ಬಾಲಕಿಗೆ ಲಿಕ್ಕರ್ ಕುಡಿಸಿ ಲೈಂಗಿಕ ದೌರ್ಜನ್ಯ, ಇಬ್ಬರು ಅರೆಸ್ಟ್
Team Udayavani, Oct 20, 2018, 3:58 PM IST
ಲಖೀಸರಾಯ್, ಬಿಹಾರ : ಅಪ್ರಾಪ್ತ ವಯಸ್ಸಿನ ಹುಡುಗಿಗೆ ಬಲವಂತದಿಂದ ಲಿಕ್ಕರ್ ಕುಡಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಆಕೆಯ ಓರ್ವ ಸ್ನೇಹಿತ ಮತ್ತು 35ರ ಹರೆಯದ ಇನ್ನೊಬ್ಬ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
35ರ ಹರೆಯದ ಬಂಧಿತ ವಿನೋದ್ ಕುಮಾರ್ ಎಂಬಾತನ ವಿರುದ್ಧ ಪೊಲೀಸರು ಪೋಕ್‌ಸೋ ಕಾಯಿದೆಯಡಿ ಕೇಸು ದಾಖಲಿಸಿಕೊಂಡಿದ್ದಾರೆ. ಹುಡುಗಿಯ ಸ್ನೇಹಿತನ ವಿರುದ್ಧವೂ ಕೇಸು ದಾಖಲಾಗಿದೆ. ಸ್ನೇಹಿತನು ತನ್ನನ್ನು ದೌರ್ಜನ್ಯ ತಾಣಕ್ಕೆ ಕರೆದೊಯ್ದು ತನಗೆ ಬಲವಂತದಿಂದ ಮದ್ಯ ಕುಡಿಸಿದನೆಂದು ಹುಡುಗಿಯು ಹೇಳಿದ್ದಾಳೆ.
ದುರ್ಗಾ ಪೂಜೋತ್ಸವವನ್ನು ಕಾಣಲು ಹುಡುಗಿಯು ಗುರುವಾರ-ಶುಕ್ರವಾರ ರಾತ್ರಿ ಹೋಗಿದ್ದಾಗ ಈ ಘಟನೆ ನಡೆದಿದೆ. ಬಿಹಾರದಲ್ಲಿ ಮದ್ಯ ಸೇವನೆ ಮತ್ತು ಮಾರಾಟ ಎರಡನ್ನೂ 2016ರ ಎಪ್ರಿಲ್‌ನಿಂದ ಸಿಎಂ ನಿತೀಶ್ ಕುಮಾರ್ ಸರಕಾರ ಸಂಪೂರ್ಣವಾಗಿ ನಿಷೇಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS ಮೋಹನ್ ಭಾಗವತ್ ದೇಶದ್ರೋಹದ ಹೇಳಿಕೆ ನೀಡಿದ್ದಾರೆ: ರಾಹುಲ್ ಗಾಂಧಿ ಕಿಡಿ
BJP ನಾಯಕನಿಂದ ಪಕ್ಷದ ಕಾರ್ಯಕರ್ತೆಯ ಅತ್ಯಾಚಾ*ರ;ಬಂಧನ,ಪಕ್ಷದಿಂದ ಉಚ್ಚಾಟನೆ
PoK ಇಲ್ಲದೆ ಜಮ್ಮು ಮತ್ತು ಕಾಶ್ಮೀರವು ಅಪೂರ್ಣ: ಪಾಕ್ ಗೆ ರಾಜನಾಥ್ ಎಚ್ಚರಿಕೆ
Delhi-NCR; ಶೂನ್ಯ ಗೋಚರತೆ: ವಿಮಾನಗಳು, ರೈಲು ಸೇವೆಗಳ ಮೇಲೆ ಪರಿಣಾಮ
Indira Gandhi Bhavan: ಕಾಂಗ್ರೆಸ್ ಪ್ರಧಾನ ಕಚೇರಿಗೆ ಇಂದಿನಿಂದ ಹೊಸ ವಿಳಾಸ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.