ, ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ರವಿಶಂಕರ್‌ ಪ್ರಸಾದ್‌, ಪಿಯೂಷ್‌ ಗೋಯೆಲ್‌ ಹಾಗೂ ಇನ್ನಿತರ ನಾಯಕರು ಹೆಗಲು ಕೊಟ್ಟರು.

ನಾನು ಸಂಸತ್‌ ಸದಸ್ಯನಾಗಿದ್ದ ಅವಧಿಯಲ್ಲಿ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೆ. ಪಕ್ಷದ ಪರಿಧಿಗಳನ್ನು ಮೀರಿದ್ದ ಅಪರೂಪದ ನಾಯಕಿ. ಪಕ್ಷಾತೀತವಾಗಿ ಎಲ್ಲರ ಗೌರವ ಸಂಪಾದಿಸಿದ್ದರು. ಅವರ ಸೇವೆಯನ್ನು ದೇಶ ಸದಾ ನೆನಪಿನಲ್ಲಿ ಇಟ್ಟು ಕೊಳ್ಳುತ್ತದೆ. ಅವರ ನಿಧನಕ್ಕೆ ನನ್ನ ಸಂತಾಪಗಳು.
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ

ಅವರು ನಮ್ಮನ್ನು ಇಷ್ಟು ಬೇಗ ಅಗಲುತ್ತಾರೆ ಎಂದು ಊಹಿಸಲೂ ಆಗುತ್ತಿಲ್ಲ. ಅವರು ಸದಾ ಜನರಿಗೆ ಸಹಾಯಹಸ್ತ ನೀಡುತ್ತಿದ್ದರು. ಹಮೀದ್‌ ಅನ್ಸಾರಿ, ಸರಬ್ಜಿತ್‌, ಗೀತಾ ಅಥವಾ ಜಾಧವ್‌ ಯಾರೇ ಆಗಿರಲಿ ಸುಷ್ಮಾ ಅವರ ನೆರವಿಗೆ ಧಾವಿಸಿದ್ದರು.
ದಲ್ಬಿರ್‌ ಕೌರ್‌, ಸರಬ್ಜಿತ್‌ ಸಿಂಗ್‌ ಸಹೋದರಿ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.