ನವದೆಹಲಿಯಲ್ಲಿ ಶೀಘ್ರವೇ ತಲೆಯೆತ್ತಲಿದೆ “ಭಾರತ ದರ್ಶನ ಪಾರ್ಕ್’
ಜನಪ್ರಿಯ ಸ್ಥಳಗಳ ಪ್ರತಿಕೃತಿ ಇರುವ "ಭಾರತ ದರ್ಶನ ಪಾರ್ಕ್'
Team Udayavani, Jan 4, 2020, 7:06 PM IST
ನವದೆಹಲಿ: ತ್ಯಾಜ್ಯ ವಸ್ತುಗಳಿಂದ ಅತ್ಯುತ್ಕೃಷ್ಟ ಪಾರ್ಕ್ ನಿರ್ಮಾಣಗೊಂಡಿರುವ ನವದೆಹಲಿಯಲ್ಲಿ ಶೀಘ್ರವೇ “ಭಾರತ ದರ್ಶನ ಪಾರ್ಕ್’ ತಲೆಯೆತ್ತಲಿದೆ. ಅದರಲ್ಲಿ ಮೈಸೂರು ಅರಮನೆ, ಒಡಿಶಾದ ಕೊನಾರ್ಕ್ ದೇಗುಲ, ಹೈದರಾಬಾದ್‌ನ ಚಾರ್‌ಮಿನಾರ್, ಮುಂಬೈನ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ಸೇರಿದಂತೆ ಐತಿಹಾಸಿಕ ಮತ್ತು ಜನಪ್ರಿಯ ತಾಣಗಳ ಪ್ರತಿಕೃತಿ ನಿರ್ಮಾಣವಾಗಲಿದೆ. ವೈವಿಧ್ಯತೆಯಲ್ಲಿ ಏಕತೆ ಎಂಬ ಧ್ಯೇಯ ವಾಕ್ಯದ ಅಡಿ ಹೊಸ ಯೋಜನೆ ಅನುಷ್ಠಾನಗೊಳ್ಳಲಿದೆ.
ಈ ಯೋಜನೆಗೆ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದ್ದಾರೆ. ಒಟ್ಟು 6 ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣವಾಗಲಿದೆ ಎಂದು ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ಆಯುಕ್ತ ಜ್ಞಾನೇಶ್ ಭಾರತಿ ತಿಳಿಸಿದ್ದಾರೆ. ಬಳಕೆ ಮಾಡಲು ಸಾಧ್ಯವಾಗದ ಲೋಹದ ತುಂಡುಗಳಿಂದ ಪ್ರತಿಕೃತಿ ನಿರ್ಮಿಸಲಾಗುತ್ತದೆ. ಈ ಯೋಜನೆ ಮೂಲಕ ತ್ಯಾಜ್ಯ ವಸ್ತುಗಳಿಂದ ಅತ್ಯಂತ ಉಪಯುಕ್ತ ವಸ್ತುಗಳನ್ನು ನಿರ್ಮಾಣ ಮಾಡುವ ವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
18-20 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. “ವೇಸ್ಟ್ ಟು ವಂಡರ್ ಪಾರ್ಕ್’ನಲ್ಲಿ ವಿಶ್ವದ 7 ಅದ್ಭುತಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಹೊಸ ಯೋಜನೆಗಾಗಿ ವಾಹನಗಳ ಬಿಡಿ ಭಾಗಗಳು, ಫ್ಯಾನ್, ರಾಡ್, ಕಬ್ಬಿಣದ ತಗಡು, ನಟ್ ಮತ್ತು ಬೋಲ್ಟ್‌ಗಳನ್ನು ಬಳಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.