ಡಿಸೆಂಬರ್‌ನಿಂದ ಶಾಲೆಗಳಲ್ಲಿ ಜಂಕ್ ಫುಡ್‌ಗೆ ಗೇಟ್‌ಪಾಸ್?
ಆಹಾರ ಸುರಕ್ಷೆ ಮತ್ತು ಗುಣಮಟ್ಟ ಆಯೋಗದಿಂದ ಕರಡು ಅಧಿಸೂಚನೆ ಪ್ರಕಟ
Team Udayavani, Nov 5, 2019, 10:57 PM IST
ನವದೆಹಲಿ: ಡಿಸೆಂಬರ್‌ನಿಂದ ಶಾಲೆಗಳ ಆವರಣದಲ್ಲಿನ ಕ್ಯಾಂಟೀನ್, ಕೆಫೆಟೇರಿಯಾ, ಅಂಗಡಿಗಳಲ್ಲಿ ಕಾಬೊìನೇಟೆಡ್ ತಂಪು ಪಾನೀಯಗಳು, ಚಿಪ್ಸ್, ಸಂಸ್ಕರಿತ ಹಣ್ಣಿನ ರಸದ ಪೊಟ್ಟಣ, ಪಿಜ್ಜಾ, ಸಮೋಸಾ ಹಾಗೂ ಇನ್ನಿತರ ಜಂಕ್ ಫುಡ್‌ಗಳ ಮಾರಾಟಕ್ಕೆ ಸದ್ಯದಲ್ಲೇ ಅಂಕುಶ ಬೀಳಲಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಆಯೋಗವು ಈ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿದೆ. ಡಿ.3ರವರೆಗೆ ಸಾರ್ವಜನಿಕರು ಈ ಬಗ್ಗೆ ಯಾವುದೇ ರೀತಿಯ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಈ ಬಳಿಕವಷ್ಟೇ ಆಯೋಗವು ಅಂತಿಮ ಅಧಿಸೂಚನೆ ಹೊರಡಿಸಲಿದೆ. ಶಾಲಾ ಮಕ್ಕಳಲ್ಲಿ ಜಂಕ್ ಫುಡ್‌ನ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ಮೂಡಿಸಲು ಆಯೋಗ ಇತ್ತೀಚೆಗೆ ಆರಂಭಿಸಿರುವ “ಈಟ್ ರೈಟ್’ (ಉತ್ತಮವಾದದ್ದನ್ನು ತಿನ್ನಿ) ಅಭಿಯಾನದಡಿ, ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಜಂಕ್ ಫುಡ್ ಮಾರಾಟ ಮಾತ್ರವಲ್ಲದೆ, ಶಾಲೆಗಳಿಂದ 50 ಮೀಟರ್ ದೂರದವರೆಗೆ ಜಂಕ್ ಫುಡ್‌ಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು, ಬ್ಯಾನರ್‌ಗಳನ್ನು, ಪೋಸ್ಟರ್‌ಗಳನ್ನು ಹಾಕುವಂತಿಲ್ಲ. ಅಲ್ಲದೆ, ಶಾಲಾ ಮಕ್ಕಳು ಭಾಗಿಯಾಗುವ ಕ್ರೀಡಾಕೂಟಗಳು, ಅಂತರಶಾಲಾ ಸಮ್ಮೇಳನಗಳಂಥ ಕಾರ್ಯಕ್ರಮಗಳಲ್ಲಿಯೂ ಯಾವುದೇ ಜಂಕ್ ಫುಡ್ ಜಾಹೀರಾತುಗಳ ಬ್ಯಾನರ್, ಪೋಸ್ಟರ್‌ಗಳನ್ನು ಪ್ರಕಟಿಸುವಂತಿಲ್ಲ. ಅಷ್ಟೇ ಅಲ್ಲ, ಖಾಸಗಿ ಸಂಸ್ಥೆಗಳು, ಜಾಹೀರಾತುದಾರರು ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಿಗೆ ಕೆಲವು ತಿನಿಸುಗಳ ಉಚಿತ ಸ್ಯಾಂಪಲ್‌ಗಳನ್ನು ನೀಡುವುದನ್ನೂ ನಿಷೇಧಿಸಲಾಗಿದೆ. ವಸತಿ ಶಾಲೆಗಳಿಗೂ ಈ ನಿಯಮ ಅನ್ವಯವಾಗುತ್ತದೆ ಎಂದು ಈ ಕರಡು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.
ಏನಿದೆ ಆದೇಶದಲ್ಲಿ?
ಜಂಕ್ ಫುಡ್‌ಗಳ ನಿಷೇಧ ಸಂಬಂಧ ಹೊರಡಿಸಲಾಗಿರುವ ಕರಡು ಅಧಿಸೂಚನೆಯಲ್ಲಿ 10 ಅಂಶಗಳನ್ನು ಪ್ರಕಟಿಸಲಾಗಿದೆ. ಮಧ್ಯಾಹ್ನದ ಬಿಸಿ ಊಟ ಸಿದ್ಧಪಡಿಸುವಾಗ ಶುಚಿತ್ವ ಕಾಪಾಡಿಕೊಳ್ಳಬೇಕು, ಶಾಲೆಗಳ ಕ್ಯಾಂಟೀನ್‌ಗಳಲ್ಲಿ, ಮೆಸ್, ಹಾಸ್ಟೆಲ್‌ಗಳು ಅಥವಾ ಶಾಲೆಯಿಂದ 50 ಮೀ. ಅಂತರದಲ್ಲಿ ಹೆಚ್ಚು ಕೊಬ್ಬಿನ ಅಂಶ ಇರುವ ತಿನಿಸುಗಳ ಮಾರಾಟ ಮಾಡುವಂತಿಲ್ಲ. ಶಾಲೆಗಳಲ್ಲಿ ಸುರಕ್ಷಿತ ಆಹಾರ ಪದ್ಧತಿಗೆ ಉತ್ತೇಜನ ಮತ್ತು ತಿಳಿವಳಿಕೆ, ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಹೇಳಿರುವ ರೀತಿಯಲ್ಲಿ ಆಹಾರ ವಸ್ತುಗಳ ಬಳಕೆಗೆ ಉತ್ತೇಜನ, ಶಾಲೆಗಳಲ್ಲಿ ಕಡಿಮೆ ಪೌಷ್ಟಿಕಾಂಶ ಇರುವ ಆಹಾರ ನೀಡದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ
Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ
ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.