ಜಿಡಿಪಿ ಏರಿಕೆ ಶುರು
Team Udayavani, Dec 1, 2017, 6:15 AM IST
ಹೊಸದಿಲ್ಲಿ: ನೋಟು ಅಪಮೌಲ್ಯ ಘೋಷಣೆ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ಕಳೆದೈದು ತ್ತೈಮಾಸಿಕಗಳಿಂದಲೂ ಇಳಿಮುಖವಾಗಿ ಸಾಗುತ್ತಿದ್ದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಸೆಪ್ಟಂಬರ್ ತ್ತೈಮಾಸಿಕದಲ್ಲಿ
ಶೇ. 6.3ಕ್ಕೆ ಏರಿದೆ. ಜೂನ್ ತ್ತೈಮಾಸಿಕದಲ್ಲಿ 3 ವರ್ಷಗಳಲ್ಲೇ ಅಧಿಕ ಕುಸಿತ ಕಂಡಿದ್ದ ಜಿಡಿಪಿ, ಶೇ. 5.7ಕ್ಕೆ ತಲುಪಿತ್ತು.
ಈ ಸಂಬಂಧ ಕೇಂದ್ರೀಯ ಸಾಂಖೀÂಕ ಕಚೇರಿ (ಸಿಎಸ್‌ಒ) ದತ್ತಾಂಶವನ್ನು ಬಿಡುಗಡೆ ಮಾಡಿದ್ದು, ಉತ್ಪಾದನೆ, ವಿದ್ಯುತ್, ಅನಿಲ, ನೀರು ಪೂರೈಕೆ, ಇತರ ಸೇವೆಗಳು, ವ್ಯಾಪಾರ, ಹೊಟೇಲ್‌ಗಳು, ಸಂವಹನ ಮತ್ತು ಬ್ರಾಡ್‌ಕಾಸ್ಟಿಂಗ್ ಸಂಬಂಧಿ ಸೇವೆಗಳು ಶೇ. 6ಕ್ಕಿಂತ ಹೆಚ್ಚಿನ ವೇಗದಲ್ಲಿ ಅಭಿವೃದ್ಧಿ ಕಂಡಿವೆ. ಅದರಲ್ಲೂ ಉತ್ಪಾದನೆ ವಲಯವು ಶೇ. 7ರ ದರದಲ್ಲಿ ಏರಿಕೆ ಕಂಡಿದೆ. ಆದರೆ ಕೃಷಿ ಮತ್ತು ಮೀನುಗಾರಿಕೆ ವಲಯಗಳು ಪ್ರಗತಿಯಲ್ಲಿ ಕುಂಠಿತ ಸಾಧಿಸಿದ್ದು, ಶೇ. 1.7ಕ್ಕೆ ಕುಸಿದಿವೆ. ಹಿಂದಿನ ವರ್ಷದ ಇದೇ ತ್ತೈಮಾಸಿಕದಲ್ಲಿ ಇದು ಶೇ. 4.1ರಷ್ಟಿತ್ತು.
ಚೇತರಿಸಿಕೊಳ್ಳುತ್ತಿವೆ ಕಂಪೆನಿಗಳು: ರಾಯrರ್ಸ್ ಮೂಲಗಳ ಪ್ರಕಾರ ಜುಲೈ- ಸೆಪ್ಟಂಬರ್ ತ್ತೈಮಾಸಿಕದಲ್ಲಿ ನಿಫ್ಟಿ ಕಂಪೆನಿಗಳು ಅತ್ಯುತ್ತಮ ಸಾಧನೆ ತೋರಿವೆ. ಜಿಡಿಪಿ ಏರಿಕೆ ಕಂಡಿರುವುದು ಜಿಎಸ್‌ಟಿ ಹಾಗೂ ನೋಟು ಅಪಮೌಲ್ಯದಿಂದ ಉಂಟಾದ ಹೊಡೆತದಿಂದ ಕಂಪೆನಿಗಳು ಚೇತರಿಸಿಕೊಳ್ಳುತ್ತಿವೆ ಎಂಬುದರ ಸಂಕೇತ ವಾಗಿದೆ. ಮುಂದಿನ ತಿಂಗಳುಗಳಲ್ಲಿ ಜಿಡಿಪಿ ಇನ್ನಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ.
ಮೂಡೀಸ್ ಭವಿಷ್ಯ ನಿಜವಾಗುತ್ತಾ?: ಕೆಲವೇ ವಾರಗಳ ಹಿಂದೆ ಜಾಗತಿಕ ಆರ್ಥಿಕ ವಿಶ್ಲೇಷಣೆ ಸಂಸ್ಥೆ ಮೂಡೀಸ್ ಭಾರತದ ಆರ್ಥಿಕ ಶ್ರೇಣಿಯನ್ನು ಏರಿಕೆ ಮಾಡಿ, ಜಿಡಿಪಿ ಮುಂದಿನ ವಿತ್ತ ವರ್ಷದಲ್ಲಿ ಶೇ. 7.5ರ ದರದಲ್ಲಿ ಏರಿಕೆ ಕಾಣಲಿದೆ ಎಂದಿತ್ತು. ಈಗ ಜಿಡಿಪಿ ಏರುಗತಿ ಆರಂಭವಾಗಿದ್ದು, ಮೂಡೀಸ್ ನಿರೀಕ್ಷೆ ನಿಜವಾಗುವ ಸಾಧ್ಯತೆಯಿದೆ.
ವಿತ್ತೀಯ ಕೊರತೆಯಿಂದಾಗಿ ಷೇರು ಪೇಟೆಯಲ್ಲಿ ತಲ್ಲಣ: 2017-18ರ ಬಜೆಟ್‌ನಲ್ಲಿ ಅಂದಾಜು ಮಾಡಿದ ವಿತ್ತೀಯ ಕೊರತೆಯ ಶೇ. 96.1ರಷ್ಟು ಅಕ್ಟೋಬರ್‌ನಲ್ಲೇ ಪೂರೈಸಿರುವುದು ಗುರುವಾರ ಆರ್ಥಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿತ್ತು. ಒಂದೆಡೆ ವಿತ್ತೀಯ ಕೊರತೆ ಹೆಚ್ಚಾಗಿರುವುದು ಹಾಗೂ ಜಿಡಿಪಿ ವರದಿ ಮುನ್ಸೂಚನೆಯ ಹಿನ್ನೆಲೆಯಲ್ಲಿ ಷೇರುಪೇಟೆಯ ಕುಸಿತ ಕಂಡಿತು. ಸೆನ್ಸೆಕ್ಸ್ 185 ಅಂಕ ಕುಸಿತದಿಂದಲೇ ಆರಂಭವಾಗಿ ದಿನದ ಅಂತ್ಯಕ್ಕೆ 453 ಅಂಕ ಕುಸಿದಿತ್ತು. ಇನ್ನೊಂದೆಡೆ ನಿಫ್ಟಿ ಕೂಡ 134.75 ಅಂಕ ಕುಸಿದಿದ್ದು, 10,226ಗೆ ಇಳಿಕೆ ಕಂಡಿದೆ.
ಶೇ. 7-8ರ ದರದಲ್ಲಿ ಜಿಡಿಪಿ ಅಭಿವೃದ್ಧಿ ನಿರೀಕ್ಷೆ; ಜೇಟಿÉ: ದೇಶ ಶೇ. 7-8ರ ದರದಲ್ಲಿ ಸ್ಥಿರವಾಗಿ ಅಭಿವೃದ್ಧಿಯಾಗಲಿದೆ ಎಂದು ವಿತ್ತ ಸಚಿವ ಅರುಣ್ ಜೇಟಿÉ ಹೇಳಿದ್ದಾರೆ. ಇಳಿಕೆಯಾದರೂ ಶೇ. 7 ಕ್ಕಿಂತ ಕಡಿಮೆಯಾಗದು. ಅಲ್ಲದೆ ಶೇ. 10ಕ್ಕಿಂತ ಹೆಚ್ಚಿನ ವೇಗದಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸುವುದು ನಮ್ಮ ಸವಾಲು ಎಂದಿದ್ದಾರೆ. ಈಗಾಗಲೇ 2.5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದೆ. ದೇಶ ಎರಡಂಕಿ ಹಣದುಬ್ಬರದಿಂದ ಹೊರಬಂದಿದೆ. ನಮ್ಮ ಚಾಲ್ತಿ ಖಾತೆ ವಿತ್ತೀಯ ಕೊರತೆಯನ್ನು ನಿಯಂತ್ರಿಸಿದ್ದೇವೆ ಎಂದು ಜೇಟಿÉ ಹೇಳಿದ್ದಾರೆ.
ತಲೆ ಹೋದರೂ ಸರಿ ಬೇನಾಮಿ ಆಸ್ತಿದಾರರ ಬಿಡಲ್ಲ!
ಹೊಸದಿಲ್ಲಿ, ನ. 30: “ರಾಜಕೀಯವಾಗಿ ಬೆಲೆ ತೆತ್ತರೂ ಸರಿ, ಬೇನಾಮಿ ಆಸ್ತಿಯನ್ನು ನಿಯಂತ್ರಿಸಿಯೇ ತೀರುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಕಪ್ಪು ಹಣದ ವಿರುದ್ಧ ಹೋರಾಟ ಮುಂದು ವರಿಯುತ್ತದೆ. ಆಧಾರ್ ಅನ್ನು ಬಳಸಿಕೊಂಡು ಬೇನಾಮಿ ಆಸ್ತಿ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹಿಂದುಸ್ಥಾನ್ ಟೈಮ್ಸ್ ನಡೆಸಿದ ಲೀಡರ್‌ಶಿಪ್ ಸಮ್ಮೇಳನದಲ್ಲಿ ಹೇಳಿದ್ದಾರೆ.
ದೇಶದಲ್ಲಿ ಬದಲಾವಣೆ ತಂದದ್ದಕ್ಕಾಗಿ ರಾಜಕೀಯವಾಗಿ ಬೆಲೆ ತೆರಲೂ ತಯಾರಿದ್ದೇನೆ. ನಾನು ಅಧಿಕಾರ ವಹಿಸಿಕೊಂಡಾಗ ದೇಶದ ಆರ್ಥಿಕತೆ, ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಆಡಳಿತ ಹತಾಶ ಸ್ಥಿತಿಯಲ್ಲಿತ್ತು. ಆದರೆ ನಾವು ಸನ್ನಿವೇಶ ವನ್ನು ಬದಲಿಸಿದ್ದೇವೆ. ಜಗತ್ತೇ ಭಾರತವನ್ನು ತಲೆಯೆತ್ತಿ ನೋಡುವಂತಾಗಿದೆ ಎಂದರು.
ನೋಟು ಅಪಮೌಲ್ಯದಿಂದಾಗಿ ಕಪ್ಪು ಹಣ ಹುಟ್ಟಿಕೊಳ್ಳುವ ಪ್ರಮಾಣ ಕಡಿಮೆಯಾಗಿದೆ. ನಮ್ಮ ಮೊದಲ ಆದ್ಯತೆಯೇ ಪಾರದರ್ಶಕತೆ. ಎಲ್ಲ ಹಣಕಾಸು ವಹಿವಾಟುಗಳಿಗೂ ತಾಂತ್ರಿಕ ಮತ್ತು ಡಿಜಿಟಲ್ ಮುದ್ರೆ ಬಿದ್ದಾಗ ದೇಶದಲ್ಲಿ ಭ್ರಷ್ಟಾಚಾರ ನಿವಾರಣೆಯಾಗುತ್ತದೆ. ನೋಟು ಅಪಮೌಲ್ಯಕ್ಕೂ ಮೊದಲು ಕಪ್ಪು ಹಣದಿಂದಾಗಿ ಪರ್ಯಾಯ ಆರ್ಥಿಕತೆ ರೂಪುಗೊಂಡಿತ್ತು. ಇದನ್ನು ನಾವು ಈಗ ಮುಖ್ಯವಾಹಿನಿಗೆ ತಂದಿದ್ದೇವೆ ಎಂದಿದ್ದಾರೆ.
ಧನಾತ್ಮಕ ಮನೋಭಾವ ಬೆಳೆಸಿ: ಋಣಾತ್ಮಕ ಸುದ್ದಿಗಳ ಬದಲಿಗೆ ದೇಶದ ಯಶಸ್ಸಿನ ಕಥೆ ಗಳನ್ನು ಪ್ರಸಾರ ಮಾಡಿ ಎಂದು ಪ್ರಧಾನಿ ಮೋದಿ ಮಾಧ್ಯಮಗಳಿಗೆ ಕರೆ ನೀಡಿದ್ದಾರೆ. ನಮ್ಮ ಮಾಧ್ಯಮ ಯಾಕಿಷ್ಟು ಋಣಾತ್ಮಕವಾಗಿದೆ? ನಮ್ಮ ಸಾಮರ್ಥ್ಯದ ಬಗ್ಗೆ ನಾವು ಯಾಕೆ ಇಷ್ಟು ಹತಾಶಭಾವ ಹೊಂದಿದ್ದೇವೆ? ಯಶಸ್ಸಿನ ಕಥೆಗಳು ಹಲವಾರಿವೆ. ಅವುಗಳನ್ನು ನಾವು ಜನರಿಗೆ ತಲುಪಿಸೋಣ ಎಂದು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿದ್ದನ್ನು ಮೋದಿ ಈ ವೇಳೆ ಸ್ಮರಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರನ್ನು ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ