ಗಾಂಧಿ ಕುಟುಂಬದಿಂದ ಸಂಗೀತ ಕುರ್ಚಿ ಆಟ!
Team Udayavani, Aug 12, 2019, 5:55 AM IST
ಹೊಸದಿಲ್ಲಿ: ಸೋನಿಯಾ ಗಾಂಧಿಯನ್ನು ಕಾಂಗ್ರೆಸ್‌ನ ಹಂಗಾಮಿ ಮುಖ್ಯಸ್ಥೆಯನ್ನಾಗಿ ಆಯ್ಕೆ ಮಾಡಿದ ಕ್ರಮವನ್ನು ಅಣಕವಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, “ಗಾಂಧಿ ಕುಟುಂಬ ದವರು ಸಂಗೀತ ಕುರ್ಚಿ ಆಟವಾಡುತ್ತಿದ್ದಾರೆ.
ಗಾಂಧಿ ಕುಟುಂಬದ ಯಾರನ್ನಾದರೂ ಕಾಂಗ್ರೆಸ್ ಆಯ್ಕೆ ಮಾಡಲೇಬೇಕಿತ್ತು. ಸೋನಿಯಾ ಗಾಂಧಿಯಿಂದ ಹೊರಟ ಅಧ್ಯಕ್ಷ ಹುದ್ದೆ ರಾಹುಲ್ ಗಾಂಧಿಗೆ ಆಗಮಿಸಿ, ಪುನಃ ಸೋನಿಯಾಗೆ ತೆರಳಿದೆ. ಒಂದು ಸುತ್ತು ಮುಕ್ತಾಯವಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಹಿಂದಿನ ಲೋಕಸಭೆ ಚುನಾವಣೆಯಲ್ಲೇ ಜನರು ಕುಟುಂಬ ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಆದರೆ ಕಾಂಗ್ರೆಸ್ ತನ್ನ ತಪ್ಪಿನಿಂದ ಪಾಠ ಕಲಿತಿಲ್ಲ. ಈಗಲೂ ಅವರಿಗೆ ಸೋನಿಯಾ ಮತ್ತು ರಾಹುಲ್ ಗಾಂಧಿಯೇ ಪಕ್ಷ ನಡೆಸಲು ಬೇಕಾಗಿದೆ ಎಂದಿದ್ದಾರೆ. ತನ್ನ ನಾಯಕರನ್ನು ಸಹಜವಾಗಿ ಬೆಳೆಯಲು ಅವಕಾಶ ನೀಡುವ ಮೂಲಕ ಬಿಜೆಪಿ ಒಂದು ಮಾದರಿಯಾಗಿದೆ. ಆದರೆ ಕಾಂಗ್ರೆಸ್ ಮೂಲ ಕುಟುಂಬವನ್ನು ಬಿಡಲು ಒಪ್ಪುತ್ತಲೇ ಇಲ್ಲ ಎಂದು ಅವರು ಟೀಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mourning: ಮನಮೋಹನ್ ಸಿಂಗ್ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ
Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.