G20: ಶೃಂಗ ಸಭೆಗೊಂದು ಸುತ್ತು; 25+ದೇಶಗಳ ಮುಖ್ಯಸ್ಥರು
Team Udayavani, Sep 2, 2023, 7:45 AM IST
ಮಣಿಪಾಲ: ಹೊಸದಿಲ್ಲಿಯಲ್ಲಿ ಸೆ. 9-10ರಂದು ಪ್ರತಿಷ್ಠಿತ ಜಿ20 ದೇಶಗಳ ಮುಖ್ಯಸ್ಥರ ಶೃಂಗಸಭೆ. ಒಂದು ವರ್ಷದಿಂದ “ಗ್ಲೋಬಲ್ 20′ ಒಕ್ಕೂಟಕ್ಕೆ ಭಾರತ ಅಧ್ಯಕ್ಷನಾಗಿತ್ತು. ಇಡೀ ವರ್ಷದಲ್ಲಿ ಶ್ರೀನಗರ, ಬೆಂಗಳೂರು ಸಹಿತ ವಿವಿಧ ನಗರಗಳಲ್ಲಿ ನಾನಾ ಸ್ತರಗಳ ಸಭೆಗಳು ನಡೆದವು. ಈಗ ಪ್ರಗತಿ ಮೈದಾನದ ಭಾರತ ಮಂಟಪಂನಲ್ಲಿ ಮುಖ್ಯ ಘಟ್ಟ.
ಸೆ.07
ಉಳಿದ ಎಲ್ಲ ಅಧ್ಯಕ್ಷರಿಗಿಂತ ಮುಂಚಿತವಾಗಿ ಅಮೆರಿಕ ಅಧ್ಯಕ್ಷ ಬೈಡೆನ್ ಆಗಮನ. ಇದರಿಂದ ಹಲವು ಪ್ರಯೋಜನಗಳಿವೆ. ಪ್ರಧಾನ ಸಭೆಗೆ ಮುನ್ನ ಉಭಯ ದೇಶಗಳ ಮುಖ್ಯಸ್ಥರು ಹೆಚ್ಚು ಆಪ್ತವಾದ, ಗಹನ ಸಂವಾದ ನಡೆಸಲು ಸಾಧ್ಯ. ಅಂತೆಯೇ ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಿ ಮೋದಿ ನಡುವೆ ಸೆ. 8ರಂದು ದ್ವಿಪಕ್ಷೀಯ ಮಾತುಕತೆ ನಡೆಯುವ ನಿರೀಕ್ಷೆಗಳಿವೆ. ಇದರ ಕಾರ್ಯಸೂಚಿ ಗೌಪ್ಯವಾಗಿದೆ.
ಸೆ.08
ಜಿ20 ಕೂಟದ ಇತರ ಸದಸ್ಯ ದೇಶಗಳ ಮುಖ್ಯಸ್ಥರು ಹಾಗೂ ಆಹ್ವಾನಿತ ದೇಶಗಳ ಮುಖ್ಯಸ್ಥರು ಆಗಮಿಸುವರು. ಈ ಬಾರಿ ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾಗವಹಿಸುವುದು ಅನುಮಾನ. ಅವರ ಪ್ರತಿನಿಧಿಯಾಗಿ ಅಲ್ಲಿನ ಪ್ರಧಾನಿ ಭಾಗವಹಿಸುವ ಸಾಧ್ಯತೆ ಹೆಚ್ಚು. ಅದಕ್ಕೆ ಭಾರತ-ಚೀನದ ನಡುವಿನ ಗಡಿ ಸಮಸ್ಯೆಯೂ ಕಾರಣವಿರಬಹದು.
ಸೆ.09
ಸಭೆಗೆ ವಿಧ್ಯುಕ್ತ ಚಾಲನೆ. ಭಾರತ ಮಂಟಪಂನಲ್ಲಿ ಪ್ರತಿಯೊಬ್ಬ ಅತಿಥಿಗೂ ಸಾಂಪ್ರದಾಯಿಕ ಸ್ವಾಗತ. ಶೃಂಗಸಭೆಯ ಧ್ಯೇಯವಾಕ್ಯ “ವಸುಧೈವ ಕುಟುಂಬಕಂ’ ಅರ್ಥಾತ್ “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’. ಇದಕ್ಕೆ ಸಂಬಂಧಿಸಿ ಮೂರು ಪ್ರಧಾನ ಗೋಷ್ಠಿಗಳಿರಲಿವೆ.
ಮೊದಲ ಗೋಷ್ಠಿ : ಬೆಳಗ್ಗೆ 9.00
“ಒಂದು ಭೂಮಿ’ ಗೋಷ್ಠಿಯ ಬಳಿಕ ಸಂವಾದ, ಭೋಜನ, ಜತೆ ಜತೆಗೆ ಔಪಚಾರಿಕ ಮತ್ತು ಅನೌಪಚಾರಿಕ ದ್ವಿಪಕ್ಷೀಯ ಮಾತುಕತೆಗಳು.
ದ್ವಿತೀಯ ಗೋಷ್ಠಿ: ಅಪರಾಹ್ನ
“ಒಂದು ಕುಟುಂಬ’: ರಾತ್ರಿ ರಾಷ್ಟ್ರಪತಿ ಭೋಜನ ಕೂಟ ರಾಷ್ಟ್ರಪತಿ ದ್ರೌಪದಿ ಮುರ್ಮು ಆತಿಥ್ಯದ ಭೋಜನ ಕೂಟದೊಂದಿಗೆ ಶೃಂಗಸಭೆಯ ಮೊದಲ ದಿನ ಸಮಾಪನಗೊಳ್ಳುತ್ತದೆ.
ಸೆ.10
ಬೆಳಗ್ಗೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಸ್ಮಾರಕ ರಾಜ್‌ಘಾಟ್‌ಗೆ ಗಣ್ಯರ ಭೇಟಿ, ಗೌರವ ಅರ್ಪಣೆ. ಭಾರತ ಮಂಟಪಂನಲ್ಲಿ ಗಣ್ಯರು ತಮ್ಮ ದೇಶದಿಂದ ತಂದ ಒಂದು ವಿಶಿಷ್ಟ ಗಿಡಗಳನ್ನು ನೆಡಲಿದ್ದಾರೆ. “ಒಂದು ಭವಿಷ್ಯ’ ಗೋಷ್ಠಿಯೊಂದಿಗೆ ಸಭೆ ಸಮಾರೋಪ. ಬಳಿಕ ಅಧ್ಯಕ್ಷತೆ ಹಸ್ತಾಂತರ ಬ್ರೆಜಿಲ್ ದೇಶಕ್ಕೆ. ಡಿಸೆಂಬರ್ 1ರಿಂದ ಬ್ರೆಜಿಲ್‌ಗೆ ಜಿ20 ಅಧ್ಯಕ್ಷತೆ ಆರಂಭ.
300-400
ಈ ಸಭೆಯಲ್ಲಿ ಭಾಗವಹಿಸುವ ಜನರ ಅಂದಾಜು ಸಂಖ್ಯೆ 300-400. ಭೋಜನದ ಜತೆಗೆ ದ್ವಿಪಕ್ಷೀಯ ಸಭೆಗಳು, ಅನೌಪಚಾರಿಕ ಮಾತುಕತೆಗಳು.
ಯಾರೆಲ್ಲ ಆಹ್ವಾನಿತರು?
ಜಿ20 ಸದಸ್ಯ ದೇಶಗಳಲ್ಲದೆ ಬಾಂಗ್ಲಾದೇಶ, ಈಜಿಪ್ಟ್, ಮಾರಿಶಸ್,ನೆದರ್‌ಲ್ಯಾಂಡ್ಸ್, ನೈಜೀರಿಯಾ, ಸಿಂಗಾಪುರ, ಸ್ಪೇಯ್ನ, ಯುಎಇ, ಒಮಾನ್ ದೇಶಗಳ ಮುಖ್ಯಸ್ಥರನ್ನೂ ಆಹ್ವಾನಿಸಲಾಗಿದೆ.
ಜಿ20 ಸದಸ್ಯರು
ಅರ್ಜೆಂಟೀನ, ಆಸ್ಟ್ರೇಲಿಯ, ಬ್ರೆಜಿಲ್, ಕೆನಡ, ಚೀನ, ಫ್ರಾನ್ಸ್, ಜರ್ಮನಿ, ಭಾರತ, ಇಂಡೊ ನೇಶ್ಯ, ಇಟೆಲಿ, ಜಪಾನ್, ಮೆಕ್ಸಿಕೊ, ಕೊರಿಯನ್ ರಿಪಬ್ಲಿಕ್, ರಶ್ಯ, ಸೌದಿ ಅರೇಬಿಯ, ದಕ್ಷಿಣ ಆಫ್ರಿಕ, ಟರ್ಕಿ, ಯುನೈಟೆಡ್ ಕಿಂಗ್‌ಡಂ, ಅಮೆರಿಕ
ಸಂಸ್ಥೆಗಳ ಮುಖ್ಯಸ್ಥರು
ವಿಶ್ವಬ್ಯಾಂಕ್, ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಏಶ್ಯಾ ಅಭಿವೃದ್ಧಿ ಬ್ಯಾಂಕ್, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ, ವಿಶ್ವ ವ್ಯಾಪಾರ ಸಂಸ್ಥೆ, ಆಸಿಯಾನ್, ಯುರೋಪಿಯನ್ ಕೌನ್ಸಿಲ್, ಯುರೋಪಿಯನ್ ಕಮಿಶನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.