![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 29, 2025, 8:58 AM IST
ಜೈಪುರ: 2,000 ಕೋಟಿ ರೂ.ಗೂ ಹೆಚ್ಚು ಸೈಬರ್ ವಂಚನೆ ನಡೆಸಿದ ತಂಡವೊಂದರ ಕಿಂಗ್‌ಪಿನ್‌ನನ್ನು ಶ್ರೀಗಂಗಾನಗರದಲ್ಲಿ ಬಂಧಿಸುವ ಮೂಲಕ ಭಾರಿ ವಂಚನೆ ಭೇದಿಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಆರೋಪಿಗಳ ವಿರುದ್ಧ ದೇಶಾದ್ಯಂತ ಸೈಬರ್ ವಂಚನೆಯ ದೂರುಗಳಿವೆ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಗಂಗಾನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಯಾದವ್ ಮಾತನಾಡಿ, ಬಂಧಿತ ಅಜಯ್ ಆರ್ಯ ಮತ್ತು ಆತನ ಸಹಚರರು ಸಾವಿರಾರು ಜನರಿಗೆ ಸುಮಾರು 2,000 ಕೋಟಿ ರೂಪಾಯಿಗಳ ಸೈಬರ್ ವಂಚನೆ ಮಾಡಿದ್ದಾರೆ ಎಂದು ಕರ್ನಾಟಕದ ನಿವಾಸಿ ಕಾಂತಪ್ಪ ಬಾಬು ಚವ್ಹಾಣ್ ಅವರು ಮಂಗಳವಾರ ಪುರಾಣಿ ಅಬಾದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಕರ್ನಾಟಕದ ಕ್ಯಾಪ್ಮೋರ್ಎಫ್ಎಕ್ಸ್ ಕಂಪನಿಯಲ್ಲಿ ಲಕ್ಷಗಟ್ಟಲೆ ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ವಂಚಕರು ಶ್ರೀಗಂಗಾನಗರಕ್ಕೆ ಪಲಾಯನಗೈದಿದ್ದರು ಎಂದು
ತಿಳಿಸಿದ್ದಾರೆ.
ಪೊಲೀಸರು ಆರ್ಯ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಶೋಧದ ವೇಳೆ 10 ಲಕ್ಷ ರೂಪಾಯಿ ನಗದು, ಮೂರು ಸಿಪಿಯುಗಳು, ಆರು ಮೊಬೈಲ್ ಫೋನ್‌ಗಳು, ಎಂಟು ಎಟಿಎಂ ಕಾರ್ಡ್‌ಗಳು, ಮೂರು ಪ್ಯಾನ್ ಕಾರ್ಡ್‌ಗಳು, ಸುಮಾರು 85 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಮತ್ತು ಸೈಬರ್ ವಂಚನೆಗೆ ಸಂಬಂಧಿಸಿದ ಇತರ ದಾಖಲೆಗಳು ಪತ್ತೆಯಾಗಿವೆ.
ಅಜಯ್ ಆರ್ಯ, ದೀಪಕ್ ಆರ್ಯ, ಲಜಪತ್ ಆರ್ಯ, ಸೌರಭ್ ಚಾವ್ಲಾ, ಅವರ ಪತ್ನಿ ಸಲೋನಿ ಚಾವ್ಲಾ, ಕರಮ್‌ಜಿತ್ ಸಿಂಗ್, ಬಲ್ಜಿತ್ ಸಿಂಗ್, ರಾಜೇಂದ್ರ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು 2022 ರಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಟೆಕ್ಬಲ್ ಟೆಕ್ ಎಂಬ ಕಂಪನಿಯನ್ನು ತೆರೆದು ಜನರಿಗೆ ಸೈಬರ್ ತರಬೇತಿ ನೀಡಲು ಪ್ರಾರಂಭಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.