![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 24, 2019, 5:20 AM IST
ಹೊಸದಿಲ್ಲಿ: ದೇಶದಲ್ಲಿ ಶಿಶು ಲಿಂಗಾನುಪಾತ ನಾಲ್ಕು ವರ್ಷಗಳಲ್ಲಿ ಗಮನಾರ್ಹ ಏರಿಕೆ ಕಂಡಿದೆ. 2015-16ರಲ್ಲಿ ಸಾವಿರಕ್ಕೆ 923ರಿಂದ 2019 ಮಾರ್ಚ್ ವೇಳೆಗೆ 931ಕ್ಕೆ ಏರಿಕೆಯಾಗಿದೆ.
ಇದೇ ವೇಳೆ ಕರ್ನಾಟಕದ ಲಿಂಗಾನುಪಾತವೂ ಕೂಡ 943ರಿಂದ 945ಕ್ಕೆ ಏರಿಕೆಯಾಗಿದೆ. ಇತ್ತೀಚೆಗೆ ಬೇಟಿ ಪಢಾವೋ ಬೇಟಿ ಬಚಾವೋ ಆಂದೋಲನದ ಅಡಿಯಲ್ಲಿ ಲಿಂಗಾನುಪಾತದ ಸ್ಥಿತಿಗತಿಯ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮತಿ ಇರಾನಿ ನೀಡಿದ ಲಿಖೀತ ಉತ್ತರದಲ್ಲಿ ಈ ವಿವರಗಳನ್ನು ನೀಡಲಾಗಿದೆ.
ಕೇರಳ ಮತ್ತು ಛತ್ತೀಸ್‌ಗಢದ ಸ್ಥಿತಿ ಉತ್ತಮವಾಗಿದ್ದು, ಈ ರಾಜ್ಯಗಳಲ್ಲಿ ಲಿಂಗಾನುಪಾತ 959 ಇದೆ. ಮಿಜೋರಾಂ (958), ಗೋವಾ (954) ಅನಂತರದ ಸ್ಥಾನದಲ್ಲಿವೆ. ಆದರೆ ದಾಮನ್ ಮತ್ತು ದಿಯು (889), ಲಕ್ಷದ್ವೀಪ (891) ಮತ್ತು ಪಂಜಾಬ್ (900) ಪಟ್ಟಿಯಲ್ಲಿ ಕೊನೆಯಲ್ಲಿದೆ. ದೇಶದ ಲಿಂಗಾನುಪಾತ 2016-17ರಲ್ಲಿ 926, 2017-18ರಲ್ಲಿ 929ರಲ್ಲಿತ್ತು.
2017-18ಕ್ಕೆ ಹೋಲಿಸಿದರೆ 21 ರಾಜ್ಯಗಳ ಲಿಂಗಾನುಪಾತ ಭಾರೀ ಏರಿಕೆ ಕಂಡಿದೆ. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಅಂಡಮಾನ್ ನಿಕೋಬಾರ್ ಈ ಅವಧಿಯಲ್ಲಿ 897ರಿಂದ 948ಕ್ಕೆ ಏರಿಕೆ ಕಂಡಿದೆ. ಸಿಕ್ಕಿಂ ಹಾಗೂ ತೆಲಂಗಾಣ ಕೂಡ ಮಹತ್ವದ ಸಾಧನೆ ಮಾಡಿದೆ. ಆದರೆ 12 ರಾಜ್ಯಗಳು 2017-18ಕ್ಕೆ ಹೋಲಿಸಿದರೆ ಭಾರೀ ಇಳಿಕೆ ಕಂಡಿವೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.