Oct 1: ಗೇಮಿಂಗ್, ಆಸ್ತಿ ನೋಂದಣಿ ದುಬಾರಿ: ಜನನ ಪ್ರಮಾಣಪತ್ರವೊಂದೇ ಎಲ್ಲದಕ್ಕೂ ದಾಖಲೆ
ಇಂದಿನಿಂದಲೇ ಹಲವು ತೆರಿಗೆ, ನಿಯಮಗಳು ಬದಲು
Team Udayavani, Oct 1, 2023, 2:29 AM IST
ಆನ್‌ಲೈನ್ ಗೇಮಿಂಗ್‌ಗೆ ಶೇ. 28ರಷ್ಟು ತೆರಿಗೆ, ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ನೆಟ್‌ವರ್ಕ್ ಬದಲಾವಣೆ, ಕರ್ನಾಟಕದಲ್ಲಿ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಸ್ಥಿರಾಸ್ತಿ ನೋಂದಣಿ ದುಬಾರಿ ಸಹಿತ ಇಂದಿನಿಂದ ಹಲವಾರು ಬದಲಾವಣೆಗಳಾಗಲಿವೆ. ಜತೆಗೆ ಇನ್ನು ಮುಂದೆ ಜನನ ಪ್ರಮಾಣಪತ್ರವೊಂದೇ ಎಲ್ಲದಕ್ಕೂ ದಾಖಲೆಯಾಗಲಿದೆ.
ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಗೊಂಡಿದ್ದು, ಅ. 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಆದರೆ ಅ. 1 ರವಿವಾರ ಹಾಗೂ ಅ. 2ರ ಸೋಮವಾರ ಸರಕಾರಿ ರಜಾದಿನವಾಗಿರುವ ಕಾರಣ ಅ. 3ರಿಂದ ಅಧಿಕೃತವಾಗಿ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಗರಿಷ್ಟ ಶೇ. 50ರ ವರೆಗೆ ಮಾರ್ಗಸೂಚಿ ದರದಲ್ಲಿ ಏರಿಕೆ ಆಗಲಿದೆ. ಇದರಿಂದ ಮಾರುಕಟ್ಟೆ ಮೌಲ್ಯವೂ ಹೆಚ್ಚಳವಾಗಲಿದೆ.
ಆಸ್ತಿ ನೋಂದಣಿಅ. 1ರಿಂದ ಆನ್‌ಲೈನ್ ಮನಿ ಗೇಮಿಂಗ್ ಮೇಲೆ ಜಿಎಸ್‌ಟಿ ಬೀಳಲಿದೆ. ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ-2017ರಲ್ಲಿ ಆನ್‌ಲೈನ್ ಮನಿ ಗೇಮಿಂಗನ್ನೂ ಸೇರಿಸಿದ್ದು, ಅಂತರ್ಜಾಲ ಅಥವಾ ವಿದ್ಯುನ್ಮಾನ ಸಂಪರ್ಕ ಜಾಲಗಳಲ್ಲಿ ಆಟವಾಡಲು ಆಹ್ವಾನಿಸುವುದು ಹಾಗೂ ಆಟವಾಡಲು ತೆರಿಗೆ ಪಾವತಿಸಬೇಕಾಗುತ್ತದೆ. ಇವುಗಳಿಗೆ ನಿಷೇಧ ಹೇರುವ ಬದಲು ತೆರಿಗೆ ವ್ಯಾಪ್ತಿಗೆ ಇವುಗಳನ್ನು ತರಲಾಗಿದೆ.
ಎಲ್ಲದಕ್ಕೂ ಒಂದೇ ದಾಖಲೆ
ದೇಶಾದ್ಯಂತ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ ಜಾರಿಗೆ ಬರಲಿದ್ದು, ಶಿಕ್ಷಣ ಸಂಸ್ಥೆಗಳು, ಚಾಲನ ತರಬೇತಿ ಪತ್ರ, ಮತದಾರರ ಪತ್ರ, ಆಧಾರ್ ಸಂಖ್ಯೆ, ಮದುವೆ ನೋಂದಣಿ, ಸರಕಾರಿ ನೌಕರಿ ಸೇರ್ಪಡೆಗೆ ಜನನ ನೋಂದಣಿ ಪತ್ರವೊಂದೇ ಸಾಕಾಗುತ್ತದೆ.
ಆನ್‌ಲೈನ್ ಗೇಮಿಂಗ್: ಜಿಎಸ್‌ಟಿ
ಅ. 1ರಿಂದ ಆನ್‌ಲೈನ್ ಮನಿ ಗೇಮಿಂಗ್ ಮೇಲೆ ಜಿಎಸ್‌ಟಿ ಬೀಳಲಿದೆ. ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ-2017ರಲ್ಲಿ ಆನ್‌ಲೈನ್ ಮನಿ ಗೇಮಿಂಗನ್ನೂ ಸೇರಿಸಿದ್ದು, ಅಂತರ್ಜಾಲ ಅಥವಾ ವಿದ್ಯುನ್ಮಾನ ಸಂಪರ್ಕ ಜಾಲಗಳಲ್ಲಿ ಆಟವಾಡಲು ಆಹ್ವಾನಿಸುವುದು ಹಾಗೂ ಆಟವಾಡಲು ತೆರಿಗೆ ಪಾವತಿಸಬೇಕಾಗುತ್ತದೆ. ಇವುಗಳಿಗೆ ನಿಷೇಧ ಹೇರುವ ಬದಲು ತೆರಿಗೆ ವ್ಯಾಪ್ತಿಗೆ ಇವುಗಳನ್ನು ತರಲಾಗಿದೆ.
ಸಣ್ಣ ಉಳಿತಾಯಕ್ಕೆ ಪ್ಯಾನ್ ಲಿಂಕ್
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ಹಿರಿಯ ನಾಗರಿಕರ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಬಳಕೆದಾರರು ಆಧಾರ್ ಮತ್ತು ಪ್ಯಾನ್ ಜತೆಗೆ ತಮ್ಮ ಖಾತೆಗಳನ್ನು ಲಿಂಕ್ ಮಾಡಿರಲೇಬೇಕು. ಇಲ್ಲವಾದಲ್ಲಿ ಈ ಅಕೌಂಟ್‌ಗಳಲ್ಲಿ ಅಪ್‌ಡೇಟ್ ಸಾಧ್ಯವಾಗುವುದಿಲ್ಲ. ಅಲ್ಲದೆ ಈ ಖಾತೆಗಳು ಸ್ತಂಭನವಾಗಲೂಬಹುದು.
ಕ್ರೆಡಿಟ್, ಡೆಬಿಟ್ ಕಾರ್ಡ್
ಮಹತ್ವದ ಬೆಳವಣಿಗೆಯಲ್ಲಿ ಆರ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ನೆಟ್‌ವರ್ಕ್ ಸಂಸ್ಥೆಗಳ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ. ರವಿವಾರದಿಂದಲೇ ಈ ನೀತಿಯೂ ಜಾರಿಗೆ ಬರಲಿದೆ. ಇನ್ನು ಮುಂದೆ ವಿಸಾ, ಮಾಸ್ಟರ್‌ಕಾರ್ಡ್, ರುಪೇ ನಡುವೆ ನಿಮಗೆ ಬೇಕಾದದ್ದನ್ನು ಆಯ್ದುಕೊಂಡು ಬದಲಾವಣೆ ಮಾಡಿಕೊಳ್ಳಬಹುದು.
ಹೊಸ ಟಿಸಿಎಸ್ ನಿಯಮ
ಇಂದಿನಿಂದ ವಿದೇಶಗಳಲ್ಲಿ 7 ಲಕ್ಷ ರೂ.ಗಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ವೆಚ್ಚಕ್ಕೆ ಶೇ. 20ರಷ್ಟು ಟಿಸಿಎಸ್ ಬೀಳಲಿದೆ. ಒಂದು ವೇಳೆ ವೈದ್ಯಕೀಯ ಅಥವಾ ಶೈಕ್ಷಣಿಕ ಉದ್ದೇಶಕ್ಕಾಗಿ ವೆಚ್ಚ ಮಾಡಿದ್ದರೆ, ಶೇ. 5ರಷ್ಟು ವಿನಾಯಿತಿ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.