ಜಿಡಿಪಿ ಶೇ.6.77-7.5ಕ್ಕೆ ತಲುಪುವುದು ಅನುಮಾನ

Team Udayavani, Aug 12, 2017, 7:20 AM IST

Arvind-Subramanian.jpg

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿತ್ತೀಯ ದೃಷ್ಟಿಕೋನದಲ್ಲಿ ಅನಿಶ್ಚಿತತೆ, ರೂಪಾಯಿ ಮೌಲ್ಯದಲ್ಲಿ ಸುಧಾರಣೆ ಯಾಗದೇ ಇರುವುದು, ಕೃಷಿ ಸಾಲ ಮನ್ನಾ ಮತ್ತು ಜಿಎಸ್‌ಟಿ ಅಳವಡಿಕೆಯಲ್ಲಿನ ಸವಾಲುಗಳಿಂದಾಗಿ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.6.75ರಿಂದ ಶೇ.7.5 ರಷ್ಟಕ್ಕೆ ತಲುಪುವುದು ಅನುಮಾನವಾಗಿದೆ ಎಂದು ಆರ್ಥಿಕ ಸಮೀಕ್ಷೆ ಎಚ್ಚರಿಸಿದೆ. 

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರು ತಯಾರಿಸಿದ ಈ ವರದಿಯನ್ನು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾಗಿದೆ. ವರದಿ ಯಲ್ಲಿ ಹಣದುಬ್ಬರ ಇಳಿತ, ಕೃಷಿ ಆದಾಯದಲ್ಲಿ ಕುಂಠಿತ, ಕೃಷಿ ಸಾಲ ಮನ್ನಾ, ವಿದ್ಯುತ್‌ ಮತ್ತು ಟೆಲಿಕಾಂ ಕ್ಷೇತದಲ್ಲಿ ಲಾಭದ ಕೊರತೆ, ಜಿಎಸ್‌ಟಿ ಜಾರಿಯಲ್ಲಿನ ಸಮಸ್ಯೆಗಳು ಆರ್ಥಿಕಾಭಿ ವೃದ್ಧಿಗೆ ತೀವ್ರ ಸವಾಲುಗಳಾಗಿವೆ ಎಂದು ಹೇಳಿದೆ. ಅಲ್ಲದೇ ಕೃಷಿ ಸಾಲ ಮನ್ನಾ ಜಿಡಿಪಿಯ ಶೇ.0.7ರಷ್ಟನ್ನು ಬಯಸಲಿದೆ. ಒಟ್ಟು ಕೃಷಿ ಸಾಲ ಮನ್ನಾ 2.7 ಲಕ್ಷ ಕೋಟಿಗೆ ತಲುಪಲಿದೆ ಎಂದಿದೆ.

ರಿಸರ್ವ್‌ ಬ್ಯಾಂಕ್‌ ನಿರೀಕ್ಷೆ ಮಾಡಿದ್ದ ಕ್ಕಿಂತಲೂ ಕಡಿಮೆ ದರದಲ್ಲಿ ಹಣದುಬ್ಬರ (ಶೇ.4ರಷ್ಟಕ್ಕೂ ಕೆಳಗೆ) ಇರಲಿದೆ ಎಂದು ಹೇಳಿದೆ. ಇದರೊಂದಿಗೆ ವಿತ್ತೀಯ ಕೊರತೆ ಪ್ರಮಾಣ 2017-18ನೇ ಸಾಲಿನಲ್ಲಿ ಜಿಡಿಪಿಯ ಶೇ.3.2ರಷ್ಟು ಇರಲಿದೆ ಎಂದು ಹೇಳಲಾಗಿದೆ. ಅಪನಗದೀಕರಣದ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪವಾಗಿದ್ದು, ಇದರಿಂದ ತೆರಿಗೆ ವ್ಯಾಪ್ತಿ ವಿಶಾಲವಾಗಲು ಕಾರಣವಾಗಿದೆ. ಅಪನಗದೀಕರಣ ಬಳಿಕ ಜಿಡಿಪಿ ದರ ಅತ್ಯಲ್ಪವಾಗಿ ವೇಗ ಪಡೆದಿದೆ. ತೆರಿಗೆ ವಲಯಕ್ಕೆ ಹೊಸದಾಗಿ 4.4 ಲಕ್ಷ ಮಂದಿ ಸೇರಿಕೊಂಡಿದ್ದು, ದೀರ್ಘಾವಧಿಯಲ್ಲಿ ಲಾಭ ತರಬಹುದು ಎಂದಿದೆ.

ಕೈಗಾರಿಕಾ ಉತ್ಪಾದನೆ ಭಾರೀ ಕುಸಿತ: ಮೇ ತಿಂಗಳಲ್ಲಿ ಶೇ.2.8ರಷ್ಟು ಹೆಚ್ಚಳ ವಾಗಿದ್ದ ಕೈಗಾರಿಕಾ ಉತ್ಪಾದನೆ ಜೂನ್‌ ತಿಂಗಳಲ್ಲಿ ನಿರೀಕ್ಷೆಯನ್ನು ಹುಸಿಯಾಗಿಸಿ, ಶೇ.0.1ರಷ್ಟು ಕುಸಿತ ದಾಖಲಿಸಿದೆ. ಜಿಎಸ್‌ಟಿ ಜಾರಿಗೆ ಮುನ್ನ ವ್ಯಾಪಾರಿಗಳು ತಮ್ಮಲ್ಲಿದ್ದ ದಾಸ್ತಾನುಗಳನ್ನು ಕಡಿಮೆ ಮಾಡಲು ಮುಂದಾಗಿದ್ದೂ ಇದಕ್ಕೊಂದು ಕಾರಣ ಎನ್ನಲಾಗಿದೆ.

ತಿಂಗಳಲ್ಲೇ ಅತಿ ಕೆಳಮಟ್ಟಕ್ಕಿಳಿದ ಸೆನ್ಸೆಕ್ಸ್‌
ಮುಂಬೈ:
ದೇಶದ ಜಿಡಿಪಿ ಶೇ.7.5 ತಲುಪುವುದು ಕಷ್ಟ ಎಂದು ಆರ್ಥಿಕ ಸಮೀಕ್ಷೆಯ ವರದಿ ಬಂದಿದ್ದೇ ತಡ, ಮುಂಬೈ ಷೇರುಪೇಟೆ ಮತ್ತು ನಿಫ್ಟಿ ಪಾತಾಳಕ್ಕೆ ಕುಸಿದಿದೆ. ರಿಸ್ಕ್ ತಡೆ ಯಲು ಅಸಾಧ್ಯ ಎಂದು ಭಾವಿಸಿದ ಹೂಡಿಕೆ ದಾರರು ಷೇರುಗಳ ಮಾರಾ ಟದಲ್ಲಿ ತೊಡಗಿದ ಪರಿಣಾಮ ಸೆನ್ಸೆಕ್ಸ್‌ 317 ಅಂಕ ಕುಸಿದು, 31,213ರಲ್ಲಿ ವಹಿ ವಾಟು ಅಂತ್ಯಗೊಳಿಸಿತು. ಇನ್ನು ನಿಫ್ಟಿ ಕೂಡ ಬರೋಬ್ಬರಿ 109 ಅಂಕ ಕುಸಿತ ದಾಖಲಿಸಿ, 9,710ಗೆ ಕೊನೆ ಗೊಂ ಡಿತು. ಇದು 1 ತಿಂಗಳಲ್ಲೇ ಆದ ಅತ್ಯಧಿಕ ಕುಸಿತವಾಗಿದೆ. ಷೇರು ಮಾರುಕಟ್ಟೆಯ ಕುಸಿತದಿಂದಾಗಿ ಹೂಡಿಕೆ ದಾರರು ಸುಮಾರು 95 ಸಾವಿರ ಕೋಟಿಯಷ್ಟು ನಷ್ಟ ಅನುಭವಿಸಬೇಕಾಯಿತು.
 
ಟಾಪ್ ನ್ಯೂಸ್

ICC-Champ

Champions Trophy: ಕೊನೆಗೂ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

Jaipur: 13 ಮಂದಿಯನ್ನು ಬಲಿ ಪಡೆದ ದುರಂತದಲ್ಲಿ LPG ಟ್ಯಾಂಕರ್ ಚಾಲಕ ಬದುಕುಳಿದಿದ್ದೇ ರೋಚಕ

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ

ರಾಜಸ್ಥಾನದಲ್ಲಿ ಮತ್ತೊಂದು ಬೋರ್ ವೆಲ್ ದುರಂತ… 150 ಅಡಿ ಆಳದಲ್ಲಿ ಸಿಲುಕಿದ 3 ವರ್ಷದ ಬಾಲಕಿ

ರಾಜಸ್ಥಾನದಲ್ಲಿ ಮತ್ತೊಂದು ಬೋರ್ ವೆಲ್ ದುರಂತ… 150 ಅಡಿ ಆಳದಲ್ಲಿ ಸಿಲುಕಿದ 3 ವರ್ಷದ ಬಾಲಕಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10-

Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ

ICC-Champ

Champions Trophy: ಕೊನೆಗೂ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.