ಇಂದಿನಿಂದ ಜಿ20 ರಾಷ್ಟ್ರಗಳ ಸಭೆ: ಉಕ್ರೇನ್-ರಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಹತ್ವದ್ದು
Team Udayavani, Mar 1, 2023, 6:15 AM IST
ಹೊಸದಿಲ್ಲಿ: ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ದಾಳಿ ಒಂದು ವರ್ಷ ಮೀರಿರುವಂತೆಯೇ ಹೊಸದಿಲ್ಲಿಯಲ್ಲಿ ಮಾ.1 ಮತ್ತು 2ರಂದು ಜಿ20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೆಯಲಿದೆ.
ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್, ರಷ್ಯಾ ವಿದೇಶಾಂಗ ಸಚಿವ ಲಾರ್ವೋ, ಫ್ರಾನ್ಸ್‌ನ ಕ್ಯಾಥರೀನ್ ಕೊಲೊನ್ನಾ, ಚೀನದ ಕ್ವಿನ್ ಗಾಂಗ್, ಜರ್ಮನಿಯ ಅನ್ನಲೇನಾ , ಬ್ರಿಟನ್‌ನ ಜೇಮ್ಸ್ ಕ್ಲೆವರ್ಲೆ ಭಾಗವಹಿಸಲಿರುವುದು ಖಚಿತವಾಗಿದೆ. ಇದಲ್ಲದೆ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ವಿದೇಶಾಂಗ ಸಚಿವರೂ ಅದರಲ್ಲಿ ಭಾಗಿಗಳಾಗಲಿದ್ದಾರೆ.
ಬೆಂಗಳೂರಿನಲ್ಲಿ ಜಿ20 ರಾಷ್ಟ್ರಗಳ ವಿತ್ತ ಸಚಿವರ ಸಭೆಯ ಬಳಿಕ ದೇಶದಲ್ಲಿ ನಡೆಯಲಿರುವ ಮತ್ತೂಂದು ಮಹತ್ವದ ಸಭೆ ಇದಾಗಿದೆ. ಆಹಾರ ಮತ್ತು ಭದ್ರತೆ, ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ ಮತ್ತು ಅದರಿಂದ ಜಗತ್ತಿನ ಮೇಲೆ ಉಂಟಾಗಿರುವ ಪರಿಣಾಮಗಳು, ರಷ್ಯಾ ಮತ್ತು ಚೀನ ಹಾಗೂ ಜಗತ್ತಿನ ಇತರ ರಾಷ್ಟ್ರಗಳ ನಡುವಿನ ಮುನಿಸು ಪ್ರಮುಖವಾಗಿ ಚರ್ಚೆಯಾಗಲಿದೆ.
ದ್ವಿಪಕ್ಷೀಯ ಮಾತುಕತೆ ಸಾಧ್ಯತೆ
ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಲಿರುವ ಚೀನ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ವಿದೇಶಾಂಗ ಸಚಿವ ಎಸ್.ಜೈಶಂಕರ್ ಜತೆಗೆ ಮಾತುಕತೆ ನಡೆಸಲಿದ್ದಾರೆ. ಸಚಿವ ಕ್ವಿನ್ ಡಿಸೆಂಬ ರ್‌ನಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಅನಂತರ ಮೊದಲ ಬಾರಿಗೆ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. 2019, 2022ರಲ್ಲಿ ಕ್ವಿನ್ ಅವರು ಹೊಸದಿಲ್ಲಿಗೆ ಆಗಮಿಸಿ ದ್ದರು. ಗಾಲ್ವನ್ ಗಲಾಟೆ ನಡೆದ ಬಳಿಕ ಭಾರತ-ಚೀನ ನಡುವಿನ ಉತ್ತಮ ಬಾಂಧವ್ಯ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.