ಅಂಗ ದಾನಿಗಳಿಗೆ ಮತ್ತಷ್ಟು ಅವಕಾಶ
Team Udayavani, Aug 30, 2017, 9:30 AM IST
ಹೊಸದಿಲ್ಲಿ: ಅಂಗಾಂಗ ದಾನದ ಅರ್ಹತೆಯ ಬಗ್ಗೆ ಇದ್ದ ನಿಯಮವನ್ನು ಕೇಂದ್ರ ಸರಕಾರ ಸಡಿಲಗೊಳಿಸಿದ್ದು “ಸಮೀಪದ ಬಂಧು’ಗಳಿಗೂ ಅವಕಾಶ ಕಲ್ಪಿಸಿದೆ.
ಈ ಕುರಿತಂತೆ, ಸುತ್ತೋಲೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ್ದು, ಮಾನವ ಅಂಗಾಂಗ ಕಸಿ ಕಾಯ್ದೆ 1994 (2011ರಲ್ಲಿ ತಿದ್ದುಪಡಿಯಾದಂತೆ)ಕ್ಕೆ ತಿದ್ದುಪಡಿ ತರುವುದಾಗಿ ಹೇಳಿದೆ. ತಿದ್ದುಪಡಿ ಕಾಯ್ದೆ ಬಗ್ಗೆ ಸೆ.25ರವರೆಗೆ ಸಾರ್ವಜನಿಕರು ಪ್ರತಿಕ್ರಿಯಿಸಲು ಅವಕಾಶವಿದೆ.
ಈ ಮೊದಲು ಹತ್ತಿರದ ಸಂಬಂಧಿಗಳು ಎಂದರೆ, ಹೆಂಡತಿ, ಪುತ್ರರು, ಪುತ್ರಿಯರು, ಗಂಡ, ತಾಯಿ, ಸಹೋದರರು ಮತ್ತು ಸಹೋದರರಿಯರಿಂದ ಅಂಗಾಂಗ ದಾನ ಪಡೆಯಲು ಅವಕಾಶ ಇತ್ತು. ಇದೀಗ ಈ “ಹತ್ತಿರದ ಸಂಬಂಧಿ’ ಎಂಬ ಪದದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಮಲ ತಂದೆ, ಮಲ ಸಹೋದರ/ಸಹೋದರಿ ಎಂದೂ ಸೇರಿಸಲಾಗಿದೆ. ಇದರಿಂದ ಅಂಗಾಂಗ ದಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಳಕ್ಕೆ ಅನುಕೂಲವಾಗಲಿದೆ ಎಂದು ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಮೊದಲು ಹತ್ತಿರದ ಸಂಬಂಧಿಗಳಿಂದ ಅಂಗಾಂಗ ಅಲಭ್ಯತೆ, ರಕ್ತದ ಗುಂಪು ಜೊತೆಯಾಗದೇ ಇರುವ ಸಮಸ್ಯೆಯಿಂದ ಅಂಗಾಂಗ ದಾನಿಗಳು ಸೂಕ್ತವಾಗಿ ಲಭ್ಯವಾಗುತ್ತಿರಲಿಲ್ಲ. ಆದ್ದರಿಂದ ಕಾನೂನು ಅನ್ವಯ ವ್ಯಾಪ್ತಿ ಹೆಚ್ಚಿಸಲಾಗಿದೆ. ಈ ಕುರಿತು ಸಾರ್ವಜನಿಕರು ತಮ್ಮ ಸಲಹೆಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ amendmentthotairi @gmail.com ಇಮೇಲ್‌ಗೆ ನೀಡುವಂತೆ ಮನವಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.