ಯುಪಿ:ನಮಸ್ಕಾರ ಸ್ವೀಕರಿಸದ ಜರ್ಮನ್ ಪ್ರಜೆಗೆ ಥಳಿತ
Team Udayavani, Nov 5, 2017, 10:13 AM IST
ಲಕ್ನೋ: ತಾನು ನೀಡಿದ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಜರ್ಮನ್ ಪ್ರಜೆಯೊಬ್ಬರಿಗೆ ಥಳಿಸಿದ ಘಟನೆ ಉತ್ತರ ಪ್ರದೇಶದ ಸೋನ್‌ಭದ್ರಾದ ರೈಲು ನಿಲ್ದಾಣದಲ್ಲಿ ನಡೆದಿದೆ.
ವರದಿಯಾದಂತೆ ಅಗೋರಿಗೆ ಪ್ರಯಾಣಿಸಲು ರೈಲಿಗಾಗಿ ಕಾಯುತ್ತಿದ್ದ ಬರ್ಲಿನ್ ಮೂಲದ ಹೋಲ್ಗರ್ ಎರಿಕ್ ಎನ್ನುವ ವ್ಯಕ್ತಿಗೆ ಅಮನ್ ಕುಮಾರ್ ಎಂಬ ಎಲೆಕ್ಟ್ರೀಷಿಯನ್ ನಮಸ್ಕಾರ ನೀಡಿ ಸ್ವಾಗತ ಕೋರಿದ್ದು, ಅದಕ್ಕೆ ಎರಿಕ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲಎನ್ನಲಾಗಿದ್ದು, ಇದರಿಂದ ಕುಪಿತನಾದ ಅಮನ್ ಎರಿಕ್‌ರನ್ನು ನೆಲಕ್ಕೆ ಬೀಳಿಸಿ ಹಿಗ್ಗಾಮುಗ್ಗಾ ಥಳಿಸಿರುವುದಾಗಿ ದೂರಿನಲ್ಲಿ ಹೇಳಿಕೊಳ್ಳಲಾಗಿದೆ.
ಘಟನೆ ನಡೆದ ತಕ್ಷಣ ಆರೋಪಿ ಅಮನ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.
ಆದರೆ ದೂರನ್ನು ನಿರಾಕರಿಸಿರುವಆರೋಪಿ ಅಮನ್ ‘ನಾನು ಮುಗ್ಧ, ಎರಿಕ್‌ಗೆ ವೆಲ್‌ಕಮ್ ಟು ಇಂಡಿಯಾ ಎಂದು ಸ್ವಾಗತಕೋರಿದ್ದು ಅದಕ್ಕೆ ಆತ ಉದ್ಧಟತನ ತೋರಿ ನನಗೆ ಹೊಡೆದು, ಉಗಿದಿದ್ದಾನೆ’ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.
ಆಗ್ರಾದಲ್ಲಿ ಸ್ವಿಟ್ಜರ್‌ಲ್ಯಾಂಡ್ ಮೂಲದ ಪ್ರೇಮಿಗಳ ಮೇಲೆ ನಡೆದ ಗುಂಪು ದಾಳಿಯ ಬೆನ್ನಲ್ಲೇ ವಿದೇಶಿ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.